ರೈಲಿನಡಿಗೆ ಬಿದ್ದು ಮೃತ್ಯು
ಕಾಪು, ಮಾ.10: ಅಪರಿಚಿತ ವ್ಯಕ್ತಿಯೊಬ್ಬರು ರೈಲಿನಡಿಗೆ ಬಿದ್ದು ಮೃತಪಟ್ಟ ಘಟನೆ ಉದ್ಯಾವರ ಗ್ರಾಮದ ಬೊಳ್ಜೆ ಗರಡಿ ಸಮೀಪ ಮಾ.9ರಂದು ಮಧ್ಯಾಹ್ನ ವೇಳೆ ನಡೆದಿದೆ.
ಸುಮಾರು 60-65 ವರ್ಷದ ಪ್ರಾಯದ ಈ ಮೃತ ವ್ಯಕ್ತಿ ರೈಲ್ವೆ ಹಳಿಯಲ್ಲಿ ನೆಡೆದುಕೊಂಡು ಹೋಗುವಾಗ ರೈಲು ಡಿಕ್ಕಿ ಹೊಡೆದು ಅಥವಾ ಚಲಿಸುತ್ತಿರುವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





