Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ​EVM ಬಗ್ಗೆ ಯಾವ ಪಕ್ಷಕ್ಕೂ...

​EVM ಬಗ್ಗೆ ಯಾವ ಪಕ್ಷಕ್ಕೂ ವಿಶ್ವಾಸವಿಲ್ಲ, ಆದರೆ ಯಾವ ಪಕ್ಷವೂ ಅದನ್ನು ವಿರೋಧಿಸುವುದಿಲ್ಲ !

ರವೀಶ್ ಕುಮಾರ್ರವೀಶ್ ಕುಮಾರ್9 March 2022 10:44 PM IST
share
​EVM ಬಗ್ಗೆ ಯಾವ ಪಕ್ಷಕ್ಕೂ ವಿಶ್ವಾಸವಿಲ್ಲ, ಆದರೆ ಯಾವ ಪಕ್ಷವೂ ಅದನ್ನು ವಿರೋಧಿಸುವುದಿಲ್ಲ !

2009 ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಬಳಿಕ ಬಿಜೆಪಿ ಪ್ರಧಾನ ಮಂತ್ರಿ ಅಭ್ಯರ್ಥಿ ಅಡ್ವಾಣಿ ಅವರು EVM ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದರು. ಆಮೇಲೆ ಅಡ್ವಾಣಿ ನಿಧಾನವಾಗಿ ತಮ್ಮ ಪಕ್ಷದಲ್ಲೇ ಸೈಡ್ ಲೈನ್ ಆದರು. 

ಇನ್ನು ಸಂಘದ ಬುದ್ಧಿಜೀವಿ ಇಲೆಕ್ಷನ್ ಅನಲಿಸ್ಟ್ ಜಿವಿಎಲ್ ನರಸಿಂಹ ರಾವ್ ಅವರು 2010 ರಲ್ಲಿ  EVM   ಬಳಕೆಯ ವಿರುದ್ಧ ಒಂದು ಪುಸ್ತಕವನ್ನೇ ಬರೆದರು. ಅದನ್ನು ಆಗಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರೇ ಬಿಡುಗಡೆ ಮಾಡಿದರು. ಆಮೇಲೆ ಸಂಘದ ಸಂಪೂರ್ಣ ಬೆಂಬಲ ಹಾಗು ಪ್ರಯತ್ನದ ಹೊರತಾಗಿಯೂ ಗಡ್ಕರಿಗೆ ಬಿಜೆಪಿ ಅಧ್ಯಕ್ಷರಾಗಿ ಇನ್ನೊಂದು ಅವಧಿ ಸಿಗಲಿಲ್ಲ. ಅದಕ್ಕೆ ಕಾರಣ ಬೇರೆ ಏನನ್ನೋ ನೀಡಲಾಯಿತು. ​

2017 ರಲ್ಲಿ ಪಂಜಾಬ್ ಚುನಾವಣೆಯ ಬಳಿಕ ಆಮ್ ಆದ್ಮಿ ಪಕ್ಷ  EVM   ಬಗ್ಗೆ ಪ್ರಶ್ನೆ ಎತ್ತಿತು. ಪಕ್ಷದ ಶಾಸಕ ಸೌರಭ್ ಭಾರದ್ವಾಜ್ ಅವರು ವಿಧಾನ ಸಭಾ ಅಧಿವೇಶನದಲ್ಲೇ  EVM   ಅನ್ನು ಹ್ಯಾಕ್ ಮಾಡಿ ತೋರಿಸಿದರು. ಯಾವುದೇ ಚುನಾವಣೆಯ ಎರಡು ಗಂಟೆಗಳ ಮೊದಲು ನಮಗೆ ಎಲ್ಲ  EVM   ಕೊಟ್ಟರೆ ವಿಧಾನಸಭೆ ಬಿಡಿ ಒಂದು ಬೂತ್ ಕೂಡ ಗೆಲ್ಲಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದರು. ಆಮೇಲೆ ಅದೇನಾಯಿತೋ ಗೊತ್ತಿಲ್ಲ, ಸೌರಭ್ ಭಾರದ್ವಾಜ್ ಮತ್ತೆಂದೂ  EVM   ಬಗ್ಗೆ ಚಕಾರ ಎತ್ತಲೇ ಇಲ್ಲ.  

