ನಾಲ್ಕು ದಶಕಗಳಲ್ಲೇ ಮೊದಲ ಬಾರಿ ಉದ್ಯೋಗಿಗಳ ಭವಿಷ್ಯ ನಿಧಿ ಬಡ್ಡಿ ದರದಲ್ಲಿ ಕಡಿತ

ಹೊಸದಿಲ್ಲಿ, ಮಾ.12: ನೌಕರರ ಭವಿಷ್ಯನಿಧಿ (ಇಪಿಎಫ್) ಸಂಸ್ಥೆಯ ಕೇಂದ್ರೀಯ ಟ್ರ ಸ್ಟಿಗಳ ಮಂಡಳಿಯು ಗುವಾಹಟಿಯಲ್ಲಿ ಶನಿವಾರ ಸಭೆ ನಡೆಸಿದ್ದು, 2021-22ರ ಆರ್ಥಿಕ ವರ್ಷದಲ್ಲಿ ತನ್ನ ಚಂದಾದಾರರಿಗೆ ಶೇ.8.1 ಬಡ್ಡಿದರವನ್ನು ಶಿಫಾರಸು ಮಾಡಿದೆ. ಈ ಬಡ್ಡಿದರವು ಕಳೆದ ನಾಲ್ಕು ದಶಕಗಳಲ್ಲೇ ಅತ್ಯಂತ ಕನಿಷ್ಠವಾಗಿದೆ.
ಕಳೆದ ವರ್ಷದ ಮಾರ್ಚ್ನಲ್ಲಿ ಇಪಿಎಫ್ಓ ಮಂಡಳಿಯು ಕಳೆದ ಸಾಲಿನ 2020-21ನೇ ಹಣಕಾಸು ವರ್ಷದಲ್ಲಿ ಶೇ.8.5 ಶೇಕಡ ಬಡ್ಡಿದರವನ್ನು ಅಂತಿಮಗೊಳಿಸಿತ್ತು. ಕೇಂದ್ರ ಕಾರ್ಮಿಕ ಸಚಿವರ ನೇತೃತ್ವದ ಸಿಬಿಟಿ (ಕೇಂದ್ರೀಯ ಟ್ರಸ್ಟಿಗಳ ಮಂಡಳಿ) ಹಾಗೂ ಮಾಲಕರು ಮತ್ತು ಉದ್ಯೋಗಿಗಳ ಕಡೆಯ ಪ್ರತಿನಿಧಿಗಳು ಆಯಾ ಸಾಲಿನ ಬಡ್ಡಿದರವನ್ನು ಶಿಫಾರಸು ಮಾಡುತ್ತಾರೆ.
ಜನತೆಯ ವಿತ್ತೀಯ ಸಂಪನ್ಮೂಲಗಳ ಮೇಲೆ ಕೋವಿಡ್19 ಗಂಭೀರ ಪರಿಣಾಮವನ್ನುಂಟು ಮಾಡಿದ ಕಾರಣ ಗಣನೀಯ ಪ್ರಮಾಣದ ಚಂದಾದಾರರು ಭವಿಷ್ಯನಿಧಿ ಠೇವಣಿಗನ್ನು ಹಿಂಪಡೆದುಕೊಂಡಿದ್ದ ಹೊರತಾಗಿಯೂ ನೌಕರರ ಭವಿಷ್ಯ ನಿಧಿ ಸಂಸ್ಥೆಯು 2020-21ನೇ ಸಾಲಿನಲ್ಲಿ ಭವಿಷ್ಯನಿಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು, 2019-20ನೇ ಸಾಲಿನಲ್ಲಿದ್ದಂತೆ ಶೇ.8.5ರಲ್ಲಿ ಉಳಿಸಿಕೊಂಡಿತ್ತು. ಕೋವಿಡ್19 ಸಾಂಕ್ರಾಮಿಕದ ಆನಂತರ ಭವಿಷ್ಯನಿಧಿ ಮಂಡಳಿಯು ಗಣನೀಯ ಪ್ರಮಾಣ ಠೇವಣಿ ಹಿಂತೆಗೆತವನ್ನು ಹಾಗೂ ಕಡಿಮೆ ಪ್ರಮಾಣದ ದೇಣಿಗೆಯನ್ನು ಕಂಡಿತ್ತು. ಡಿಸೆಂಬರ್31ರವರೆಗೆ ನೌಕರರ ಭವಿಷ್ಯನಿಧಿ ಮಂಡಳಿಯು ಇಪಿಎಫ್ಓ 14,310.21 ಕೋಟಿ ರೂ. ವೌಲ್ಯದ ಸುಮಾರು 56.79 ಲಕ್ಷ ರೂ. ವೌಲ್ಯದ ಕ್ಲೇಮುಗಳನ್ನು ಇತ್ಯರ್ಥಪಡಿಸಿತ್ತು.
