Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸಮಾಜ ಘಾತುಕತನ

ಸಮಾಜ ಘಾತುಕತನ

ಯೋಗೇಶ್ ಮಾಸ್ಟರ್ಯೋಗೇಶ್ ಮಾಸ್ಟರ್13 March 2022 5:37 PM IST
share
ಸಮಾಜ ಘಾತುಕತನ

ಕಾನೂನು ಬಾಹಿರ ಕೃತ್ಯಗಳು ಎಂದು ಯಾವುದನ್ನು ಅಪರಾಧ ಎಂದು ಕರೆಯುತ್ತೇವೆಯೋ ಅದಕ್ಕಿಂತ ಮಿಗಿಲಾದ ಅನೇಕ ಅಪರಾಧಗಳು ಸಾಮಾನ್ಯವಾಗಿದ್ದು ಅವನ್ನು ಕಾನೂನಿನ ಚೌಕಟ್ಟಿಗೆ ಒಳಪಡಿಸಲಾಗುವುದೇ ಇಲ್ಲ. ಅದರಲ್ಲೂ ಅಪರಾಧಿಗಳನ್ನಾಗಿ ರೂಪಿಸುವಂತಹ ಕೃತ್ಯವು ಇನ್ನೂ ಗುರುತರವಾದದ್ದು ಮತ್ತು ಗಂಭೀರವಾದದ್ದಾದರೂ ಕೂಡಾ ಅವುಗಳನ್ನು ಅಪರಾಧ ಎಂದು ಗುರುತಿಸುವುದಿಲ್ಲ ಹಾಗೂ ಅವನ್ನು ಮಾಡುವವರನ್ನು ಅಪರಾಧಿಗಳು ಎಂದು ಕರೆಯುವುದೇ ಇಲ್ಲ.

ಅಪರಾಧಗಳೂ ವ್ಯವಸ್ಥೆಯ ಭಾಗವಾಗಿ ಹೋಗುತ್ತವೆ. ಲಂಚ ಮತ್ತು ವಶೀಲಿಯಂತಹ ವಿಷಯಗಳು ಸರಕಾರಿ ವ್ಯವಹಾರದ ಭಾಗವಾಗಿ ಒಪ್ಪಿಕೊಂಡಿರುವಂತೆ. ಅದಕ್ಕೆ ವಿದ್ಯಾವಂತರ ಕಾಣಿಕೆ ಬಹಳ ಉನ್ನತ ಪ್ರಮಾಣದಲ್ಲಿರುತ್ತದೆ. ಭ್ರಷ್ಟಾಚಾರ ಮಾತ್ರವಲ್ಲ ಹಿಂಸಾಚಾಕ್ಕೂ ಅವರ ಮನ್ನಣೆ ಇರುತ್ತದೆ.

ವಿದ್ಯಾವಂತರು ಬುದ್ಧಿವಂತರು ಎಂದು ಕರೆಸಿಕೊಳ್ಳುವ ವರ್ಗದವರಿಗೆ ವಿದ್ಯಾಭ್ಯಾಸವಾಗಿರುತ್ತದೆ, ಆರ್ಥಿಕವಾಗಿ ಸಬಲರಾಗಿರುತ್ತಾರೆ. ಮನೆಯ ಜವಾಬ್ದಾರಿಗಳಿರುತ್ತವೆ. ಉನ್ನತ ಹುದ್ದೆಯೂ ಇರುತ್ತದೆ. ಸರಕಾರದ ಅಥವಾ ಇನ್ನಾವುದಾದರೂ ಸಾಮಾಜಿಕ ಸಂಸ್ಥೆಯ ಭಾಗವೂ ಆಗಿರುತ್ತಾರೆ. ತೆರಿಗೆದಾರರಾಗಿರುತ್ತಾರೆ. ಅವರೂ ಕೂಡಾ ದೊಂಬಿ, ಗಲಭೆ ಮಾಡುವವರ ಹಿಂಸಾತ್ಮಕ ಮನಸ್ಥಿತಿ ಮತ್ತು ಅಸಹನೀಯ ಧೋರಣೆಗಳನ್ನು ಹೊಂದಿರುತ್ತಾರೆ. ಆದರೆ ಅವರು ನೇರವಾಗಿ ರಸ್ತೆಗೆ ಇಳಿಯುವುದಿಲ್ಲ. ಆದರೆ ಅಂತಹವು ಆಗಬೇಕೆಂದು ಬಯಸುತ್ತಾರೆ.

ಅವರಲ್ಲಿ ಕೆಲವರಿಗಂತೂ ನಾಗರಿಕ ದಂಗೆ, ದೊಂಬಿ, ದಾಳಿಗಳೂ ಕ್ರೀಡೆಗಳೇ, ಮನರಂಜನೆಗಳೇ. ಏಕೆಂದರೆ ಈ ಗಲಾಟೆ, ದೊಂಬಿ ಅವರಿಗೆ ಸೋಂಕದು. ಅವರು ಯಾವಾಗಲೂ ಸುರಕ್ಷಿತ. ಹಿಂದೆ ಕತ್ತಿಕಾಳಗವೇ ಮೊದಲಾಗಿ ಹೊಡೆದಾಟದ ರಕ್ತಸಿಕ್ತ ಕ್ರೀಡೆಗಳನ್ನು ಕ್ರೀಡಾಂಗಣದಲ್ಲಿಯೇ ‘‘ಭಲೇ ಭಲೇ’’ ಎಂದು ಗ್ಲ್ಯಾಡಿಯೇಟರ್‌ಗಳನ್ನು ಹುರಿದುಂಬಿಸುತ್ತಿದ್ದ ಪೂರ್ವಜರ ರಕ್ತದ ವಾನೆ ಇನ್ನೂ ಇವರಲ್ಲಿ ಜೀವಂತವಾಗಿದೆ.

ಮಕ್ಕಳು ಚಿಟ್ಟೆಯ ರೆಕ್ಕೆ ಕೀಳುವುದನ್ನು, ನಾಯಿಯ ಬಾಲಕ್ಕೆ ಸರ ಪಟಾಕಿಯನ್ನು ಕಟ್ಟುವುದನ್ನು, ಕತ್ತೆಯ ಬಾಲಕ್ಕೆ ಡಬ್ಬ ಕಟ್ಟಿ ಓಡಿಸುವುದನ್ನು, ಓತಿಕ್ಯಾತನ ಹಿಡಿದು ರಸ್ತೆಗೆಸೆದು ಅದರ ಮೇಲೆ ವಾಹನ ಹರಿಯುವುದು ನೋಡುವುದನ್ನು, ಇರುವೆಗಳನ್ನು ಹೊಸಕುವುದನ್ನು ಅಲ್ಲಲ್ಲಿ ನೋಡುತ್ತಿರುತ್ತೇವೆ. ಈ ಮಕ್ಕಳದು ಕ್ರೌರ್ಯಾಮೋದ ಅಥವಾ ಸ್ಯಾಡಿಸ್ಟ್ ಖುಶಿ ಎಂದು ಅನಿಸಲಿಲ್ಲವೇ? ಮಕ್ಕಳಿಗೆ ಗೊತ್ತಾಗುವುದಿಲ್ಲ, ಈಗ ಹಾಗೆ ಮಾಡುವುದು ಸಹಜ, ದೊಡ್ಡವರಾದ ಮೇಲೆ ಸರಿಹೋಗುತ್ತಾರೆ ಎಂದು ಎಂದೂ ಅಂದುಕೊಳ್ಳಬೇಡಿ.

