ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿಯ ನಿಯೋಗ ಡಿಸಿಪಿ ಭೇಟಿ

ಮಂಗಳೂರು, ಮಾ.9: ಹೆಜಮಾಡಿ ಟೋಲ್ಗೇಟ್‌ನಿಂದ ಸುರತ್ಕಲ್ ಟೋಲ್ಗೇಟ್‌ವರಗೆ ಮಾ.15ರಂದು ನಡೆಯಲಿರುವ ಪಾದಯಾತ್ರೆಯ ಕುರಿತು ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿಯ ನಿಯೋಗವು ಮಂಗಳೂರು ಡಿಸಿಪಿ ಹರಿರಾಂ ಶಂಕರ್ ಅವರನ್ನು ಬುದವಾರ ಭೇಟಿ ಮಾಡಿ ಚರ್ಚಿಸಿತು.
ಮಾಜಿ ಸಚಿವ ಅಭಯಚಂದ್ರ ಜೈನ್, ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ, ದಲಿತ ನಾಯಕ ಎಂ. ದೇವದಾಸ್, ಮಾಜಿ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಮುಲ್ಕಿ ತಾಲೂಕು ಅಭಿವೃದ್ದಿ ಸಮಿತಿಯ ಇಕ್ಬಾಲ್ ಮುಲ್ಕಿ, ಟ್ಯಾಕ್ಸಿಮೆನ್ ಎಸೋಸಿಯೇಶನ್‌ನ ದ.ಕ.ಜಿಲ್ಲಾಧ್ಯಕ್ಷ ದಿನೇಶ್ ಕುಂಪಲ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ರಘು ಎಕ್ಕಾರು, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ನಿಯೋಗದಲ್ಲಿದ್ದರು.
Next Story