ರಾಜ್ಯಮಟ್ಟದ ಪದವಿ ವಿಭಾಗದ ಭಿತ್ತಿಚಿತ್ರ ಸ್ಪರ್ಧೆ; ಪಿಪಿಸಿಯ ದಿವ್ಯಾ ಶೆಟ್ಟಿ ಪ್ರಥಮ

ಉಡುಪಿ, ಮಾ.11: ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಕರ್ನಾಟಕ ಚುನಾವಣಾ ಆಯೋಗವು ಆಯೋಜಿಸಿದ ರಾಜ್ಯ ಮಟ್ಟದ ಪದವಿ ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ಭಿತ್ತಿಚಿತ್ರ ಸ್ಪರ್ಧೆಯಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ತೃತೀಯ ಬಿ.ಕಾಂ. ವಿದ್ಯಾರ್ಥಿನಿ ದಿವ್ಯಾ ಶೆಟ್ಟಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಇವರು ಮಣಿಪಾಲದ ಕೃಷ್ಣ ಶೆಟ್ಟಿ ಹಾಗೂ ರತ್ನಾ ಶೆಟ್ಟಿ ಇವರ ಪುತ್ರಿ ಎಂದು ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story