ಮಾ. 11ರಂದು ಸ್ಪಿನ್ ಸೆಲೂನ್‌ನಿಂದ ಉಚಿತ ಹೇರ್‌ಕಟ್ !
ಮಂಗಳೂರು, ಮಾ.10: ಅಂತಾರಾಜ್ಯ ವ್ಯಾಪ್ತಿಯಲ್ಲಿ ಶಾಖೆಗಳನ್ನು ಹೊಂದಿರುವ ಸ್ಪಿನ್ ಯುನಿಸೆಕ್ಸ್ ಸೆಲೂನ್ ತನ್ನ ಮಂಗಳೂರಿನ ಶಾಖೆಯ ಅರ್ಧ ವಾರ್ಷಿಕ ಸಂಭ್ರಮಾಚರಣೆ ಅಂಗವಾಗಿ ಮಾ. 11ರಂದು ಉಚಿತ ಹೇರ್ ಕಟ್ ಕೊಡುಗೆಯನ್ನು ಗ್ರಾಹಕರಿಗೆ ನೀಡುತ್ತಿದೆ.
ಮಂಗಳೂರಿನ ಕದ್ರಿ ಕಂಬಳದ ಕ್ರೌನ್ ಕದ್ರಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಸ್ಪಿನ್ ಯುನಿಸೆಕ್ಸ್ ಸೆಲೂನ್ ನಲ್ಲಿ ಮಾ. 11ರಂದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪುರುಷಕರು, ಮಕ್ಕಳು ಹಾಗೂ ಮಹಿಳೆಯರಿಗೆ ಉಚಿತ ಹೇರ್‌ಕಟ್ ಅವಕಾಶವನ್ನು ಕಲ್ಪಿಸಲಾಗಿದೆ.
ಇದು ಒಂದು ದಿನದ ಕೊಡುಗೆಯಾಗಿದ್ದು, ಪುರುಷರು ಕ್ಷೌರ ಮಾತ್ರ ಮಾಡಿಸಿಕೊಳ್ಳಬಹುದು. ಅಲ್ಲದೆ ಮಕ್ಕಳಿಗೂ(ಹೆಣ್ಣು, ಗಂಡು) ಕ್ಷೌರಕ್ಕೆ ಅವಕಾಶ ನೀಡಲಾಗಿದೆ. ಮಹಿಳೆಯರೂ ಉದ್ದನೆಯ ಕೂದಲನ್ನು ಉಚಿತವಾಗಿ ಕತ್ತರಿಸಿಕೊಳ್ಳಬಹುದಾಗಿದೆ ಎಂದು ಸ್ಪಿನ್ ಯುನಿಸೆಕ್ಸ್ ಸೆಲೂನ್ ಮುಖ್ಯಸ್ಥರಾದ ಬೆಂಗಳೂರು ಮೂಲದ ನವೀನ್ ಅಶ್ವಥ್ ತಿಳಿಸಿದ್ದಾರೆ.
ಈಗಾಗಲೇ ಬುಕ್ಕಿಂಗ್ ಆರಂಭವಾಗಿದ್ದು, ಗುರುವಾರ ಮಧ್ಯಾಹ್ನದ ವೇಳೆಗೆ 100ಕ್ಕೂ ಅಧಿಕ ಮಂದಿ ನೋಂದಾಯಿಸಿಕೊಂಡಿದ್ದಾರೆ. ನಾಳೆ ಒಂದು ದಿನದಲ್ಲಿ 400 ಮಂದಿಗೆ ಈ ಹೇರ್‌ಕಟ್ ಮಾಡಿಸಿಕೊಳ್ಳಲು ಬೇಕಾದ ಸೌಲಭ್ಯವನ್ನು ಮಾಡಲಾಗಿದೆ. ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ನಾಳೆ ಆಸಕ್ತರು ಬಂದಲ್ಲಿ ಟೋಕನ್ ನೀಡಿ ಮುಂದಿನ ದಿನಾಂಕವನ್ನು ನಿದಿಪಡಿಸಲಾಗುವುದು. ಹೊರ ರಾಜ್ಯವಾದ ಚೆನ್ನೈ ಸೇರಿದಂತೆ, ರಾಜ್ಯದಲ್ಲಿ ಹಾಸನ, ಮೈಸೂರು, ತುಮಕೂರು, ಬೆಂಗಳೂರು, ಮಂಡ್ಯ ಸೇರಿದಂತೆ ಒಟ್ಟು 36 ಶಾಖೆಗಳನ್ನು ಸ್ಪಿನ್ ಹೊಂದಿದೆ ಎಂದು ನವೀನ್ ಅಶ್ವಥ್ ತಿಳಿಸಿದ್ದಾರೆ.







