ಅವಧಿ ಪೂರೈಸಿದ ಎಪಿಎಂಸಿ ಅಧ್ಯಕ್ಷ, ಸದಸ್ಯರಿಗೆ ಸನ್ಮಾನ

ಮಂಗಳೂರು, ಮಾ.11: ಐದು ವರ್ಷಗಳ ಅವಧಿ ಪೂರೈಸಿದ ಮಂಗಳೂರು ಎಪಿಎಂಸಿ ಅಧ್ಯಕ್ಷ ಮತ್ತು ಸದಸ್ಯ ರನ್ನು ಅಭಿನಂದಿಸುವ ಕಾರ್ಯಕ್ರಮವು ಬೈಕಂಪಾಡಿಯ ಎಪಿಎಂಸಿ ಕೇಂದ್ರ ಕಚೇರಿಯಲ್ಲಿ ನಡೆಯಿತು.
ಅಭಿನಂದನೆ ಸ್ವೀಕರಿಸಿದ ಅಧ್ಯಕ್ಷ ಕೆ. ಕೃಷ್ಣರಾಜ ಹೆಗಡೆ ಮಾತನಾಡಿ ಅಧಿಕಾರಿ, ಸಿಬ್ಬಂದಿ ವರ್ಗಕ್ಕೆ ಕೃತಜ್ಞತೆ ಸಲ್ಲಿಸಿದರು. ಉಪಾಧ್ಯಕ್ಷೆ ರಜನಿ ದುಗ್ಗಣ್ಣ, ಸದಸ್ಯರಾದ ರಾಘವ ಶೆಟ್ಟಿ ಅಶೋಕ ಶೆಟ್ಟಿ, ರುಕ್ಮಯ ನಾಯ್ಕ, ವಾಣಿ ಆರ್. ಶೆಟ್ಟಿ, ಮುತ್ತು ಎನ್. ಶೆಟ್ಟಿ, ಭರತೇಶ್ ಅಮೀನ್, ಪ್ರೀವಿಣ್ ಕುಮಾರ್ ಅದ್ಯಪಾಡಿ, ವೇದಾವತಿ ಗಟ್ಟಿ, ಪುರುಷೋತ್ತಮ ಶೆಟ್ಟಿ, ಚಂದ್ರಹಾಸ ಸನಿಲ್ ಮತ್ತಿತರರು ಉಪಸ್ಥಿತರಿದ್ದರು.
ಎಪಿಎಂಸಿ ಕಾರ್ಯದರ್ಶಿ ಸಿ.ಎಚ್.ಮೋಹನ್ ಸ್ವಾಗತಿಸಿದರು. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಗಣೇಶ್ ಹೆಗಡೆ ವಂದಿಸಿದರು.
Next Story