ಈ ಮಕ್ಕಳು ದೊಡ್ಡವರಾದ ಮೇಲೆ ವಿದ್ಯಾವಂತರೂ, ಬುದ್ಧಿವಂತರೂ, ಅಧಿಕಾರಿಗಳೂ, ಜವಾಬ್ದಾರಿಯುತ ಸ್ಥಾನ, ಸಾಮಾಜಿಕ ಮಾನ್ಯತೆಗಳನ್ನು ಹೊಂದಿದ್ದರೂ ಸಾಮಾಜಿಕ ಅಸ್ವಾಸ್ಥ್ಯಕ್ಕೆ, ಕ್ರೌರ್ಯಕ್ಕೆ ತಮ್ಮ ಕಾಣ್ಕೆಗಳನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನೀಡುತ್ತಿರುತ್ತಾರೆ. ಏಕೆಂದರೆ ಅವರ ಮನಸ್ಸಿನ ಆಳದಲ್ಲಿ ಅಜ್ಞಾತವಾಗಿ ಕೆಲಸ ಮಾಡುತ್ತಿರುವ ಅನೇಕ ವಿಷಯಗಳಿರುತ್ತವೆ. ಅಡಗಿರುವ ಕಾರಣಗಳ ಮೂಲಗಳನ್ನು ಹೀಗೇ ಎಂದು ನಿರ್ದಿಷ್ಟವಾಗಿ ಬೊಟ್ಟು ಮಾಡಿ ಹೇಳಲಾಗದಿದ್ದರೂ ಒಂದಷ್ಟು ಮೂಲಗಳನ್ನು ಗುರುತಿಸಬಹುದು.

ಸಾಮಾನ್ಯವಾಗಿ ಇರಬಹುಾದ ಮನೋಜ್ಞಾತ ಕಾರಣಗಳೆಂದರೆ;

1. ಸಾಂಪ್ರದಾಯಿಕವಾದಂತಹ (ಜಾತಿ/ಧರ್ಮದ) ವೈಷಮ್ಯದಿಂದ ೇಡಿನ ಭಾವವನ್ನು ಹೊಂದಿರುತ್ತಾರೆ.

2. ತಮಗಿರುವ ಆರ್ಥಿಕ ಸಬಲತೆಯಿಂದಾಗಿ, ಸಾಮಾಜಿಕ ಸ್ಥಾನಮಾನದ ಭದ್ರತೆಯಿಂದಾಗಿ, ರಾಜಕೀಯ ಮತ್ತು ವ್ಯವಸ್ಥೆಯಲ್ಲಿರುವವರ ಕೃಪೆ ಅಥವಾ ಸ್ಥಾನದಿಂದಾಗಿ ಭಯವಿರದವರಾಗಿರುತ್ತಾರೆ. 3. ಅಹಂಕಾರ, ಢಂಬಾಚಾರಗಳೂ ಕೂಡಾ ಕಂದಾಚಾರಗಳಂತೆ ಕುಟುಂಬಗಳಲ್ಲಿ ತಲೆಮಾರುಗಳಿಂದಲೇ ಬಂದಿರುತ್ತವೆ. ನಾವು, ನಮ್ಮ ಮನೆತನದವರು ಯಾರಿಗೂ ತಲೆ ಬಾಗಲ್ಲ. ನಾವಿರುವುದೇ ಆಳುವುದಕ್ಕೆ. ನಮ್ಮ ತಾತ ಮುತ್ತಾತಂದಿರು ಇಷ್ಟು ದರ್ಪದಿಂದ ಆಳುತ್ತಿದ್ದರು ಅಥವಾ ವರ್ತಿಸುತ್ತಿದ್ದರು; ಇಂತಹ ಧೋರಣೆಗಳು ಪ್ರತಿಷ್ಠೆಯ ಸಂಕೇತಗಳಾಗಿರುತ್ತವೆ. ಹಾಗಾಗಿ ಅವರಲ್ಲಿ ಇತರರನ್ನು ಸಮಾನವಾಗಿ ನೋಡುವುದು, ಸೌಹಾರ್ದದಿಂದ ಇರುವುದು, ಇತರರ ಅಭಿಪ್ರಾಯಗಳಿಗೆ ಬೆಲೆ ನೀಡುವುದು ಇರುವುದೇ ಇಲ್ಲ. ಹಾಗೆ ಇತರರದನ್ನು ಒಪ್ಪಿಕೊಳ್ಳುವುದು ತಮ್ಮ ಘನತೆಗೆ ಚ್ಯುತಿ ಎಂಬಂತಹ ಮನೋಭಾವ ಇರುತ್ತದೆ. ಇನ್ನು ಔದಾರ್ಯವೆಂಬುದು ಅಥವಾ ಅಂತಃಕರಣವೆಂಬುದು ಕೂಡಾ ಇರುವುದಿಲ್ಲ.

