ಬೆಳ್ತಂಗಡಿ; ಮೃತ್ಯುಂಜಯ ನದಿಯಲ್ಲಿ ಮುಳುಗಿ ಯುವಕ ಮೃತ್ಯು

ಬೆಳ್ತಂಗಡಿ; ಚಾರ್ಮಾಡಿ ಗ್ರಾಪಂ ವ್ಯಾಪ್ತಿಯ ಅನಾರು ಎಂಬಲ್ಲಿ ಸ್ಥಳೀಯ ಯುವಕನೋರ್ವ ಮೃತ್ಯುಂಜಯ ನದಿಗೆ ಸ್ನಾನಕ್ಕೆ ತೆರಳಿದ ವೇಳೆ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ.
ನಡ್ತಿಲು ಹೊಯ್ಗೆಗದ್ದೆ ಜತ್ತನ್ನ ಎಂಬವರ ಪುತ್ರ ಸತೀಶ್ (35) ಮೃತ ಯುವಕ ಎಂದು ಗುರುತಿಸಲಾಗಿದೆ.
ಅಡಕೆ ಕೊಯ್ಲು ಪರಿಣಿತರಾಗಿದ್ದ ಇವರಿಗೆ ತಂದೆ, ತಾಯಿ, ಪತ್ನಿ, ಪುತ್ರಿ ಇದ್ದಾರೆ.
Next Story