ಇದಾದ ಮೇಲೆ ಚುನಾವಣಾ ಆಯೋಗ ಒಂದು ಹ್ಯಾಕಥಾನ್ ಡ್ರಾಮಾ ಮಾಡಿಸಬೇಕಾಯಿತು. ಅದರಲ್ಲಿ ಯಾರಾದರೂ ಬಂದು  EVM   ಹ್ಯಾಕ್ ಮಾಡಿ ತೋರಿಸಿ ಎಂದು ಆಹ್ವಾನ ನೀಡಲಾಯಿತು.  EVM   ಅನ್ನು ಮುಟ್ಟದೆ ಅದನ್ನು ನೀವು ಹ್ಯಾಕ್ ಮಾಡಬೇಕು ಎಂದು ಬಹಳ ಸುಂದರ ಷರತ್ತನ್ನು ಚುನಾವಣಾ ಆಯೋಗ ವಿಧಿಸಿತ್ತು.  EVM   ಅನ್ನು ಯಾರಾದರೂ ಕಣ್ಸನ್ನೆಯಿಂದ ಸೆಟ್ ಮಾಡಲು ಸಾಧ್ಯವೇ ? ನೀವೇ ಹೇಳಿ ? ಈ ಶರತ್ತಿನಿಂದಾಗಿ ಯಾರೂ ಅದನ್ನು ಹ್ಯಾಕ್ ಮಾಡಲು ಆಗಲಿಲ್ಲ. ಹಾಗಾಗಿ  EVM   ಪರಿಶುದ್ಧ ಎಂದು ಘೋಷಿಸಲಾಯಿತು.  

ಸುಪ್ರೀಂ ಕೋರ್ಟ್ ಪ್ರತಿ  EVM   ನಲ್ಲಿ  VVPAT   ಹಾಕುವಂತೆ ಆದೇಶ ನೀಡಿತು. ಆಮೇಲೆ  VVPAT   ನಿಂದ ಪ್ರಿಂಟ್ ಬರುತ್ತಿತ್ತು ಆದರೆ ಅದನ್ನು ಎಣಿಸುತ್ತಿರಲಿಲ್ಲ. ಮತ್ತೆ ಯಾರೋ ಸುಪ್ರೀಂ ಕೋರ್ಟ್ ಹೋದರು. ಆಗ ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ಕನಿಷ್ಠ ಐದು ಬೂತ್ ಗಳ  VVPAT   ಪ್ರಿಂಟ್ ಔಟ್ ಅನ್ನು  EVM   ಲೆಕ್ಕದೊಂದಿಗೆ ತಾಳೆ ಹಾಕಬೇಕು ಎಂದು ಆದೇಶ ನೀಡಿತು. ಆದರೆ ಪ್ರತಿ ಚುನಾವಣೆಯಲ್ಲಿ ಆ ತಾಳೆ ಹಾಕುವುದೇ ಇಲ್ಲ ಅಥವಾ ಕೊನೆಯಲ್ಲಿ ಹಾಕಲಾಗುತ್ತದೆ. ಆಗ ಫಲಿತಾಂಶ ಸ್ಪಷ್ಟವಾಗಿ ಸರಕಾರ ಯಾರದ್ದು ಬರಲಿದೆ ಎಂಬುದು ಗೊತ್ತಾಗಿರುತ್ತದೆ. ಹಾಗಾಗಿ ಸೋಲುವ ಅಭ್ಯರ್ಥಿ ಅಧಿಕಾರಿಗಳ ಒತ್ತಡಕ್ಕೆ ಸುಮ್ಮನಾಗುತ್ತಾನೆ.  

