ದ.ಕ.ಜಿಲ್ಲಾ ಮಟ್ಟದ ಕ್ರೀಡಾಕೂಟ; ಶಿಕ್ಷಕಿ ದೀಪಿಕಾ ಶೆಟ್ಟಿಗೆ 5 ಸ್ವರ್ಣ ಪದಕ

ಮಂಗಳೂರು, ಮಾ.11: ನಗರದ ಮಂಗಳಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸರಕಾರಿ ನೌಕರರ ದ.ಕ.ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸರಕಾರಿ ಶಾಲೆಯ ಶಿಕ್ಷಕಿ ದೀಪಿಕಾ ಶೆಟ್ಟಿ 100 ಮೀ, 200 ಮೀ. ವೇಗದ ಓಟ, 4/100 ಮೀ. ರಿಲೇ, 4/400 ಮೀ. ರಿಲೇ ಮತ್ತು ಉದ್ದ ಜಿಗಿತದಲ್ಲಿ ಅನುಕ್ರಮವಾಗಿ 5 ಚಿನ್ನದ ಪದಕವನ್ನು ಬಾಚಿಕೊಂಡು ಎಪ್ರಿಲ್ನಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದಾರೆ.
2021ರ ರಾಷ್ಟ್ರಮಟ್ಟದ ಪದಕ ವಿಜೇತೆಯೂ ಆಗಿದ್ದ ಇವರು ಕ್ರೀಡಾಜ್ಯೋತಿಯನ್ನು ಕ್ರೀಡಾಂಗಣದ ಸುತ್ತ ಓಡಿ ಬೆಳಗಿಸುವುದರ ಮೂಲಕ ಕ್ರೀಡೆಗೆ ಚಾಲನೆ ನೀಡಿರುವರು.