ಪಂಜಾಬ್: ಗೆಲುವಿನತ್ತ ಎಎಪಿ ದಾಪುಗಾಲು; ಕಾಂಗ್ರೆಸ್ಗೆ ಮುಖಭಂಗ
Photo: Twitter/ArvindKejriwal
ಅಮೃತ್ಸರ್: ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಘಟಾನುಘಟಿ ನಾಯಕರು ಹಿನ್ನಡೆ ಸಾಧಿಸಿರುವುದು ಆಡಳಿತರೂಢ ಪಕ್ಷಕ್ಕೆ ತೀವ್ರ ಮುಖಭಂಗವಾಗಿದೆ.
ಹಾಲಿ ಸಿಎಂ ಚರಂಜಿತ್ ಸಿಂಗ್ ಚನ್ನಿ ಅವರ ಎರಡೂ ಸ್ಥಾನಗಳಲ್ಲಿ ಹಿನ್ನಡೆಯಲ್ಲಿದ್ದಾರೆ. ಸದ್ಯ ಬಂದಿರುವ ವರದಿಗಳ ಪ್ರಕಾರ ನವಜೋತ್ ಸಿಂಗ್ ಸಿಧು ಮತ್ತು ಸ್ಪೀಕರ್ ರಾಣಾ ಕನ್ವರ್ಪಾಲ್ ಸಿಂಗ್ ಕೂಡಾ ತಮ್ಮ ಕ್ಷೇತ್ರದಲ್ಲಿ ಹಿನ್ನಡೆ ಸಾಧಿಸಿದ್ದಾರೆ.
ಅಧಿಕಾರವನ್ನು ಉಳಿಸಿಕೊಳ್ಳಲು ಹವಣಿಸುತ್ತಿರುವ ಕಾಂಗ್ರೆಸ್ಗೆ ಆಮ್ ಆದ್ಮಿ ಪಕ್ಷವು ಪ್ರಮುಖ ಸ್ಪರ್ಧಿಯಾಗಿ ಹೊರಹೊಮ್ಮಿದ್ದು ಎಎಪಿಯ ಭಗವಂತ್ ಮಾನ್ ಅವರು ಪಂಜಾಬ್ನ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಿವಿಧ ಎಕ್ಸಿಟ್ ಪೋಲ್ಗಳು ಭವಿಷ್ಯ ನುಡಿದಿತ್ತು. ಆದಾಗ್ಯೂ, ಇನ್ನೂ ಕೆಲವು ಎಕ್ಸಿಟ್ ಪೋಲ್ಗಳು ಅತಂತ್ರ ಫಲಿತಾಂಶದ ಬಗ್ಗೆ ಭವಿಷ್ಯ ನುಡಿದಿವೆ.
ಪಂಜಾಬಿನಲ್ಲಿ 93 ಮಹಿಳೆಯರು ಮತ್ತು ಇಬ್ಬರು ತೃತೀಯಲಿಂಗಿಗಳು ಸೇರಿದಂತೆ ಒಟ್ಟು 1,304 ಅಭ್ಯರ್ಥಿಗಳು ಕಣದಲ್ಲಿದ್ದರು. ರಾಜ್ಯದಲ್ಲಿ ಶೇ.71.95ರಷ್ಟು ಮತದಾನವಾಗಿದೆ. ಹಿಂದಿನ ಮೂರು ವಿಧಾನಸಭಾ ಚುನಾವಣೆಗಳಲ್ಲಿ ಕಂಡುಬಂದ ಮತದಾನದ ಶೇಕಡಾವಾರು ಪ್ರಮಾಣಕ್ಕೆ ಹೋಲಿಸಿದರೆ ಇದು ಅತ್ಯಂತ ಕಡಿಮೆ.
What an absolut decimation. Have to admit, in Bhagwant Mann, Kejriwal made a neat choice. He is now older bud wiser. He may not flaunt a six-pack, true, but he had the bottle for a fight, the way he took on the royal challenger.
— Anand Ranganathan (@ARanganathan72) March 10, 2022
Looking forward to a spirited debate. At 8 PM. https://t.co/FcPKHLREua