ಉಡುಪಿ: ಸ್ಕ್ರಾಚ್ ಕಾರ್ಡಿನ ಹಣ ಪಡೆಯುವುದಕ್ಕಾಗಿ ಲಕ್ಷಾಂತರ ರೂ. ವಂಚನೆ

ಉಡುಪಿ : ಸ್ಕ್ರಾಚ್ ಕಾರ್ಡಿನ ಹಣ ಪಡೆಯುವುದಕ್ಕಾಗಿ ಲಕ್ಷಾಂತರ ರೂ. ಮೋಸ ಹೋಗಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಬೀಜಾಡಿಯ ಆದಂ ಬ್ಯಾರಿ (48) ಎಂಬವರಿಗೆ ಜ.18ರಂದು ನ್ಯಾಪ್ಟಾಲ್ ಆನ್ಲೈನ್ ಶಾಪಿಂಗ್ ವಿನ್ ಕಾರ್ಡ್ ಅಂಚೆ ಮೂಲಕ ಬಂದಿದ್ದು ಅದರಲ್ಲಿ 11,50,000 ರೂ. ಬಹುಮಾನ ಬಂದಿರುವುದಾಗಿ ನಮೂದಿಸಲಾಗಿತ್ತು. ಈ ಬಗ್ಗೆ ಆದಂ ಬ್ಯಾರಿ, ಕಾರ್ಡ್ನಲ್ಲಿದ್ದ ಮೊಬೈಲ್ಗೆ ಕರೆ ಮಾಡಿದ್ದರು. ಬಳಿಕ ಅಪರಿಚಿತ ವ್ಯಕ್ತಿ ನ್ಯಾಪ್ಟಾಲ್ ಸಂಸ್ಥೆಯವರೆಂದು ನಂಬಿಸಿ ಆದಂ ಅವರಿಗೆ ಕರೆಯನ್ನು ಮಾಡಿ ಬೇರೆ ಬೇರೆ ಕಾರಣ ಹೇಳಿ ಹಂತಹಂತವಾಗಿ ಒಟ್ಟು 10,71,938 ರೂ. ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ಡಿಪಾಸಿಟ್ ಮಾಡಿಸಿಕೊಂಡರು.
ಆರೋಪಿಗಳು ಆದಂ ಅವರಿಗೆ ಬಹುಮಾನದ ಹಣವನ್ನು ನೀಡದೆ, ಡಿಪಾಸಿಟ್ ಮಾಡಿಸಿಕೊಂಡ ಹಣವನ್ನು ಕೂಡ ವಾಪಾಸ್ಸು ನೀಡದೆ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
Next Story