86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಸಾಪ ಸಿದ್ಧತೆ: ಸ್ವರಚಿತ ಆಶಯ ಕವಿತೆಗಳಿಗೆ ಆಹ್ವಾನ
ಬೆಂಗಳೂರು, ಮಾ.10: ಕನ್ನಡ ಸಾಹಿತ್ಯ ಪರಿಷತ್ತಿನಿಂದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಾವೇರಿಯಲ್ಲಿ ಮುಂದಿನ ಮೇ ತಿಂಗಳಿನಲ್ಲಿ ನಡೆಸಲು ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಹಾಗೂ ಹಾವೇರಿ ಜಿಲ್ಲೆಗೆ ಸಂಬಂಧಿಸಿದಂತಹ ಆಶಯ ಕವಿತೆಗಳನ್ನು ರಚಿಸಿ ಪರಿಷತ್ತಿಗೆ ಕಳಿಸಬಹುದಾಗಿದೆ.
ಸಾಹಿತ್ಯ, ಸಂಸ್ಕøತಿ, ಜನ-ಜೀವನ, ಕನ್ನಡ ನಾಡು, ನುಡಿ ಇತ್ಯಾದಿಗಳ ಕುರಿತ ಸ್ವರಚಿತ ಕವನಗಳನ್ನು ರಚಿಸಬಹುದಾಗಿದೆ. ತಾವು ರಚಿಸುವ ಕವಿತೆಗಳು ಈ ಹಿಂದೆ ಎಲ್ಲಿಯೂ ಪ್ರಕಟಗೊಂಡಿರಬಾರದು. ಉತ್ತಮ ಕವಿತೆಗಳನ್ನು ಆಯ್ಕೆ ಮಾಡಿ, ಸೂಕ್ತ ಗೌರವವನ್ನು ಸಲ್ಲಿಸಲಾಗುವುದು.
ಆಸಕ್ತರು ಕವಿತೆಗಳನ್ನು ಮಾ.31ರೊಳಗಾಗಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-560018 (ಇ-ಮೇಲ್: kannadaparishattu@gmail.com) ಈ ವಿಳಾಸಕ್ಕೆ ಕಳಿಸಲು ಪ್ರಕಟನೆಯಲ್ಲಿ ತಿಳಿಸಿದೆ.
Next Story





