Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಶ್ರಮಜೀವಿಗಳ ಜೀವಪರ ಬರಹಗಾರ

ಶ್ರಮಜೀವಿಗಳ ಜೀವಪರ ಬರಹಗಾರ

ಡಾ. ರಾಜಪ್ಪದಳವಾಯಿಡಾ. ರಾಜಪ್ಪದಳವಾಯಿ10 March 2022 12:05 AM IST
share
ಶ್ರಮಜೀವಿಗಳ ಜೀವಪರ ಬರಹಗಾರ

‘ಬೆವರು ನನ್ನ ದೇವರು’ ದಿನಾಂಕ 12.3.2022ರಂದು ಬೆಂಗಳೂರಿನ ಗಾಂಧಿಭವನದಲ್ಲಿ ಬಿಡುಗಡೆಯಾಗುವ ಸಮಗ್ರ ಸಾಹಿತ್ಯ ಸಂಪುಟಗಳ ಹೆಸರು. 14 ಸಂಪುಟಗಳಲ್ಲಿ 5,256 ಪುಟಗಳಷ್ಟು ಸಾಹಿತ್ಯ ಒಂದು ಕಡೆ ಸಿಗುವ ಬರಗೂರು ರಾಮಚಂದ್ರಪ್ಪನವರ ಸಮಗ್ರ ಸಾಹಿತ್ಯ. ಅಭಿರುಚಿ ಪ್ರಕಾಶನ, ಮೈಸೂರು ಪ್ರಕಟಿಸಿರುವ ಈ ಸಂಪುಟಗಳು ಡಾ. ಬರಗೂರು ಪ್ರತಿಷ್ಠಾನದ ಸಹಕಾರದಿಂದ ಬಿಡುಗಡೆಯಾಗುತ್ತಿವೆ. ಈ ಸುಸಂದರ್ಭದಲ್ಲಿ ಬರಗೂರರ ಸಾಂಸ್ಕೃತಿಕ ಅಭಿವ್ಯಕ್ತಿಯನ್ನೂ ಅವಲೋಕಿಸುವ ಒಂದು ಚಿಕ್ಕ ಪ್ರಯತ್ನ ಇಲ್ಲಿದೆ. ಬರಗೂರರ ಬಗ್ಗೆ ಬರೆಯಲು ಬಹಳಷ್ಟಿದೆ. ‘ಸಂಸ್ಕೃತಿ ಮತ್ತು ಕ್ರಿಯಾಶೀಲತೆ’ ಎಂಬುದು ನನಗೆ ಮೊದಲು ಮುಖ್ಯವಾಗಿ ಮನಸ್ಸನ್ನು ಸೆಳೆದ ಕೃತಿ. ಅವರದು ಮೂಲತಃ ಬಹುಶಿಸ್ತೀಯ ವ್ಯಕ್ತಿತ್ವ. ಸಾಹಿತ್ಯದಲ್ಲಿ ಕವಿತೆ, ಸಣ್ಣಕತೆ, ಕಾದಂಬರಿ, ವಿಮರ್ಶೆ, ವೈಚಾರಿಕತೆಗಳು ಮುಖ್ಯವಾದರೆ ಸಿನೆಮಾದಲ್ಲಿ ಚಿತ್ರಕಥೆ, ಸಂಭಾಷಣೆಯನ್ನು ತಾವೇ ರಚಿಸುತ್ತಾರೆ. ಆ ಮೂಲಕವಾಗಿ ಕಥೆಯೊಂದನ್ನು ನಿರೂಪಿಸುತ್ತಾ ಹೋಗುತ್ತಾರೆ. ಪ್ರಸ್ತುತವಾದ ವಿಷಯಗಳನ್ನು ಕುರಿತು ಅಂಕಣ ಸಾಹಿತ್ಯವನ್ನು ಬರೆಯುತ್ತಾ ಬಂದಿದ್ದಾರೆ. ನಿರಂತರವಾದ ಬರವಣಿಗೆಯನ್ನು ಅವರಷ್ಟು ವ್ಯಾಪಕ ವಿಷಯಗಳಲ್ಲಿ ಬರೆಯುವವರು ಅಪರೂಪವೇ ಸರಿ. ಬರಗೂರರು ಮೂಲತಃ ಕನ್ನಡ ಸಾಹಿತ್ಯದ ವಿದ್ಯಾರ್ಥಿ. ವಿಜ್ಞಾನ ಕಲಿತು ನಂತರ ಸಾಹಿತ್ಯ ಓದಿದವರು. ಅವರೊಬ್ಬ ಅಪರೂಪದ ಕನ್ನಡ ಅಧ್ಯಾಪಕರು. ಓದು, ಬರಹ, ಚಿಂತನೆ-ಮೂರೂ ಏಕತ್ರಗೊಂಡ ವ್ಯಕ್ತಿತ್ವ. ಅನೇಕ ಸೂಕ್ಷ್ಮ ಒಳನೋಟಗಳನ್ನು ನಿರಂತರವಾಗಿ ಚಿಂತಿಸುತ್ತಲೇ ಇರುತ್ತಾರೆ. ವಿದ್ಯಾರ್ಥಿಗಳಿಗೆ ಹೊಸ ಚಿಂತನೆಯನ್ನು ಬೆಳೆಸುವ ನಿಟ್ಟಿನಲ್ಲಿ ಅವರು ಅಧ್ಯಾಪನ ಮಾಡಿದ್ದಾರೆ. ಅವರ ವಿದ್ಯಾರ್ಥಿಗಳ ಪರಂಪರೆ ದೊಡ್ಡದು. ಡಾ. ಡಿ.ಆರ್. ನಾಗರಾಜ್, ಡಾ. ಸಿದ್ದಲಿಂಗಯ್ಯ, ಕೆ.ಬಿ. ಸಿದ್ದಯ್ಯ ಮುಂತಾದವರ ಮೇಷ್ಟ್ರಾಗಿದ್ದವರು.

ಎಷ್ಟೋ ವಿದ್ಯಾರ್ಥಿಗಳ ಓದಿಗೆ, ಚಿಂತನೆಗೆ, ಉದ್ಯೋಗಾವಕಾಶಕ್ಕೆ ನಿರಂತರವಾಗಿ ಶ್ರಮಿಸುತ್ತಾ ಬಂದವರು. ಬಂಡಾಯ ಸಾಹಿತ್ಯ ಸಂಘಟನೆಯನ್ನು ಜತನ ಮಾಡಿಕೊಂಡು ಬಂದವರು. ಸಾಹಿತ್ಯ ಅಕಾಡಮಿ ಅಧ್ಯಕ್ಷರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ 1-10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಶೇ. 5 ಮೀಸಲಾತಿ ದೊರೆಯುವಂತೆ ಮಾಡಿದವರು. ಕನ್ನಡ ನಾಡಿನ ಸಾಕ್ಷಿ ಪ್ರಜ್ಞೆಯಾಗಿ ವಹಿಸಿಕೊಂಡ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿದವರು. ಎಲ್ಲಕ್ಕಿಂತ ವಿಶೇಷವೆಂದರೆ ಪ್ರಾಮಾಣಿಕರು. ಸಾರ್ವಜನಿಕ ಹಣದ ಬಗ್ಗೆ ಸದಾ ಜವಾಬ್ದಾರಿಯಿಂದ ಆಡಳಿತ ಮಾಡಿದವರು. ಸಾಹಿತ್ಯ ಅಕಾಡಮಿಯಿಂದ ಹೇಗೆ ಕೆಲಸ ಮಾಡಬೇಕೆಂಬುದನ್ನು ತೋರಿಸಿದವರು. ರಾಯಚೂರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು. ಎಲ್ಲಕ್ಕಿಂತ ಮಿಗಿಲಾಗಿ ಒಬ್ಬ ಪ್ರಜಾಪ್ರಭುತ್ವವಾದದ ಪ್ರತಿಪಾದಕರು. ಜಾತಿ ಮೀರಿ ಬದುಕಿದವರು.

