ಜೋಗಿಬೆಟ್ಟು: ಮಾ.9ರಿಂದ ರಿಫಾಯಿ ಜುಮಾ ಮಸೀದಿಯಲ್ಲಿ ಕಥಾಪ್ರಸಂಗ, ರಾತೀಬ್ ಮಜ್ಲಿಸ್

ಉಪ್ಪಿನಂಗಡಿ : ರಿಫಾಯಿ ಜುಮಾ ಮಸೀದಿ ಜೋಗಿಬೆಟ್ಟು ನಲ್ಲಿ ಮಾ.9ರಿಂದ ಕಥಾಪ್ರಸಂಗ ಮತ್ತು ರಿಫಾಯಿ ರಾತೀಬ್ ಮಜ್ಲಿಸ್ ನಡೆಯಲಿದೆ.
ಬುಧವಾರ ರಾತ್ರಿ ನಡೆಯುವ ಕಾರ್ಯಕ್ರಮವನ್ನು ಜೋಗಿಬೆಟ್ಟು ಖತೀಬ್ ಯುಕೆ ಖಲಂದರ್ ಮದನಿ ಅವರು ಉದ್ಘಾಟಿಸುವರು. ಡಿ.ಎಂ.ಎ ಕುಂಞಿ ಮತ್ತು ಸಂಗಡಿಗರು ಕಥಾಪ್ರಸಂಗ ನಡೆಸಲಿದ್ದಾರೆ. ಜಿಎಂ ಕುಂಞಿ ಜೋಗಿಬೆಟ್ಟು ಸ್ವಾಗತಿಸುವರು.
ಮಾ.10ರಂದು ರಾತ್ರಿ ನಡೆಯುವ ಕಾರ್ಯಕ್ರಮವನ್ನು ಯು ಕೆ ಖಲಂದರ್ ಮದನಿ ಉದ್ಘಾಟಿಸಲಿದ್ದಾರೆ. ಡಿ.ಎಂ.ಎ ಕುಂಞಿ ಮತ್ತು ಸಂಗಡಿಗರು ಕಥಾಪ್ರಸಂಗ ನಡೆಸಲಿದ್ದಾರೆ. ಝುಬೈರ್ ಪಿಲಿಗೂಡು ಅವರು ಸ್ವಾಗತಿಸಲಿದ್ದಾರೆ.
ಶನಿವಾರ ಮಗ್ರಿಬ್ ನಮಾಝಿನ ಬಳಿಕ ಬೃಹತ್ ರಿಫಾಯಿ ರಾತೀಬ್ ಮಜ್ಲಿಸ್ ನಡೆಯಲಿದ್ದು, ಅಸ್ಸಯ್ಯದ್ ನೂರುಲ್ ಜಲಾಲಿಯ ಅಲ್ ಹಾಜ್ ಅಸ್ಸಯ್ಯದ್ ಮೊಹಮ್ಮದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ನೇತೃತ್ವ ವಹಿಸಲಿದ್ದಾರೆ.
ಅಲ್ ಹಾಜ್ ಒಕೆ ಸಯೀದ್ ಮುಸ್ಲಿಯಾರ್, ಜೋಗಿಬೆಟ್ಟು ಕಾರ್ಯಕ್ರಮವನ್ನು ಉದ್ಘಾಟನೆ ಮಾಡುವರು. ಯುಕೆ ಖಲಂದರ್ ಮದನಿ ಅಧ್ಯಕ್ಷತೆ ವಹಿಸುವರು. ಸಯ್ಯದ್ ಅಹಮದ್ ಮುಕ್ತಾರ್ ತಂಙಳ್ ಕುಂಬೋಳ್ ಸ್ವಾಗತಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ರಿಫಾಯೀ ಜುಮಾ ಮಸ್ಜಿದ್ ಜೋಗಿಬೆಟ್ಟು ಆಶ್ರಯದಲ್ಲಿ ನಡೆಯುವ ಕಥಾ ಪ್ರಸಂಗ ಹಾಗೂ ಬೃಹತ್ ರಿಫಾಯೀ ರಾತೀಬ್ ಕಾರ್ಯಕ್ರಮಗಳಿಗೆ ರಿಫಾಯಿ ಜುಮಾ ಮಸ್ಜಿದ್ ಅಧ್ಯಕ್ಷರಾದ ಹಾಜಿ ಝಾಕಿರ್ ಹುಸೈನ್ ಅಧಿಕೃತ ಚಾಲನೆ ನೀಡಿದರು.
ಖತೀಬ್ ಉಸ್ತಾದ್ ಹಾಜಿ ಕಲಂದರ್ ಮದನಿ ದುಆ ಅಶರ್ವಚನ ನೆರವೇರಿಸಿದರು.







