"2022 ರ ಫಲಿತಾಂಶಗಳು 2024 ರ ಫಲಿತಾಂಶವನ್ನು ನಿರ್ಧರಿಸಿವೆ": ಪ್ರಧಾನಿ ನರೇಂದ್ರ ಮೋದಿ ಹೇಳಿಕೆ

ಹೊಸದಿಲ್ಲಿ: ಚುನಾವಣೆ ನಡೆದ ಐದು ರಾಜ್ಯಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ದಾಖಲಿಸಿದ್ದು, ಬಿಜೆಪಿ ಕಾರ್ಯಕರ್ತರು ‘ಬೇಗನೇ ಹೋಳಿ ಆಚರಿಸುವ ಭರವಸೆಯನ್ನು ಉಳಿಸಿಕೊಂಡಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ ಹೇಳಿದ್ದಾರೆ. ಜನಾದೇಶಕ್ಕೆ ಅಭಿನಂದನೆ ಸಲ್ಲಿಸಿದ ಅವರು, ಇಂದಿನ ಗೆಲುವು 2014 ರ ಸಾರ್ವತ್ರಿಕ ಚುನಾವಣೆಗೆ ಅಡಿಪಾಯವನ್ನು ನಿರ್ಮಿಸುತ್ತದೆ ಎಂದು ಹೇಳಿದರು.
"2017 ರ ಯುಪಿ ಚುನಾವಣಾ ಫಲಿತಾಂಶ ಪ್ರಕಟವಾದಾಗ 2019 ರ ಸಾರ್ವತ್ರಿಕ ಚುನಾವಣೆಯ ಭವಿಷ್ಯವನ್ನು ನಿರ್ಧರಿಸಲಾಯಿತು ಎಂದು ಅನೇಕರು ಹೇಳಿದ್ದರು. ಅದೇ ಆಲೋಚನೆ ಈಗ ಅನ್ವಯಿಸುತ್ತದೆ ಎಂದು ನಾನು ಹೇಳಬಲ್ಲೆ. 2024 ರ ಸಾರ್ವತ್ರಿಕ ಚುನಾವಣಾ ಫಲಿತಾಂಶವನ್ನು 2022 ರ ಯುಪಿ ಚುನಾವಣೆ ಫಲಿತಾಂಶದಲ್ಲಿ ನೋಡಬಹುದು”ಎಂದು ಪ್ರಧಾನಿ ಮೋದಿ ಅವರು ಹೊಸದಿಲ್ಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದರು.
ರಾಜಕೀಯವಾಗಿ ನಿರ್ಣಾಯಕವಾಗಿರುವ ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ಬಿಜೆಪಿಯ ಸಾಧನೆ ಮುಂಬರುವ ರಾಜ್ಯಸಭಾ ಚುನಾವಣೆಯಲ್ಲಿ ಹೆಚ್ಚಿನ ಪರಿಣಾಮ ಉಂಟುಮಾಡುವ ಸಾಧ್ಯತೆಗಳಿವೆ.
ಉತ್ತರ ಪ್ರದೇಶದಲ್ಲಿ ಪಕ್ಷದ ಅದ್ಭುತ ಗೆಲುವನ್ನು ಸೂಚಿಸಿದ ಪ್ರಧಾನಿ ಮೋದಿ, "ಉತ್ತರ ಪ್ರದೇಶದಲ್ಲಿ ಜಾತಿ ಆಧಾರಿತ ರಾಜಕೀಯದ ಆರೋಪಗಳಲ್ಲಿ ಯಾವುದೇ ಸತ್ಯವಿಲ್ಲ ಎಂಬುದನ್ನು ಈ ಚುನಾವಣೆ ಮತ್ತೊಮ್ಮೆ ಸಾಬೀತುಪಡಿಸಿದೆ" ಎಂದು ಹೇಳಿದರು.
"ಉತ್ತರ ಪ್ರದೇಶದಲ್ಲಿ ಕೇವಲ 'ಜಾತಿವಾದ್ ಕಿ ರಾಜನೀತಿ (ಜಾತಿ ರಾಜಕಾರಣ)' ಕೆಲಸ ಮಾಡುತ್ತದೆ ಎಂದು ಹೇಳುವ ಮೂಲಕ ಜನರು ಉತ್ತರ ಪ್ರದೇಶವನ್ನು ಅವಮಾನಿಸುತ್ತಿದ್ದಾರೆ" ಎಂದು ಪ್ರಧಾನಿ ಮೋದಿ ಹೇಳಿದರು.