ಅಸಂಖ್ಯಾತರಿಗೆ ಆದರ್ಶಪ್ರಾಯವಾದವರು. ಇವರಿಗೆ ಕನ್ನಡ ವಿಶ್ವವಿದ್ಯಾನಿಲಯದಿಂದ ‘ನಾಡೋಜ’ ಗೌರವ, ಕುವೆಂಪು ವಿಶ್ವವಿದ್ಯಾನಿಲಯ, ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯ, ತುಮಕೂರು ವಿಶ್ವವಿದ್ಯಾನಿಲಯಗಳು ಗೌರವ ಡಾಕ್ಟರೇಟ್ ನೀಡಿವೆ. ಅವರ ಪ್ರಮುಖ ಆಸಕ್ತಿಗಳೆಂದರೆ ಸಾಹಿತ್ಯ, ಸಂಸ್ಕೃತಿ, ಸಿನೆಮಾ, ಅಂತರ್‌ರಾಷ್ಟ್ರೀಯ ಅಧ್ಯಯನಗಳು, ರಾಜಕಾರಣ ಮುಂತಾದ ಕ್ಷೇತ್ರಗಳಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದಾರೆ. 2011ರಲ್ಲಿ ಪಂಪ ಪ್ರಶಸ್ತಿ, 2013ರಲ್ಲಿ ನೃಪತುಂಗ ಪ್ರಶಸ್ತಿ, 2015ರಲ್ಲಿ ಅನಕೃ ಪ್ರಶಸ್ತಿಗಳಿಗೆ ಭಾಜನರಾದ ಇವರು ಇದುವರೆಗೆ 6 ಕವನ ಸಂಕಲನ, 4 ಸಣ್ಣಕತೆಗಳ ಸಂಕಲನ, 13 ಕಾದಂಬರಿಗಳು, 17 ವಿಚಾರ ವಿಮರ್ಶೆ ಕೃತಿಗಳು, 2 ನಾಟಕಗಳು, 11 ಸಂಪಾದಿತ ಕೃತಿಗಳು, 21 ಚಲನಚಿತ್ರಗಳು-ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಇವರು ಸಾಮಾಜಿಕ ನ್ಯಾಯದ ಪ್ರತಿಪಾದಕರೂ ಕೂಡ.

ಬರಗೂರರೇ ಒಂದು ಸಂಸ್ಥೆಯಂತೆ. ಅನೇಕ ಆಯ್ಕೆ ಸಮಿತಿ, ಸರಕಾರದ ಮುಖ್ಯ ಜವಾಬ್ದಾರಿಗಳನ್ನು ನಿರ್ವಹಿಸಿದಂತೆ ಬಂಡಾಯ ಸಾಹಿತ್ಯ ಸಂಘಟನೆಯ ಮುಖ್ಯ ಚಾಲನಾ ಶಕ್ತಿಯಾಗಿ ಕೆಲಸ ಮಾಡುತ್ತಾರೆ. ಅವರೊಬ್ಬ ಒಳ್ಳೆಯ ಸಂಘಟಕರು. ಯೋಚಿಸುವುದು-ಯೋಜಿಸುವುದು-ಆಗು ಮಾಡುವುದರಲ್ಲಿ ಒಂದು ಕ್ರಮಬದ್ಧತೆ ಇರುತ್ತದೆ. ಪ್ರತಿಯೊಂದು ವಿಷಯದಲ್ಲೂ ಹೆಚ್ಚು ಎಚ್ಚರಿಕೆಯಿಂದ ಕೆಲಸ ಮಾಡುತ್ತಾರೆ. ಉದಾಸೀನ ಎಂಬುದು ಅವರಲ್ಲಿ ಯಾವ ವಿಷಯಕ್ಕೂ ನಾನಂತೂ ಕಂಡಿಲ್ಲ. ಎಲ್ಲಕ್ಕೂ ಮಿಗಿಲಾಗಿ ಅಂತಃಕರಣದ ಆರ್ದ್ರತೆ ಅವರ ನಿತ್ಯ ಪ್ರತಿಕ್ರಿಯೆ. ಬುದ್ಧಿ ಹೇಳಿದ್ದಕ್ಕಿಂತ ಹೃದಯ ಹೇಳಿದ್ದಕ್ಕೆ ಹೆಚ್ಚು ಸ್ಪಂದನೆ ಇರುವ ವ್ಯಕ್ತಿ ಅವರಾಗಿದ್ದಾರೆ. ಸಹಾಯವೆಂದು ಕೇಳಿಬಂದ ಯಾರೇ ಆದರೂ ಅವರಿಂದ ನಿರಾಸೆಗೊಂಡವರಿಲ್ಲ. ಸದಾ ಕಿರಿಯರ ಜೊತೆ ಹೊಸ ಸಮಾಜ ಕಟ್ಟುವುದೆಂದರೇನೆಂದು ಬದುಕಿ ತೋರಿಸಿದವರು. ಮಾತು-ಕೃತಿಗೆ ಅಂತರಗಳಿಲ್ಲದಂತೆಯೇ ಬದುಕಿದ ಅಪರೂಪದ ವ್ಯಕ್ತಿತ್ವ ಬರಗೂರರದು.

