ಮಂಗಳೂರು: ವಿವಾಹಿತ ನಾಪತ್ತೆ

ಮಂಗಳೂರು, ಮಾ.9: ನಗರದ ಬಂದರ್‌ನ ಕೋಳಿ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ನಿಝಾಮುದ್ದೀನ್ ಕೆ.ಟಿ (29) ಎಂಬವರು ಫೆ.25ರಿಂದ ಕಾಣೆಯಾದ ಬಗ್ಗೆ ಅವರ ಪತ್ನಿ ಕೈರುನ್ನಿಸಾ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಿಝಾಮುದ್ದೀನ್ ಕಳೆದ 5 ತಿಂಗಳಿನಿಂದ ಕೋಳಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಫೆ.25ರಂದು ಬೆಳಗ್ಗೆ 7 ಗಂಟೆಗೆ ಮನೆಯಿಂದ ಕೆಲಸಕ್ಕೆ ಹೊರಟಿದ್ದು, ಬಳಿಕ ಈವರೆಗೂ ಮರಳಿ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಿಝಾಮುದ್ದೀನ್ ಕೆಲಸಕ್ಕೆ ಹೋದರೆ ಕೆಲವೊಮ್ಮೆ ವಾರದ ಬಳಿಕ ಮನೆಗೆ ಬರುವುದುಂಟು. ಫೆ.25ರಂದು ಕೆಲಸಕ್ಕೆ ಹೋದವರು 10 ದಿನವಾದರೂ ಮರಳಿ ಬರಲಿಲ್ಲ. ಮೊಬೈಲ್‌ಗೆ ಕರೆ ಮಾಡಿದರೂ ಅದು ಸ್ವಿಚ್ಡ್ ಆಫ್ ಆಗಿತ್ತು. ಬಂದರ್ ಪರಿಸರದಲ್ಲಿ ಹುಡುಕಾಡಿದರೂ ಪತ್ತೆಯಾಗದ ಕಾರಣ ಪತ್ತೆ ಹಚ್ಚಿ ಕೊಡುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.
5 ಅಡಿ ಎತ್ತರದ ಕಪ್ಪು ಮೈಬಣ್ಣದ ಇವರ ಮುಖದ ಬಲ ಕಣ್ಣಿನ ಕೆಳಗಡೆ ಮಚ್ಚೆ ಇದೆ. ಮನೆಯಿಂದ ಹೊರಟು ಹೋದಾಗ ಹಳದಿ ಬಣ್ಣದ ಟೀಶರ್ಟ್, ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ. ತುಳು, ಕನ್ನಡ, ಮಲಯಾಳಂ, ಹಿಂದಿ ಭಾಷೆ ಮಾತನಾಡುತ್ತಾರೆ.
ಇವರನ್ನು ಕಂಡವರು ದೂ.ಸಂ: 0824-2220516/0824-2220500, ಮೊ.ಸಂ: 9480805339/ 9480805346ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.





