ಮೊಂಟೆಪದವು: ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಾಗಾರ, ಪ್ರಶಸ್ತಿ ಪ್ರದಾನ ಸಮಾರಂಭ

ಮಂಗಳೂರು : ಮುಸ್ಲಿಂ ಫ್ರೆಂಡ್ಸ್ ಮೊಂಟೆಪದವು ಮತ್ತು ನಾಲೆಜ್ ವಿಲೇಜ್ ಶಿಕ್ಷಣ ಸಂಸ್ಥೆಯ ವತಿಯಿಂದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಾಗಾರ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಮೊಂಟೆಪದವಿನಲ್ಲಿ ನಡೆಯಿತು.
ಎಸೆಸೆಲ್ಸಿ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆಗೆ ಅನುಕೂಲವಾಗುವಂತೆ ಯಾಕೂಬ್ ಕೊಯ್ಯುರ್ ಅವರಿಂದ ಗಣಿತ ತರಗತಿ ಹಾಗೂ ಸಫೂರ ಇವರಿಂದ ವಿಜ್ಞಾನ ತರಗತಿ ನಡೆಸಲಾಯ್ತು. ಸಂಪನ್ಮೂಲ ವ್ಯಕ್ತಿ ರಫೀಕ್ ಮಾಸ್ಟರ್ ಅವರಿಂದ ಮೋಟಿವೇಶನ್ ತರಗತಿ ನಡೆಸಲಾಯ್ತು.
ಕಾರ್ಯಕ್ರಮದಲ್ಲಿ ಕಳೆದ ವರ್ಷ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಅಲ್ಲದೇ ಧಾರ್ಮಿಕ ಹಾಗೂ ಸಾಮಾಜಿಕ ರಂಗದಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬದ್ರಿಯಾ ಜುಮಾ ಮಸ್ಜಿದ್ ಅಧ್ಯಕ್ಷರಾದ ಕೆ. ಖಾದರ್, ಮಸೀದಿಯ ಖತೀಬ್ ಸಿದ್ದೀಕ್ ಸಅದಿ, ಸಂಸ್ಥೆಯ ಅಧ್ಯಕ್ಷರಾದ ಅಝೀಝ್ ಮೂಳೂರು, ಗೌರವಾಧ್ಯಕ್ಷರಾದ ಜಿ.ಎಂ ಹಸ್ಸನ್ ಕುಂಞಿ ಹಾಜಿ, ಉಪಾಧ್ಯಕ್ಷರಾದ ಹಮ್ಮದ್ ಕುಂಞಿ, ಖಜಾಂಜಿ ಡಿಎಸ್ ಮೋನು, ಕಾರ್ಯದರ್ಶಿ ಅಬ್ದುಲ್ ನಾಸಿರ್ ಹಾಗೂ ಸಂಸ್ಥೆಯ ಇತರ ಸದಸ್ಯರುಗಳು ಹಾಜರಿದ್ದರು.
ಸ್ಥಳೀಯ ಖಾಸಗಿ ಹಾಗೂ ಸರಕಾರಿ ಶಾಲೆಗಳಿಂದ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇದರ ಸದುಪಯೋಗವನ್ನು ಪಡೆದುಕೊಂಡರು.












