ಮಾ.11: ಬ್ಯಾರಿ ತಾಲೀಮು ಜಲ್ಸ್
ಮಂಗಳೂರು, ಮಾ.10: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ಗುರುಪುರದ ಎಂಜಿಎಂ ತಾಲೀಮು ಸ್ಫೋಟ್ಸ್ (ರಿ) ಇದರ ಸಹಕಾರದಲ್ಲಿ ಮಾ.11ರಂದು ಸಂಜೆ 6ಕ್ಕೆ ಬ್ಯಾರಿ ತಾಲೀಮು ಜಲ್ಸ್-2022 ಕಾರ್ಯಕ್ರಮವು ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಅಧ್ಯಕ್ಷತೆಯಲ್ಲಿ ಗುರುಪುರ ಕೈಕಂಬದಲ್ಲಿ ನಡೆಯಲಿದೆ.
ಈ ಸಂದರ್ಭ ವಿವಿಧ ಕ್ಷೇತ್ರದ ಸಾಧಕರನ್ನು ಅಕಾಡಮಿಯ ವತಿಯೊಂದ ಸನ್ಮಾನಿಸಲಾಗುತ್ತದೆ. ತಾಲೀಮು ಪ್ರದರ್ಶನವಲ್ಲದೆ ಗಾಯಕರಾದ ಅರ್ಫ್ರಾಝ್ ಉಳ್ಳಾಲ್ ಮತ್ತು ಹಸನಬ್ಬ ಮೂಡಬಿದಿರೆ ಇವರಿಂದ ಬ್ಯಾರಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





