Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಮದ್ರಸಾಗಳ ಮೇಲಿನ ಆರೋಪ ಆಧಾರ ರಹಿತ:...

ಮದ್ರಸಾಗಳ ಮೇಲಿನ ಆರೋಪ ಆಧಾರ ರಹಿತ: ಸಚಿವೆ ಶಶಿಕಲಾ ಜೊಲ್ಲೆ

ವಾರ್ತಾಭಾರತಿವಾರ್ತಾಭಾರತಿ10 March 2022 4:09 PM IST
share
ಮದ್ರಸಾಗಳ ಮೇಲಿನ ಆರೋಪ ಆಧಾರ ರಹಿತ: ಸಚಿವೆ ಶಶಿಕಲಾ ಜೊಲ್ಲೆ

ಬೆಂಗಳೂರು: ರಾಜ್ಯದ ಮದ್ರಸಾಗಳಲ್ಲಿ ಧಾರ್ಮಿಕ ಭಯೋತ್ಪಾದನೆ ಮತ್ತು ಮೂಲಭೂತವಾದ ಚಟುವಟಿಕೆಗಳು ನಡೆಯುತ್ತಿವೆ ಎಂದು ಸಂಘ ಪರಿವಾರ ಹುಯಿಲೆಬ್ಬಿಸುತ್ತಿರುವ ಹೊತ್ತಿನಲ್ಲಿಯೇ ರಾಜ್ಯದ ಮದ್ರಸಾಗಳಲ್ಲಿ ಯಾವುದೇ ತರದಲ್ಲೂ ಮೂಲಭೂತವಾದ ಶಿಕ್ಷಣ ನೀಡಲಾಗುತ್ತಿಲ್ಲ ಎಂದು ರಾಜ್ಯ ಬಿಜೆಪಿ ಸರಕಾರವೇ ಇದೀಗ ಅಧಿಕೃತವಾಗಿ ಉತ್ತರ ಒದಗಿಸಿದೆ.

ಅಷ್ಟೇ ಅಲ್ಲ ಮದ್ರರಸಾ ಶಿಕ್ಷಣದಲ್ಲಿ ಸಣ್ಣ ಮಕ್ಕಳಿಗೆ ದೇವರನ್ನು ಪೂಜಿಸುವವರಿಗೆ ಕೊಲ್ಲು ಎಂಬುದಾಗಿ ಪಾಠ ಮಾಡುತ್ತಿಲ್ಲ. ಇದು ಅಧಾರರಹಿತ ಆಪಾದನೆಯಾಗಿದೆ ಎಂದು ಮುಜುರಾಯಿ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ ಅವರು ವಿಧಾನಪರಿಷತ್ನಲ್ಲಿ ಉತ್ತರಿಸಿದ್ದಾರೆ.

ಮದ್ರಸಾಗಳ ಶಿಕ್ಷಣ ಕುರಿತು ಸಂಘ ಪರಿವಾರದ ಹಿನ್ನೆಲೆಯ ವಿಧಾನಪರಿಷತ್ ಸದಸ್ಯರಾದ ಮುನಿರಾಜುಗೌಡ ಮತ್ತು ಎನ್.ರವಿಕುಮಾರ್ ಈ ಹಿಂದಿನ ಹಲವು ಅಧಿವೇಶನಗಳಲ್ಲಿ ಪ್ರಶ್ನೆಗಳನ್ನು ಕೇಳುತ್ತಲೇ ಬಂದಿದ್ದಾರೆ. ಈ ಪ್ರಶ್ನೆಗಳಿಗೆ ಇದೇ ಬಿಜೆಪಿ ಸರಕಾರವು ಮದ್ರಸಾಗಳಲ್ಲಿ ಆಧುನಿಕ ಮತ್ತು ಉನ್ನತ ಮಟ್ಟದ ಶಿಕ್ಷಣ ಒದಗಿಸಲಾಗುತ್ತಿದೆ ಎಂದು ಉತ್ತರಿಸುತ್ತಲೇ ಬಂದಿದೆ.

