ಮಂಗಳೂರು: ಖಾಸಗಿ ಐಟಿಐ ನೌಕರರ ಪ್ರತಿಭಟನೆ

ಮಂಗಳೂರು, ಮಾ.10:ಉದ್ಯೋಗ ಮತ್ತು ತರಬೇತಿ ಕ್ಷೇತ್ರದಲ್ಲಿ ಕೆಲಸ ಒದಗಿಸುವಂತೆ ಹಾಗೂ ನೌಕರರಿಗೆ ವೇತನ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಖಾಸಗಿ ಐಟಿಐ ಸಂಘಗಳ ಒಕ್ಕೂಟದ ದ.ಕ.ಜಿಲ್ಲಾ ಘಟಕದ ವತಿಯಿಂದ ಗುರುವಾರ ನಗರದ ಪುರಭವನದ ಬಳಿ ಪ್ರತಿಭಟನೆ ನಡೆಯಿತು.
ಈ ಸಂದರ್ಭ ಮಾತನಾಡಿದ ಒಕ್ಕೂಟದ ಸಂಚಾಲಕ ನವೀನ್ ಕುಮಾರ್ ಕೆ.ಎಸ್. ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ ನೀಡಿ ಅವರಿಗೆ ನೌಕರಿ ಸಿಗುವಂತೆ ಮಾಡುವ ಐಟಿಐ ನೌಕರರ ಜೀವನವೇ ಸುಗಮವಾಗಿಲ್ಲ. ರಾಜ್ಯದಲ್ಲಿರುವ 200 ಸರಕಾರಿ, 196 ಅನುದಾನಿತ, 1,300 ಖಾಸಗಿ ಐಟಿಐಗಳ ಪೈಕಿ ಖಾಸಗಿ ಐಟಿಐಗಳು ಸಮಸ್ಯೆಯಲ್ಲಿವೆ. ಆರ್ಥಿಕ ಸಮಸ್ಯೆಯಿಂದ ಖಾಸಗಿ ಸಂಸ್ಥೆಗಳು ಕಷ್ಟದಿಂದ ನಡೆಯುತ್ತಿದೆ ಹಾಗಾಗಿ ಸರಕಾರ ಖಾಸಗಿ ನೌಕರರ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
Next Story