ಉಡುಪಿ: ಸತತ ಐದನೇ ದಿನವೂ ಕೋವಿಡ್ ಪಾಸಿಟಿವ್ ಶೂನ್ಯ
![ಉಡುಪಿ: ಸತತ ಐದನೇ ದಿನವೂ ಕೋವಿಡ್ ಪಾಸಿಟಿವ್ ಶೂನ್ಯ ಉಡುಪಿ: ಸತತ ಐದನೇ ದಿನವೂ ಕೋವಿಡ್ ಪಾಸಿಟಿವ್ ಶೂನ್ಯ](https://www.varthabharati.in/sites/default/files/images/articles/2022/03/13/327981-1647185386.jpg)
ಉಡುಪಿ : ಜಿಲ್ಲೆಯಲ್ಲಿ ಸತತ ಐದನೇ ದಿನವಾದ ಇಂದೂ ಯಾರೊಬ್ಬರಲ್ಲೂ ಹೊಸದಾಗಿ ಕೋವಿಡ್-19 ಸೋಂಕು ಪತ್ತೆಯಾಗಿಲ್ಲ. ರವಿವಾರ ಜಿಲ್ಲೆಯ 1003 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಯಾರೂ ಸೋಂಕಿಗೆ ಪಾಸಿಟಿವ್ ಬಂದಿಲ್ಲ.
ಉಡುಪಿ ತಾಲೂಕಿನಲ್ಲಿ 821 ಮಂದಿ, ಕುಂದಾಪುರ ತಾಲೂಕಿನಲ್ಲಿ 89 ಹಾಗೂ ಕಾರ್ಕಳ ತಾಲೂಕಿನಲ್ಲಿ 93 ಮಂದಿ ಕೋವಿಡ್ ಸೋಂಕಿನ ಪರೀಕ್ಷೆಗೆ ಒಳಗಾಗಿದ್ದಾರೆ.
ದಿನದಲ್ಲಿ ಇಬ್ಬರು ಸೋಂಕಿನಿಂದ ಚೇತರಿಸಿಕೊಂಡಿದ್ದು, ಸದ್ಯ ಚಿಕಿತ್ಸೆ ಯಲ್ಲಿರುವವರ ಸಂಖ್ಯೆ 24ಕ್ಕಿಳಿದಿದೆ. ಜ.1ರ ನಂತರ ಕೊರೋನಕ್ಕೆ ಪಾಸಿಟಿವ್ ಬಂದವರ ಸಂಖ್ಯೆ18,421 ಆದರೆ, ಚೇತರಿಸಿಕೊಂಡವರ ಸಂಖ್ಯೆ 18482 ಆಗಿದೆ. ಇಂದು ಸಹ ಜಿಲ್ಲೆಯಲ್ಲಿ ಸೋಂಕಿಗೆ ಯಾರೂ ಬಲಿಯಾಗಿಲ್ಲ.
947 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು ಒಟ್ಟು 947 ಮಂದಿ ಕೋವಿಡ್ ಲಸಿಕೆಯನ್ನು ಪಡೆದಿದ್ದಾರೆ. ಇಬ್ಬರು ಮುನ್ನೆಚ್ಚರಿಕೆಯ ಒಂದು ಡೋಸ್ ಲಸಿಕೆ ಪಡೆದರೆ, ಒಬ್ಬ ಮೊದಲ ಡೋಸ್ ಹಾಗೂ 944 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.
Next Story