ವಿಧಾನಪರಿಷತ್ನಲ್ಲಿ ಬುಧವಾರ ನಡೆದ ಅಧಿವೇಶನದಲ್ಲಿ ಎನ್.ರವಿಕುಮಾರ್ ಅವರು ಮದ್ರಸಾ ಶಿಕ್ಷಣ ಮತ್ತು ಆಪಾದನೆಗಳ ಬಗ್ಗೆ ಒಟ್ಟು 3 ಪ್ರಶ್ನೆಗಳನ್ನು ಕೇಳಿದ್ದರು. ಇದಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಅವರು ಹೊರ ದೇಶ ಮತ್ತು ಬೇರೆ ರಾಜ್ಯಗಳಿಂದ ನಮ್ಮ ರಾಜ್ಯದಲ್ಲಿ ಬಂದು ಮದ್ರಸಾ ಶಿಕ್ಷಣ ಪಡೆಯುವ ಬಗ್ಗೆ ಸಂವಿಧಾನಾತ್ಮಕವಾಗಿ ಯಾವುದೇ ನಿರ್ಬಂಧವಿರುವುದಿಲ್ಲ. ನಮ್ಮ ರಾಜ್ಯದ ಮದ್ರಸಾಗಳಲ್ಲ್ಲಿ ಅತೀ ಉನ್ನತ ಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಮೂಲಭೂತವಾದ ಶಿಕ್ಷಣ ನಮ್ಮ ರಾಜ್ಯದಲ್ಲಿ ಇಲ್ಲ ಎಂದು ಉತ್ತರಿಸಿದ್ದಾರೆ.

ಅದೇ ರೀತಿ ಮದ್ರಸಾ ಶಿಕ್ಷಣದಲ್ಲಿ ಸಣ್ಣ ಮಕ್ಕಳಿಗೆ ದೇವರನ್ನು ಪೂಜಿಸುವವರಿಗೆ ಕೊಲ್ಲು ಎಂಬುದಾಗಿ ಯಾವುದೇ ಪಾಠ ಮಾಡುವುದಿಲ್ಲ. ಇದು ಆಧಾರ ರಹಿತ ಆಪಾದನೆಯಾಗಿದೆ. ನೈಜವಾಗಿ ಮದ್ರಸಾಗಳಲ್ಲಿ ಸಮಸ್ತ ಜನಗಳ ಮಧ್ಯೆ ಸೌಹಾರ್ದ, ಸಹಬಾಳ್ವೆ, ಭ್ರಾತೃತ್ವ ಸಂಬಂಧಗಳನ್ನು ಬೆಳೆಸಲು ಪಾಠ ಮಾಡಲಾಗುತ್ತದೆ. ಇತರ ಶಿಕ್ಷಣ ಸಂಸ್ಥೆಗಳಂತೆ ಮದ್ರಸಾ ಶಿಕ್ಷಣ ಸಂಸ್ಥೆಗಳಿಂದಲೂ ಸರಕಾರಕ್ಕೆ ಗಣನೀಯ ಆದಾಯವಿರುವುದಿಲ್ಲ ಎಂದು ಹೇಳಿದೆ.

 ಕಳೆದ ತಿಂಗಳು (ಫೆಬ್ರುವರಿ 22) ನಡೆದ ಅಧಿವೇಶನದಲ್ಲೂ ಮುನಿರಾಜು ಗೌಡ ಪಿ.ಎಂ. ಅವರು ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆ (32-282) ಗೆ 2022ರ ಫೆ.17ರಂದು ಖುದ್ದು ಉತ್ತರಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮದ್ರಸಾಗಳಲ್ಲಿ ಅಧ್ಯಯನ ಮಾಡುವ ಮಕ್ಕಳ ಮಾಹಿತಿಯನ್ನು ಸರಕಾರದ ಯಾವುದೇ ಇಲಾಖೆಯು ಸಂಗ್ರಹಿಸುತ್ತಿಲ್ಲವೆಂದು ಉತ್ತರಿಸಿದ್ದರು.