2019 ರಲ್ಲಿ 370 ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳಲ್ಲಿ ಚಲಾವಣೆಯಾದ ಮತ ಹಾಗು ಲೆಕ್ಕಕ್ಕೆ ಸಿಕ್ಕಿದ ಮತಗಳು ತಾಳೆಯಾಗಲಿಲ್ಲ. ಇದರಿಂದ ದೊಡ್ಡ ಕೋಲಾಹಲವಾಯಿತು. ಚುನಾವಣಾ ಆಯೋಗ ತನ್ನ ವೆಬ್ ಸೈಟ್ ನಲ್ಲಿದ್ದ ಚಲಾವಣೆಯಾದ ಮತಗಳ ಲೆಕ್ಕವನ್ನೇ ತೆಗೆದುಹಾಕಿತು. ಉತ್ತರ ಪ್ರದೇಶದ ಬದಾಯುನ್ ಲೋಕಸಭಾ ಕ್ಷೇತ್ರದಲ್ಲಿ ಚಲಾವಣೆಯಾದ ಮತ ಹಾಗು ಲೆಕ್ಕ ಮಾಡಿದ ಮತಗಳ ನಡುವೆ 25 ಸಾವಿರಕ್ಕೂ ಹೆಚ್ಚು ಅಂತರವಿತ್ತು. ಈ ಬಗ್ಗೆ ಎಸ್ಪಿ ಅಭ್ಯರ್ಥಿ ಧರ್ಮೇಂದ್ರ ಯಾದವ್ ಹೈಕೋರ್ಟ್ ಮೆಟ್ಟಲೇರಿದರು. ಆದರೆ ಆಮೇಲೆ ಏನಾಯಿತು ಎಂದು ಯಾರಿಗೂ ಗೊತ್ತಿಲ್ಲ. ಧರ್ಮೇಂದ್ರ ಯಾದವ್ ಕೂಡ ಈ ಬಗ್ಗೆ ತುಟಿ ಬಿಚ್ಚಿಲ್ಲ. 

ಈಗ  EVM   ನ ಅತ್ಯಂತ ಕ್ಲಾಸಿಕ್ ಕೇಸು ಹೇಳುತ್ತೇನೆ ಕೇಳಿ. ಕೆಲವೇ ತಿಂಗಳುಗಳ ಹಿಂದೆ ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಹಾಗು ಕಾಂಗ್ರೆಸ್ ನಾಯಕ ನಾನಾ ಪಟೋಲೆ  ವಿಧಾನಸಭೆಯಲ್ಲಿ ಇವಿಎಂ ಕುರಿತ ಒಂದು ಮಸೂದೆ ಇಟ್ಟರು. ಅದರ ಪ್ರಕಾರ ಮಹಾರಾಷ್ಟ್ರದ ಯಾವುದೇ ಚುನಾವಣೆಯಲ್ಲಿ  EVM   ಬಳಸಬಾರದು ಎಂದಿತ್ತು. ಇನ್ನೇನು ಬಿಲ್ ಪಾಸಾಗಬೇಕು, ಅದಕ್ಕಿಂತ ಒಂದೇ ದಿನ ಮೊದಲು ಕಾಂಗ್ರೆಸ್ ಪಟೋಲೆ ಅವರನ್ನು ಪಕ್ಷದ ರಾಜ್ಯಾಧ್ಯಕ್ಷನಾಗಿ ಆಯ್ಕೆ ಮಾಡಿತು. ಅವರು ಸ್ಪೀಕರ್ ಹುದ್ದೆಗೆ ರಾಜೀನಾಮೆ ನೀಡಿದರು.  EVM   ಕುರಿತ ಮಸೂದೆ ಮತ್ತೆ ಏನಾಯಿತು ಎಂದು ಇವತ್ತಿಗೂ ಯಾರಿಗೂ ಗೊತ್ತಿಲ್ಲ.   
ಬಹುತೇಕ ಎಲ್ಲ ರಾಜಕೀಯ ಪಕ್ಷಗಳೂ  EVM   ನಿಂದಾಗಿ ನಿಷ್ಪಕ್ಷ ಚುನಾವಣೆ ಸಾಧ್ಯವಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತವೆ. ಆದರೆ, ಯಾವ ಪಕ್ಷವೂ ಅದನ್ನು ಬಹಿರಂಗವಾಗಿ ವಿರೋಧಿಸುವುದಿಲ್ಲ. ನಿಮಗೆ  EVM   ಮೇಲೆ ಭರವಸೆ ಇಲ್ಲDE ನೀವು ಮತದಾನದ ಬಳಿಕ ಇವಿಎಂ ಮೇಲೆ ನಿಗಾ ಇಟ್ಟುಕೊಂಡು ಕೂರಬೇಕಾಗುತ್ತದೆ.  EVM   ನಲ್ಲಿ ಯಾವ ಬಟನ್ ಒತ್ತಿದರೂ ಬಿಜೆಪಿಗೆ ಮತ ಹೋಗುತ್ತದೆ ಎಂಬ ದೂರುಗಳು ಬಂದರೂ,  EVM   ಬಿಜೆಪಿ ನಾಯಕರ ಹೋಟೆಲ್ ನಲ್ಲಿ ಪತ್ತೆಯಾದರೂ, ಯಾವುದೊ ಲಾರಿಯಲ್ಲಿ ಪತ್ತೆಯಾದರೂ ನೀವು  EVM   ಅನ್ನೇ ನೆಚ್ಚಿಕೊಂಡು ಚುನಾವಣೆಗೆ ಯಾಕೆ ಸ್ಪರ್ಧಿಸುತ್ತೀರಿ ?  EVM   ಬಗ್ಗೆ ಬಹಿರಂಗವಾಗಿ ಸ್ಪಷ್ಟವಾಗಿ ವಿರೋಧಿಸಲು ಆಗದಂತೆ ನಿಮ್ಮ ಮೇಲೆ ಅದ್ಯಾವ ಒತ್ತಡ ಇದೆ ?  

