ಕುತೂಹಲ ಕೆರಳಿಸಿದ ನಾಯಕರ ಸಮಾಗಮ: ಅಕ್ಕಪಕ್ಕ ಕೂತು ಭೋಜನ ಸವಿದ ಬಿಎಸ್‍ವೈ- ಎಚ್‍ಡಿಕೆ

ಬೆಂಗಳೂರು, ಮಾ.10: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹಾಗೂ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಒಟ್ಟಿಗೆ ಕೂತು ಭೋಜನ ಸವಿದ ಪ್ರಸಂಗ ನಡೆಯಿತು.
ಗುರುವಾರ ವಿಧಾನಸೌಧದ ಬ್ಯಾಕ್ವೆಂಟ್ ಹಾಲ್‍ನಲ್ಲಿ ಕಂದಾಯ ಸಚಿವ ಆರ್.ಅಶೋಕ್, ಸಚಿವರು, ಶಾಸಕರು ಹಾಗೂ ಮೇಲ್ಮನೆ ಸದಸ್ಯರಿಗೆ ಭೋಜನಕೂಟ ಏರ್ಪಡಿಸಿದ್ದರು. ಈ ವೇಳೆ ಹಾಲಿ ಸಿಎಂ ಹಾಗೂ ಮಾಜಿ ಸಿಎಂಗಳು ಒಂದೇ ಮೇಜಿನಲ್ಲಿ ಅಕ್ಕಪಕ್ಕದಲ್ಲೇ ಕೂತು ಊಟ ಮಾಡಿದರು.
ಈ ಸಂದರ್ಭದಲ್ಲಿ ಅವರಿಗೆ ಖುದ್ದು ಸಚಿವ ಆರ್.ಅಶೋಕ್ ಅವರೇ ಬಡಿಸಿದ್ದು ನಡೆಯಿತು. ಈ ವೇಳೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸಹಿತ ಹಲವು ಮಂದಿ ಸಚಿವರು, ಶಾಸಕರು ಅವರಿಗೆ ಸಾಥ್ ನೀಡಿದರು.

Next Story