 ಇನ್ನು ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ಮದ್ರಸಾಗಳಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡಲು ಯಾವುದೇ ಅನುದಾನವನ್ನೂ ನೀಡುತ್ತಿಲ್ಲ. ಆದರೆ, ರಾಜ್ಯದಲ್ಲಿನ ವಕ್ಫ್ ಸಂಸ್ಥೆಗಳಿಂದ ನಡೆಸಲಾಗುತ್ತಿರುವ ಮದ್ರಸಾಗಳನ್ನು ಆಧುನೀಕರಣಗೊಳಿಸಲು, ಔಪಚಾರಿಕ ಶಿಕ್ಷಣ, ಗಣಕಯಂತ್ರ ಶಿಕ್ಷಣ ನೀಡಲು ಅಗತ್ಯವಿರುವ ಮೂಲಭೂತ ಸೌಲಭ್ಯ, ನೀರು, ಶೌಚಾಲಯ, ವಸತಿ ಸೌಲಭ್ಯಗಳ ಕೊರತೆ, ಪೀಠೋಪಕರಣಗಳು, ಗಣಕಯಂತ್ರಗಳು, ಗ್ರಂಥಾಲಯ ಸೌಲಭ್ಯ ಒದಗಿಸಲು ಒಂದು ಸಂಸ್ಥೆಗೆ ಒಂದು ಬಾರಿಗೆ ಮಾತ್ರ ಗರಿಷ್ಠ 10 ಲಕ್ಷ ರೂ.ಗಳ ಅನುದಾನ ನೀಡಲಾಗುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಅವರು ಹೇಳಿದ್ದರು.

ಆಧುನಿಕ ಕನ್ನಡ, ಆಂಗ್ಲಭಾಷೆ, ಗಣಕೀಕೃತ ಶಿಕ್ಷಣ ಸೇರಿದಂತೆ ಇಸ್ಲಾಂ ಸಿದ್ದಾಂತಗಳ ಕುರಿತಾಗಿ ಶಿಕ್ಷಣ ನೀಡಲಾಗುತ್ತಿದೆ. ಈ ಶಿಕ್ಷಣವನ್ನು ಮದ್ರಸಾಗಳಲ್ಲಿ ನೋಂದಾಯಿತ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಈ ಮದ್ರಸಾಗಳಿಗೆ ಸರಕಾರದ ಅನುದಾನ ಮಂಜೂರಾಗಿರುವುದಿಲ್ಲ ಎಂದು ಉತ್ತರದಲ್ಲಿ ವಿವರಿಸಿದ್ದರು.

2019-20ರಲ್ಲಿ 29.46 ಕೋಟಿ ರೂ., 2020-21ರಲ್ಲಿ 5 ಕೋಟಿ ರೂ., 2021-22ರಲ್ಲಿ 3.74 ಕೋಟಿ ರೂ. ಸೇರಿ ಈ ಮೂರು ವರ್ಷಗಳಲ್ಲಿ 38.2 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಅಲ್ಪಸಂಖ್ಯಾತರ ನಿರ್ದೇಶನಾಲಯ ಸರಕಾರದ ಆದೇಶದಂತೆ ಅನುದಾನ ಕೋರಿ ಪ್ರಸ್ತಾವಗಳೊಂದಿಗೆ ಸಲ್ಲಿಸುವ ಮದ್ರಸಾ ಸಂಸ್ಥೆಗಳ ಮಕ್ಕಳ ಮಾಹಿತಿ ಅಂದರೆ ಮಕ್ಕಳ ಹೆಸರು ಮಾತ್ರ ಲಭ್ಯವಿದೆ ಎಂದು ಉತ್ತರಿಸಿದ್ದರು.

ಸರಕಾರದ ವತಿಯಿಂದ ಮದ್ರಸಾಗಳಿಗೆ ವೇತನ ಇತ್ಯಾದಿ ನೀಡಲಾಗುತ್ತಿಲ್ಲವಾದ್ದರಿಂದ ತೆರಿಗೆದಾರರನ್ನು ಕೊಲ್ಲು ಎಂದಂತಾಗುವುದಿಲ್ಲ. ಮದ್ರಸಾ ಶಿಕ್ಷಣ ಪಡೆದವರು ಉಗ್ರ ಸಂಘಟನೆಗಳಲ್ಲಿ ಭಾಗಿಯಾಗಿದ್ದಲ್ಲಿ ಭಾರತದ ಪ್ರಚಲಿತ ಕಾನೂನಿನ ಅನ್ವಯ ಕ್ರಮ ವಹಿಸಲಾಗುತ್ತಿದೆ. ರಾಜ್ಯದಲ್ಲಿ ಮದ್ರಸಾ ಶಿಕ್ಷಣವನ್ನು ನಿರ್ಬಂಧಿಸುವ ಕುರಿತು ಯಾವುದೇ ಪ್ರಸ್ತಾವ ಇರುವುದಿಲ್ಲ. 

ಶಶಿಕಲಾ ಜೊಲ್ಲೆ, ಮುಜುರಾಯಿ ಮತ್ತು ವಕ್ಫ್ ಸಚಿವೆ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X