ಅಮೇರಿಕ, ಫ್ರಾನ್ಸ್, ಜಪಾನ್ ನಂತಹ ಅಭಿವೃದ್ಧಿ ಹೊಂದಿದ ದೇಶಗಳೂ ಬಳಸದ  EVM   ಅನ್ನೇ ಬಳಸುವಂತೆ ನಮ್ಮ ಮೇಲಿರುವ ಒತ್ತಡ ಯಾವುದು ? ಯಾರ ಒತ್ತಡ ಅದು ? ಕನಿಷ್ಠ ಇದು ದೇಶದೊಳಗೇ ಇರುವವರ ಒತ್ತಡವೇ ಅಥವಾ ದೇಶದ ಹೊರಗಿಂದ ಯಾರಾದರೂ ಇದೆಲ್ಲವನ್ನೂ ನಿಯಂತ್ರಿಸುತ್ತಿದ್ದಾರಾ ಎಂದಾದರೂ ಹೇಳಿಬಿಡಿ.  

ಟಿಪ್ಪಣಿ : ಪಶ್ಚಿಮ ಬಂಗಾಳದಲ್ಲಿ ಮಮತಾ ಗೆದ್ದರೂ, ಪಂಜಾಬ್ ನಲ್ಲಿ ಆಪ್ ಗೆದ್ದರೂ, ಯುಪಿಯಲ್ಲಿ ಎಸ್ಪಿ ಗೆದ್ದರೂ  EVM   ಮೇಲೆ ನಂಬಿಕೆ ಬೇಡ.  ಬಿಜೆಪಿ ಗೆಲುವು  ಸೋಲಿಗೂ ಇದಕ್ಕೂ ಸಂಬಂಧವೇ ಇಲ್ಲ. ಚುನಾವಣೆಯಲ್ಲಿ ಎಲ್ಲರಿಗೂ ಅರ್ಥವಾಗುವುದನ್ನೇ ಬಳಸಬೇಕು. ಇಂಜಿನಿಯರ್ ಗೆ ಮಾತ್ರ ಅರ್ಥವಾಗುವುದನ್ನು ಚುನಾವಣೆಯಲ್ಲಿ ಬಳಸಬಾರದು ಅಷ್ಟೇ.

share
ರವೀಶ್ ಕುಮಾರ್
ರವೀಶ್ ಕುಮಾರ್
Next Story
X