ಹಲವಾರು ವರ್ಷಗಳಿಂದ ಕೇಂದ್ರ ಹಣಾಸು ಸಚಿವಾಲಯವು ಇಪಿಎಫ್ಓ ಚಂದಾದಾರರಿಗೆ ಅಧಿಕ ಬಡ್ಡಿದರವನ್ನು ನೀಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿದೆ. ಒಟ್ಟಾರೆ ಇಪಿಎಫ್ ಬಡ್ಡಿದರವನ್ನು 8 ಶೇಕಡ ಮಟ್ಟಕ್ಕೆ ಇಳಿಸುವಂತೆ ಅದು ಸಲಹೆ ನೀಡಿತ್ತು.
ಕೇಂದ್ರ ಹಣಕಾಸು ಸಚಿವಾಲಯವು 2019-20ನೇ ಸಾಲಿನಲ್ಲಿ ನಿಗದಿಪಡಿಸಿದ 8.5 ಶೇಕಡ ಹಾಗೂ 2018-19ನೇ ಸಾಲಿನಲ್ಲಿ ನಿಗದಿಪಡಿಸಿದ 8.65 ಶೇಕಡ ಬಡ್ಡಿದರವನ್ನು ಪ್ರಶ್ನಿಸ ುತ್ತಲೇ ಬಂದಿತ್ತು. ಇದರ ಜೊತೆಗೆ ಇಪಿಎಫ್ಓ ಸಂಸ್ಥೆಯು ಐಎಲ್ಆ್ಯಂಡ್ಎಫ್ಎಸ್ ಮತ್ತಿತರ ಹೂಡಿಕೆಗೆ ಅಪಾಯಕರವಾಗಿರುವಂತಹ ಕಂಪೆನಿಗಳಲ್ಲಿ ಠೇವಣಿದಾರರ ಹಣವನ್ನು ಹೂಡಿಕೆ ಮಾಡುವುದನ್ನು ಆಕ್ಷೇಪಿಸಿದೆ.
ಇಪಿಎಫ್ ಬಡ್ಡಿದರ ಇಳಿಕೆಗೆ ಕೋವಿಡ್ ನೆಪ
ದೇಶದ ಆರ್ಥಿಕತೆಯಲ್ಲಿ ಪ್ರಸಕ್ತ ಕಡಿಮೆ ಬಡ್ಡಿದರವು ಪ್ರಚಲಿತದಲ್ಲಿರುವ ಕಾರಣ ಕೇಂದ್ರ ಸರಕಾರವು ನೌಕರರ ಭವಿಷ್ಯ ನಿಧಿಯ ಬಡ್ಡಿದರವನ್ನು ಕೂಡಾ ಕಡಿತಗೊಳಿಸಲು ಮುಂದಾಗಿದೆ. ಕೋವಿಡ್19 ಸಾಂಕ್ರಾಮಿಕದಿಂದ ತತ್ತರಿಸಿರುವ ಆರ್ಥಿಕತೆಯ ಬೆಳವಣಿಗೆಗೆ ಬೆಂಬಲವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಹಿಂದಿನ 10 ಪಾಲಿಸಿ ಸಭೆಗಳಲ್ಲಿ ಬಡ್ಡಿದರಗಳನ್ನು ದಾಖಲೆ ಮಟ್ಟದಲ್ಲಿ ಕನಿಷ್ಠ ಪ್ರಮಾಣದಲ್ಲಿರಿಸಲು ನಿರ್ಧರಿಸಿತ್ತು. ಪ್ರಸಕ್ತ ಭಾರತೀಯ ರಿಸರ್ವ್ ಬ್ಯಾಂಕ್,ಇತರ ಬ್ಯಾಂಕ್ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ (ರೆಪೊ) ಶೇ.3 ಹಾಗೂ ಇತರ ಸಾಲಿಗರಿಂದ ಸಾಲ ಪಡೆಯುವ ಮೇಲಿನ ಬಡ್ಡಿದರವನ್ನು 3.35 ಶೇಕಡದಲ್ಲಿಯೇ ಸ್ಥಿರಗೊಳಿಸಿರುವುದರಿಂದ ಕೇಂದ್ರ ಸರಕಾರ ಇಪಿಎಫ್ ಬಡ್ಡಿದರದಲ್ಲಿ ಇಳಿಕೆ ಮಾಡಲು ನಿರ್ಧರಿಸಿದೆಯೆನ್ನಲಾಗಿದೆ.







