ಕಿನ್ಯ: ಗೋಲ್ಡನ್ ವೆಲ್ಫೇರ್ ಆರೋಗ್ಯ ಸೇವಾ ಸಂಸ್ಥೆಯ ವಾರ್ಷಿಕೋತ್ಸವ

ಮಂಗಳೂರು : ಗೋಲ್ಡನ್ ವೆಲ್ಫೇರ್ ಆರೋಗ್ಯ ಸೇವಾ ಸಂಸ್ಥೆಯ ಪ್ರಥಮ ವಾರ್ಷಿಕೋತ್ಸವವು ರವಿವಾರ ಕಿನ್ಯ ಬೆಳರಿಂದೆ ಸರಕಾರಿ ಹಿ.ಪ್ರಾ. ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಅಬ್ಬಾಸ್ ಹಾಜಿ ಕುರಿಯಕ್ಕಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕರ್ನಾಟಕ ಮುಸ್ಲಿಮ್ ಜಮಾಅತ್‌ನ ಉಳ್ಳಾಲ ತಾಲೂಕು ಅಧ್ಯಕ್ಷ ಹಾಜಿ ಅಲಿಕುಂಞಿ ಪಾರೆ ಟ್ರಸ್ಟ್, ಸಂಸ್ಥೆಗಳ ನೋಂದಣಿ ಬಗ್ಗೆ ವಿವರಣೆ ನೀಡಿದರು.
ಕಿನ್ಯ ಜಮಾಅತ್ ಅಧ್ಯಕ್ಷ ಹಾಜಿ ಇಸ್ಮಾಯೀಲ್ ಚಾಯರವಲಚ್ಚಿಲ್, ಜಮಾಅತ್‌ನ ಮಾಜಿ ಕಾರ್ಯದರ್ಶಿ ಅಬೂ ಸಾಲಿಹ್ ಹಾಜಿ ಕುರಿಯಕ್ಕಾರ್, ದ.ಕ. ಜಿಲ್ಲಾ ಆಯುಷ್ ಅಧಿಕಾರಿ ಡಾ.ಮುಹಮ್ಮದ್ ಇಕ್ಬಾಲ್ ಮಾತನಾಡಿದರು.
ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಮದ್ ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ಹಮೀದ್ ಕಿನ್ಯ ಸ್ವಾಗತಿಸಿದರು.
Next Story





