ಸುರತ್ಕಲ್ ಟೋಲ್ ವಿರೋಧಿ ಸಮಿತಿಗೆ ಪ್ರಶ್ನೆ: ಆಪತ್ಬಾಂಧವ ಆಸೀಫ್

ಉಡುಪಿ : ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಬೆಂಗಳೂರಿನಲ್ಲಿ ಸಭೆ ನಡೆಸಿ ಸುರತ್ಕಲ್ ಟೋಲ್‌ಗೇಟ್‌ನ್ನು ಹೆಜಮಾಡಿ ಟೋಲ್‌ಗೇಟ್ ಜೊತೆ ವಿಲೀನಗೊಳಿಸುವ ಬಗ್ಗೆ ತೀರ್ಮಾನಿಸಿದ್ದರು. ಆದರೆ 2017ರಲ್ಲಿ ಆರಂಭಗೊಂಡ ಸುರತ್ಕಲ್ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯು ಈ ಎರಡು ಟೋಲ್ ಕೇಂದ್ರಗಳು ಈವರೆಗೆ ವಿಲೀನಗೊಳ್ಳದ ಸರಕಾರದ ಆದಶವನ್ನು ಯಾಕೆ ಪ್ರಶ್ನಿಸಿಲ್ಲ ಹಾಗೂ ಈ ಬಗ್ಗೆ ಯಾಕೆ ಈವರೆಗೆ ಉಗ್ರ ಹೋರಾಟ ಮಾಡಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಆಪತ್ಬಾಂಧವ ಆಸೀಫ್ ಪ್ರಶ್ನಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2018ರ ಫೆ.17ರಂದು ನಡೆದ ಪ್ರತಿಭಟನೆಯಲ್ಲಿ ೩-೪ ತಿಂಗಳಲ್ಲಿ ಈ ಟೋಲ್ ವಿಲೀನಗೊಳ್ಳುತ್ತದೆ ಎಂದು ಸಮಿತಿಯವರು ಹೇಳಿಜದ್ದರು. ಆದರೆ ಅವರು ಜ ಜನರಿಗೆ ಯಾವುದೇ ನ್ಯಾಯ ಕೊಡಿಸಿಲ್ಲ. ಈ ಸಮಿತಿಯವರು ಕೂಡ ಕೇವಲ ಭರವಸೆ ಮಾತಿಗೆ ಮಾತ್ರ ಸೀಮಿತವಾಗಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತರಾದ ಅನ್ಸಾರ್ ಅಹ್ಮದ್, ಲೋಕೇಶ್ ಪಡುಬಿದ್ರೆ, ಹಸನ್ ಬಾವಾ ಉಪಸ್ಥಿತರಿದ್ದರು.
Next Story