ಇವರು ಸಮಾಜಮುಖಿಯಾಗಿ ಚಿಂತನೆ ಮಾಡುವುದಿರಲಿ, ಹಾಗೆ ಮಾಡುವುದರಿಂದ ನಮಗೇನು ಲಾಭ ಎಂದು ಕೇಳುತ್ತಾರೆ. ನಮ್ಮದನ್ನು ನಾವು ನೋಡಿಕೊಂಡರಾಗದೇ ಎಂದು ಭಾವಿಸುತ್ತಾರೆ. 4. ಬಾಲ್ಯದಲ್ಲಿಯೇ ಮೊಳಕೆಯೊಡೆದಿದ್ದ ಕ್ರೌರ್ಯಾಮೋದ (ಸ್ಯಾಡಿಸಂ) ಮನಸ್ಥಿತಿಯು ಗಮನಕ್ಕೆ ಮತ್ತು ಚಿಕಿತ್ಸೆಗೆ ಒಳಪಡದೇ ವಯಸ್ಕರಾದಾಗ ಸದೃಢವಾಗಿ ಬೆಳೆದಿರುತ್ತದೆ. ತಾವು ಕಣಕ್ಕಿಳಿಯದೆ, ಇತರರನ್ನು ಗ್ಲ್ಯಾಡಿಯೇಟರ್‌ಗಳನ್ನಾಗಿ ಮಾಡಿ ಕಣಕ್ಕಿಳಿಸುತ್ತಾರೆ.

ಇಲ್ಲಿ ಸಮಾಜ ಘಾತುಕತನದಲ್ಲಿ ಎರಡು ವರ್ಗಗಳಿವೆ. ಒಂದು ಭೌತಿಕವಾಗಿ ನೇರ ಸಮಾಜದ ಮೇಲೆ ಬೆಂಕಿಯಂತೆ ಉರಿದಾಳಿ ಮಾಡುವುದು. ಮತ್ತೊಂದು ತಣ್ಣನೆ ತಮ್ಮ ಸ್ವಾರ್ಥದ ಹೊದಿಕೆಯಲ್ಲಿ ಬೆಚ್ಚಗಿದ್ದು ಮೊದಲನೆಯ ವರ್ಗದ ಸೃಷ್ಟಿಗೆ ಕಾರಣವಾಗುವುದು. ಇವರಲ್ಲಿ ಬಹುಪಾಲು ಅಪರಾಧಿಗಳಾಗಿ ಗುರುತಿಸಲ್ಪಡುವುದಿಲ್ಲ. ಆದರೆ, ಅಪರಾಧಿಗಳನ್ನು ರೂಪಿಸುವುದರಲ್ಲಿ ಬಹಳ ಗಂಭೀರವಾದ ಪ್ರೇರಣೆಗಳಾಗಿರುತ್ತಾರೆ. ಪ್ರಮುಖ ಪಾತ್ರವನ್ನು ವಹಿಸುತ್ತಾರೆ.

share
ಯೋಗೇಶ್ ಮಾಸ್ಟರ್
ಯೋಗೇಶ್ ಮಾಸ್ಟರ್
Next Story
X