Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಕೋವಿಡ್ ಸೋಂಕಿನಿಂದ ವಿಶ್ವದಲ್ಲಿ 18...

ಕೋವಿಡ್ ಸೋಂಕಿನಿಂದ ವಿಶ್ವದಲ್ಲಿ 18 ಮಿಲಿಯನ್ ಜನರ ಮೃತ್ಯು: ವರದಿ

ಭಾರತದಲ್ಲಿ ಮರಣ ಪ್ರಮಾಣ 4.1 ಮಿಲಿಯನ್

ವಾರ್ತಾಭಾರತಿವಾರ್ತಾಭಾರತಿ12 March 2022 12:03 AM IST
share
ಕೋವಿಡ್ ಸೋಂಕಿನಿಂದ ವಿಶ್ವದಲ್ಲಿ 18 ಮಿಲಿಯನ್ ಜನರ ಮೃತ್ಯು: ವರದಿ

‌ವಾಷಿಂಗ್ಟನ್, ಮಾ.11: ಜಗತ್ತನ್ನೇ ಕಂಗೆಡಿಸಿದ್ದ ಕೊರೋನ ಸಾಂಕ್ರಾಮಿಕ ಮಹಾಮಾರಿಯು ಆರಂಭದ 2 ವರ್ಷದಲ್ಲಿ ವಿಶ್ವದಾದ್ಯಂತ ಸುಮಾರು 18.2 ಮಿಲಿಯನ್ ಜನರ ಸಾವಿಗೆ ಕಾರಣವಾಗಿದೆ. ಭಾರತದಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 4.1 ಮಿಲಿಯನ್ ಎಂದು ಅಮೆರಿಕದ ಸಂಸ್ಥೆಯ ಅಧ್ಯಯನ ವರದಿ ಹೇಳಿದೆ. ‌

ವಿಶ್ವದ ಕೆಲವು ದೇಶಗಳಿಂದ ಲಭಿಸಿದ ಅಂಕಿಅಂಶಗಳಲ್ಲಿ ವ್ಯತ್ಯಾಸ ಇರುವ ಕಾರಣ ಈ ಪ್ರಮಾಣ ಇನ್ನಷ್ಟು ಹೆಚ್ಚಾಗಬಹುದು ಎಂದು ವಾಷಿಂಗ್ಟನ್ ವಿವಿಯ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಮೆಟ್ರಿಕ್ಸ್ ಆ್ಯಂಡ್ ಇವ್ಯಾಲುವೇಷನ್ ನ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸ್ಪ್ಯಾನಿಷ್ ಜ್ವರದ ಬಳಿಕ ಜಗತ್ತಿನಲ್ಲಿ ಅತ್ಯಧಿಕ ಮರಣ ಪ್ರಮಾಣ ದಾಖಲಿಸಿದ ಮಹಾಮಾರಿ ಇದಾಗಿದೆ. 

ಕೋವಿಡ್ ಸೋಂಕು ವಿಶ್ವದಾದ್ಯಂತದ ಸಾವಿನ ಪ್ರಮಾಣದಲ್ಲಿ 17% ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಕ್ರಿಸ್ಟೋಫರ್ ಜೆಎಲ್ ಮರ್ರೇ ಹೇಳಿದ್ದಾರೆ. 1918ರಲ್ಲಿ ಆರಂಭವಾಗಿದ್ದ ಸ್ಪ್ಯಾನಿಷ್ ಜ್ವರದಿಂದ ವಿಶ್ವದಾದ್ಯಂತ ಕನಿಷ್ಟ 50 ಮಿಲಿಯನ್ ಜನತೆ ಮೃತಪಟ್ಟಿದ್ದರು. ಸಾವಿನ ಪ್ರಕರಣಗಳ ನಿಖರ ಲೆಕ್ಕಾಚಾರ ಹಾಗೂ ಸಾಂಕ್ರಾಮಿಕದಿಂದ ಆದ ವಿನಾಶದ ವ್ಯಾಪ್ತಿಯನ್ನು ನಿರ್ಣಯಿಸುವುದಕ್ಕೆ ಈ ಅಧ್ಯಯನ ಆದ್ಯತೆ ನೀಡಿದ್ದು ‘ದಿ ಲ್ಯಾನ್ಸೆಟ್’ ನಿಯತಕಾಲಿಕದಲ್ಲಿ ಈ ವರದಿ ಪ್ರಕಟವಾಗಿದೆ. 

