ದುಬೈ: ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ಯುಎಇ ಸಮಿತಿ ವತಿಯಿಂದ ಹೈದರ್ ಅಲಿ ಶಿಹಾಬ್ ತಂಙಳ್ ಅನುಸ್ಮರಣೆ

ದುಬೈ: ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ಯುಎಇ ಸಮಿತಿ ವತಿಯಿಂದ ಇತ್ತೀಚೆಗೆ ನಿಧನರಾದ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಉಪಾಧ್ಯಕ್ಷರು, ಮುಸ್ಲಿಂ ಲೀಗ್ ಕೇರಳ ರಾಜ್ಯಾಧ್ಯಕ್ಷರು, ಮುಸ್ಲಿಂ ಉಮ್ಮತ್ತಿನ ನೇತಾರರು ಆದ ಸೈಯ್ಯದ್ ಹೈದರ್ ಅಲಿ ಶಿಹಾಬ್ ತಂಙಳ್ ಅವರ ಮೇಲೆ ಮಯ್ಯತ್ತ್ ನಮಾಝ್ ಮತ್ತು ತಹ್ಳೀಲ್ ಸಮರ್ಪಣೆ ದುಬೈ ಲ್ಯಾಂಡ್ ಮಾರ್ಕ್ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ರಾತ್ರಿ ಸಮಿತಿಯ ಉಪಾಧ್ಯಕ್ಷ ಶಂಸುದ್ದೀನ್ ಸೂರಲ್ಪಾಡಿ ಅಧ್ಯಕ್ಷತೆಯಲ್ಲಿ ನಡೆಯಿತು.
ದಾರುನ್ನೂರು ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಮುಹಮ್ಮದ್ ಮಾಡಾವು ಅವರ ನೇತೃತ್ವದಲ್ಲಿ ಮಜ್ಲಿಸ್ಸುನ್ನೂರ್ ಮತ್ತು ದುವಾದೊಂದಿಗೆ ಕಾರ್ಯಕ್ರಮವು ಚಾಲನೆಗೊಂಡಿತು. ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ಯುಎಇ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಮೌಲವಿ ಕಲ್ಲೆಗ ಸ್ವಾಗತಿಸಿದರು.
ಕಾರ್ಯಕ್ರಮದ ಕೇಂದ್ರ ಬಿಂದು, ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಅಬ್ದುಲ್ ಸಲಾಂ ಬಾಖವಿ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅಗಲಿದ ಹೈದರ್ ಅಲಿ ಶಿಹಾಬ್ ತಂಙಳ್ ಮತ್ತು ಸಮಸ್ತ ನೇತಾರರ ಜೀವನ ಶೈಲಿ, ಆದರ್ಶಗಳು ಮತ್ತು ಸಾಮಾಜಿಕ ಸೇವೆ, ಸಾಂತ್ವನ ಕೆಲಸಗಳ ಬಗ್ಗೆ ಮನ ಮುಟ್ಟುವಂತೆ ವಿವರಿಸಿ ನಾವು ಅವರನ್ನು ಹಿಂಬಾಲಿಸಬೇಕು ಮತ್ತು ಅವರ ಜೀವನ ಚರ್ಯೆ ಅನುಸರಿಸಬೇಕು ಅದರಿಂದ ಸಿಗುವ ಪ್ರತಿಫಲ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ದುಬೈ ಸುನ್ನಿ ಸೆಂಟರ್ ಮದ್ರಸದ ಸದರ್ ಉಸ್ತಾದರಾಗಿ ನೇಮಕಗೊಂಡ ಇಬ್ರಾಹಿಮ್ ಫೈಝಿ ಅವರನ್ನು ಸಮಿತಿಯ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ದಾರುನ್ನೂರು ದಾವತ್ ಇ ಇಫ್ತಾರ್ ಕಾರ್ಯಕ್ರಮದ ಪೋಸ್ಟರ್ ಸಮಿತಿಯ ನೇತಾರರು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಯುಎಇ ಸಮಸ್ತ ವಿದ್ಯಾ ಸಂಸ್ಥೆಗಳ ಮುಖ್ಯಸ್ಥರಾದ ಮೊಯಿದೀನ್ ಕುಟ್ಟಿ ಹಾಜಿ ದಿಬ್ಬ, ಶೆರೀಫ್ ಕಾವು, ಉಸ್ತಾದ್ ಅಲಿ ಹಸನ್ ಫೈಝಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಸಭಾ ಕಾರ್ಯಕ್ರಮದಲ್ಲಿ ಅಬ್ದುಲ್ ಖಾದರ್ ಆಸ್ಹದಿ, ಅಲಿ ಹಸನ್ ಫೈಝಿ, ಬದ್ರುಲ್ ಮುನೀರ್ ಫೈಝಿ
ಉಸ್ತಾದ್ ಸಿರಾಜುದ್ದೀನ್ ಫೈಝಿ ಉಪಸ್ಥಿತರಿದ್ದರು.
ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ಯುಎಇ ಸಮಿತಿಯ ಕಾರ್ಯದರ್ಶಿ ಅಶ್ರಫ್ ಪರ್ಲಡ್ಕ ಅವರು ಕಾರ್ಯಕ್ರಮ ನಿರೂಪಿಸಿ, ಧನ್ಯವಾದಗೈದರು.






.jpeg)
.jpeg)