‘ಶ್ರಮ ಮತ್ತು ಸೃಜನಶೀಲತೆ’ ಎಂಬುದು ಅವರು ಮುಂಬೈನ ಗೋರೆಗಾಂವ್ ಕನ್ನಡ ಸಂಘದ ಸಮ್ಮೇಳನದಲ್ಲಿ ಮಾಡಿದ ಉದ್ಘಾಟನಾ ಭಾಷಣ. ಮುಂದೆ ಅದೇ ಒಂದು ಪುಸ್ತಕದ ಹೆಸರೂ ಆಯಿತು. ಅದೊಂದು ಪ್ರಮುಖ ಚಿಂತನೆಯನ್ನು ಮೂಡಿಸುವ ಕೃತಿ. ಬರಗೂರರ ಭಾಷಣ, ಬರಹಗಳು ತುಂಬಾ ಖಾಚಿತ್ಯತೆಗೆ ಹೆಸರಾದವು. ಅವರು ಮಾತಾಡುತ್ತಿದ್ದರೆ ‘ಲಿಂಗ ಮೆಚ್ಚಿ ಅಹುದಹುದೆನ್ನಬೇಕು’ ಎಂಬಂತಿರುತ್ತದೆ. ತಾತ್ವಿಕ ಜಿಜ್ಞಾಸೆಯನ್ನು ಅವರು ಮಂಡಿಸುವ ಬಗೆ ವಿಶಿಷ್ಟವಾದುದು. ಗಂಟೆಗಟ್ಟಲೆ ಆಡುವ ಮಾತನ್ನು ಹತ್ತಾರು ವಾಕ್ಯಗಳಲ್ಲಿ ರೂಪಿಸುವ ಶಕ್ತಿ ಅವರಿಗಿದೆ. ವಿಷಯ ಚಿಕ್ಕದಿದ್ದರೂ, ಅದರ ಮುಖಗಳ ಅವರ ಮಂಡನೆ ಎಷ್ಟೋ ಸಾರಿ ಅಚ್ಚರಿಯನ್ನುಂಟು ಮಾಡುವಂತಿರುತ್ತದೆ. ಇದರ ಆಳದಲ್ಲಿ ಅವರ ಸಂಶೋಧನಾ ಪ್ರವೃತ್ತಿ ಸದಾ ಕ್ರಿಯಾಶೀಲವಾಗಿರುತ್ತದೆ. ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗಳ ಅಧ್ಯಕ್ಷರಾಗಿ ಅವರು ಮಾಡಿದ ಕೆಲಸ ಅನನ್ಯವಾದುದು.
ಓದು, ಸಾಕ್ಷ್ಯಾಧಾರ, ಪರಾಮರ್ಶನ ಅವರ ಯಾವುದೇ ಮಾತು, ಭಾಷಣ, ಬರಹದ ಶಕ್ತಿಯಾಗಿವೆ. ಅವರ ‘ಉಪಸಂಸ್ಕೃತಿ’ ಆಲೋಚನೆ ಜಾತಿ ವರ್ಣಗಳ ಅಪಕಲ್ಪನೆಗಳನ್ನು ವೈಜ್ಞಾನಿಕಗೊಳಿಸಿದ ಚಿಂತನೆಯಾಗಿದೆ ಈ ಪರಿಕಲ್ಪನೆಯಡಿ ಸಂಶೋಧನೆ ಮಾಡಿಸಿ ಬರೆಸಿದ 48 ಅಧ್ಯಯನಗಳು ಇಂದು ಸಾವಿರಾರು ಅಧ್ಯಯನಗಳಿಗೆ ಅಡಿಗಲ್ಲಾಗಿದೆ. ಸಂಸ್ಕೃತಿಯ ಅರಿವು ಆಂತ್ರೊಪಾಲಜಿಕಲ್ ಆದುದಕ್ಕೆ ಸಾಮಾಜಿಕ ಮುಖವನ್ನು ಬೆಸೆದ ಕೀರ್ತಿ ಅವರದು.