2020ರ ಜನವರಿ 1ರಿಂದ 2021ರ ಡಿಸೆಂಬರ್ 31ರವರೆಗಿನ ಮರಣ ಪ್ರಮಾಣವನ್ನು ಈ ಹಿಂದಿನ ವರ್ಷದ ಮಾಹಿತಿಗೆ ಹೋಲಿಕೆ ಮಾಡಿ ಅಧ್ಯಯನ ನಡೆಸಲಾಗಿದೆ. ವಿಶ್ವದಾದ್ಯಂತ ಮರಣ ಪ್ರಮಾಣ ದಿಢೀರನೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಲು ಕೋವಿಡ್ 19 ಸಾಂಕ್ರಾಮಿಕ ನೇರ ಕಾರಣವಾಗಿದೆ. ಸಾಂಕ್ರಾಮಿಕದ ಆರಂಭಿಕ ಹಂತದಲ್ಲಿ ಇದರ ಕುರಿತ ಸೂಕ್ತ ಮಾಹಿತಿಯ ಕೊರತೆ, ಕೆಲವು ದೇಶಗಳಲ್ಲಿ ಆರೋಗ್ಯ ಸುರಕ್ಷಾ ವ್ಯವಸ್ಥೆಯ ಅಲಭ್ಯತೆ ಹಾಗೂ ಸಾಂಕ್ರಾಮಿಕದಿಂದ ಅಗತ್ಯ ಸೇವೆಗಳ ಪೂರೈಕೆಗೆ ಆದ ತೊಂದರೆ, ಖಿನ್ನತೆ ಮುಂತಾದ ಅಸ್ವಸ್ಥತೆಯಿಂದ ಆತ್ಕಹತ್ಯೆ ಮಾಡಿಕೊಳ್ಳುವುದು ಅಥವಾ ಮಾದಕ ವಸ್ತುಗಳ ಬಳಕೆ ಮುಂತಾದ ಸಮಸ್ಯೆ ಹೆಚ್ಚಿದೆ. ಕೋವಿಡ್ ಸಾಂಕ್ರಾಮಿಕದಿಂದ ಸಾವಿನ ಪ್ರಮಾಣ ವಿಪರೀತ ಹೆಚ್ಚಿರುವುದು ಸ್ವೀಡನ್, ನೆದರ್ಲ್ಯಾಂಡ್ ಮತ್ತಿತರ ಹಲವು ದೇಶಗಳಲ್ಲಿ ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ. 

ಸಾಂಕ್ರಾಮಿಕದಿಂದ ಆಗಿರುವ ಸಾವಿನ ಪ್ರಮಾಣದ ನಿಖರ ಮಾಹಿತಿಯು ಸಾರ್ವಜನಿಕ ಸುರಕ್ಷಾ ಕಾರ್ಯನೀತಿಯ ಕುರಿತ ಪರಿಣಾಮಕಾರಿ ನಿರ್ಧಾರ ಕೈಗೊಳ್ಳಲು ಪೂರಕವಾಗಲಿದೆ ಎಂದು ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಮೆಟ್ರಿಕ್ಸ್ ಆ್ಯಂಡ್ ಇವ್ಯಾಲುವೇಷನ್ನ ಅಸೋಸಿಯೇಟ್ ಪ್ರೊಫೆಸರ್ ಹೈಡಂಗ್ ವಾಂಗ್ ಹೇಳಿದ್ದಾರೆ. ಸೋಂಕಿನಿಂದ ಉಂಟಾಗಿರುವ ಸಾವಿನ ಪ್ರಮಾಣದ ನಿಖರ ಮಾಹಿತಿಯು ಪ್ರಜೆಗಳ ರಕ್ಷಣೆಗೆ ಕೈಗೊಳ್ಳಬೇಕಾದ ಆರೋಗ್ಯ ಸುರಕ್ಷಾ ಕ್ರಮಗಳ ಸ್ಪಷ್ಟ ಚಿತ್ರಣಕ್ಕೆ ನೆರವಾಗುತ್ತದೆ. ಎಷ್ಟು ಮಂದಿ ಮೃತಪಟ್ಟಿದ್ದಾರೆ ಮತ್ತು ಸಾವಿಗೆ ಕಾರಣ ದೃಢವಾದರೆ ಆಗ ಉತ್ತಮ ಕಾರ್ಯಯೋಜನೆ ರೂಪಿಸಲು ಸರಕಾರಕ್ಕೆ ಅನುಕೂಲವಾಗುತ್ತದೆ ಎಂದು ಬ್ಲೂಮ್ಬರ್ಗ್ ಎಲ್ಪಿ ಸಂಸ್ಥೆಯ ಮುಖ್ಯಸ್ಥೆ ಜೆನ್ನಿಫರ್ ಎಲಿಸ್ ಹೇಳಿದ್ದಾರೆ. ಕೆಳ ಮತ್ತು ಮಧ್ಯಮ ಆದಾಯದ ದೇಶಗಳು ಕೊರೋನ ಸಾಂಕ್ರಾಮಿಕದ ಕುರಿತು ಮಾಹಿತಿ ಸಂಗ್ರಹಣೆಗೆ ಬ್ಲೂಮ್ಬರ್ಗ್ ಸಂಸ್ಥೆ ನೆರವಾಗುತ್ತಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X