ಮಂಗಳೂರು: ವಿಸ್ಮಯ ಅಮ್ಯೂಸ್ ಮೆಂಟ್ ಪಾರ್ಕ್ ಮುಂಗಡ ಬುಕ್ಕಿಂಗ್ ಕಚೇರಿ ಉದ್ಘಾಟನೆ

ಮಂಗಳೂರು: ವಿಸ್ಮಯ ಬಗೆಗಿನ ಮಾಹಿತಿ ಒದಗಿಸಲು ನೂತನ ಕಚೇರಿಯನ್ನು ನಗರದ ರಾವ್ ಆಂಡ್ ರಾವ್ ವೃತ್ತದ ಬಳಿ ಸಹಕಾರಿ ಸದನದಲ್ಲಿ ಪ್ರಾರಂಭಿಸಿದೆ. ಕಿಟೆಲ್ ಮೆಮೊರಿಯಲ್ ಪ.ಪೂ ಕಾಲೇಜಿನ ಪ್ರಾಂಶುಪಾಲರು, ದಕ್ಷಿಣ ಕನ್ನಡ ಪ.ಪೂರ್ವ ಕಾಲೇಜು ಪ್ರಾಂಶುಪಾಲರ ಅಸೋಸಿಯೇಷನ್ ನ ಉಪಾಧ್ಯಕ್ಷರಾದ ವಿಠಲ್ ಅವರು ಕಚೇರಿ ಉದ್ಘಾಟಿಸಿ ಶುಭ ಹಾರೈಸಿದರು.
ಕೇರಳದ ಕಣ್ಣೂರು ಜಿಲ್ಲೆಯ ಪರಶಿನಕಡವಿನಲ್ಲಿ ಕಾರ್ಯಾಚರಿಸುತ್ತಿರುವ ವಿಸ್ಮಯ ಅಮ್ಯೂಸ್ ಮೆಂಟ್ ವಾಟರ್ ಥೀಮ್ ಪಾರ್ಕ್ ಕೇರಳದಲ್ಲಿ ಮಾತ್ರವಲ್ಲದೇ ಕರ್ನಾಟಕದ ಪ್ರವಾಸಿಗರನ್ನು ಕೈಬೀಸಿ ಕರೆಯುವ ಅದ್ಭುತ ಹಾಗೂ ಸುರಕ್ಷಿತ ಪ್ರವಾಸಿ ಕೇಂದ್ರವಾಗಿ ರೂಪುಗೊಂಡಿದೆ. ಕಳೆದ ಒಂದು ದಶಕಗಳಿಂದ ದಕ್ಷಿಣ ಕನ್ನಡ ಹಾಗೂ ಸುತ್ತಮುತ್ತಲ ಜಿಲ್ಲೆಯ ಪ್ರವಾಸಿಗರು ವಿಸ್ಮಯ ಅಮ್ಯೂಸ್ ಮೆಂಟ್ ಪಾರ್ಕಿನ ರಸದೌತಣವನ್ನು ಈಗಾಗಲೇ ಸವಿದಿದ್ದಾರೆ. ವಿಶ್ವ ಗುಣಮಟ್ಟದ ಮಾರ್ಗದರ್ಶಕರು, ಸುರಕ್ಷಾ ವ್ಯವಸ್ಥೆಯೊಂದಿಗೆ ಕಾರ್ಯಚರಿಸುತ್ತಿರುವ ವಿಸ್ಮಯ ಅಮ್ಯೂಸ್ ಮೆಂಟ್ ಪಾರ್ಕಿಗೆ ಭೇಟಿಕೊಡುವ ದಕ್ಷಿಣ ಕನ್ನಡ ಹಾಗೂ ಸುತ್ತಮುತ್ತಲ ಜಿಲ್ಲೆಯ ಪ್ರವಾಸಿಗರಿಗೆ ಇನ್ನಷ್ಟು ಸೇವಾ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಹಾಗು ಪ್ರವಾಸವನ್ನು ಸರಳಗೊಳಿಸುವ ನಿಟ್ಟಿನಲ್ಲಿ ವಿಸ್ಮಯ ಅಮ್ಯೂಸ್ ಮೆಂಟ್ ನ ನೂತನ ಕಚೇರಿಯನ್ನು ಆರಂಭಿಸಲಾಗಿದೆ ಎಂದು ವಿಸ್ಮಯ ಅಮ್ಯೂಸ್ ಮೆಂಟ್ ಪಾರ್ಕಿನ ಮಾರ್ಕೆಟಿಂಗ್ ಮ್ಯಾನೇಜರ್ ನಿದಿನ್ ವಿ.ವಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಮ್ಮ ಟಿವಿ ಜನರಲ್ ಮ್ಯಾನೇಜರ್ ರಿಯಾಝ್, ಸಹಾಯಕ ಮ್ಯಾನೇಜರ್ ಅಭಿಜಿತ್, ದಕ್ಷಿಣ ಕನ್ನಡ ಜಿಲ್ಲೆಯ ಏರಿಯಾ ಮ್ಯಾನೇಜರ್ ಸಂತೋಷ್ ಉಪಸ್ಥಿತರಿದ್ದರು.