 ನಮ್ಮ ದೇವರು ಯಾವುದು? ‘ಬೆವರು’. ದೇವರನ್ನು ಬೆವರಿಗೆ ಇಕ್ವಲೆಂಟ್ ಮಾಡಿದ ಚಿಂತನೆ ಸಾಮಾನ್ಯ ಜನರ ಬದುಕಿನ ನಡುವೆ ಕಂಡುಂಡ ಅನುಭವಗಳ ಹಿನ್ನೆಲೆಯಲ್ಲಿ ಶ್ರಮಸಂಸ್ಕೃತಿಯ ಚಿಂತನೆಯನ್ನು ಪ್ಯೂಡಲ್ ಸಮಾಜವನ್ನು ವ್ಯಾಖ್ಯಾನಿಸುವಲ್ಲಿ ಅವರ ಈ ಹೊಸ ಚಿಂತನೆ ಮತ್ತೆ ನಮ್ಮನ್ನು ಹೊಸದಾಗಿ ಆಲೋಚಿಸುವಂತೆ ಮಾಡಬಲ್ಲದು. ತಮ್ಮ ಎಲ್ಲಾ ಚಿತ್ರಗಳಿಗೆ, ಸಾಹಿತ್ಯ ಕೃತಿಗಳಿಗೆ ಒಂದಿಲ್ಲೊಂದು ಪ್ರಶಸ್ತಿ ಗಳಿಸುತ್ತಲೇ ಇರುವ ಬರಗೂರರು ಜನಪರ ಸಾಹಿತಿ. ಸಾಹಿತ್ಯದ ಉತ್ಕೃಷ್ಟ ವಿಮರ್ಶಕರೂ ಬರಗೂರರ ಕೊಡುಗೆಯನ್ನು ಪ್ರಶಂಸಿಸಿದ್ದಾರೆ. ಕನ್ನಡ ನಾಡು, ನುಡಿಯ ಚಿಂತನೆಯಲ್ಲಿ ಅವರದು ಅಗ್ರಶ್ರೇಣಿ. ನಡೆನುಡಿಗೆ ಬದ್ಧವಾದ ಇಂತಹ ಸಾಹಿತಿ ಯಾವುದೇ ಭಾಷಾ ಸಾಹಿತ್ಯ ಸಂದರ್ಭದಲ್ಲಿ ಅಪರೂಪ. ಹಳ್ಳಿಯಿಂದ ಬಂದು ನಾಡು ಕಟ್ಟುವ ಪ್ರಕ್ರಿಯೆಯಲ್ಲಿ ಅವರ ಪಾತ್ರ ದೊಡ್ಡದು. ಇಡೀ ಕರ್ನಾಟಕಕ್ಕೆ ಸಮಗ್ರವಾದ ಬಾಂಧವ್ಯ ಉಳ್ಳ ಅವರು ಹೊರರಾಜ್ಯ ಮತ್ತು ಹೊರ ದೇಶಗಳಲ್ಲಿ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅಮೆರಿಕದಿಂದ ಆಸ್ಟ್ರೇಲಿಯದವರೆಗೆ ಅವರ ಅಭಿಮಾನಿಗಳ ಬಳಗ ವಿಶಾಲವಾದುದು. ಆ ರೀತಿಯಲ್ಲಿ ಅವರ ಪ್ರಸಿದ್ಧ ಅಂತರ್‌ರಾಷ್ಟ್ರೀಯ ವ್ಯಕ್ತಿಯೂ ಹೌದು.
 ‘ಬೆವರು ನನ್ನ ದೇವರು’ ಸಂಪುಟಗಳು ಬರಗೂರರ ಚಿಂತನೆಯನ್ನು ಸಮಗ್ರವಾಗಿ ಗ್ರಹಿಸಲು ಕಾರಣವಾಗುತ್ತದೆ. ಕನ್ನಡಕ್ಕೆ ಮುಂದಿನ ಜ್ಞಾನಪೀಠ ಬಂದರೆ ಅದು ಬರಗೂರರಿಗೆ ಬರಬೇಕು. ಅದಕ್ಕೆ ಅವರು ಎಲ್ಲಾ ಬಗೆಯಿಂದಲೂ ಅರ್ಹರು

share
ಡಾ. ರಾಜಪ್ಪದಳವಾಯಿ
ಡಾ. ರಾಜಪ್ಪದಳವಾಯಿ
Next Story
X