ಪುತ್ತೂರು: ನೇಣು ಬಿಗಿದು ಯುವಕ ಆತ್ಮಹತ್ಯೆ
ಪುತ್ತೂರು: ಅವಿವಾಹಿತ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕರ್ನಾಟಕ-ಕೇರಳ ಗಡಿಯ ಈಶ್ವರಮಂಗಲದ ಮೈಯಳ ಎಂಬಲಿ ಶನಿವಾರ ನಡೆದಿದೆ.
ಈಶ್ವರಮಂಗಲದ ಮೈಯಳ ನಿವಾಸಿ ಜೀವನ್(24) ಮೃತಪಟ್ಟ ಯುವಕ. ಈತ ಲೈಟಿಂಗ್ಸ್, ಸೌಂಡ್, ಶಾಮಿಯಾನ ಮುಂತಾದ ಕೆಲಸ ನಿರ್ವಹಿಸುತ್ತಿದ್ದ. ಈತ ದೇಲಂಪಾಡಿ ಹಿಂದೂ ಐಕ್ಯ ವೇದಿಕೆ ಘಟಕದ ಕಾರ್ಯಕರ್ತ. ಮೃತರು ತಂದೆ, ತಾಯಿ ಮತ್ತು ಕುಟುಂಬಸ್ಥರನ್ನು ಅಗಲಿದ್ದಾನೆ.
Next Story