ಕೋವಿಡ್ ಆರಂಭವಾದ ಬಳಿಕ ಭಾರತದಲ್ಲಿ ಅತಿ ಕಡಿಮೆ ದೈನಂದಿನ ಪ್ರಕರಣ ದಾಖಲು

ಹೊಸದಿಲ್ಲಿ: ಭಾರತವು ದೈನಂದಿನ ಕೋವಿಡ್- 19 ಪ್ರಕರಣಗಳಲ್ಲಿ ಮತ್ತಷ್ಟು ಕುಸಿತವನ್ನು ಕಂಡಿದೆ. ಇದೀಗ 2,503 ಹೊಸ ಸೋಂಕುಗಳು ದಾಖಲಾಗಿವೆ. ಇದು ಮೇ 2020 ರಿಂದ ಅತ್ಯಂತ ಕಡಿಮೆ ಪ್ರಕರಣವಾಗಿದೆ. ಆದರೆ ಸಕ್ರಿಯ ಪ್ರಕರಣಗಳು 36,168 ಕ್ಕೆ ಇಳಿದಿದೆ ಎಂದು ಸೋಮವಾರ ಕೇಂದ್ರ ಆರೋಗ್ಯ ಸಚಿವಾಲಯದ ಹೊಸ ಅಂಕಿ-ಅಂಶಗಳು ತಿಳಿಸಿವೆ.
ಹೊಸ ಪ್ರಕರಣಗಳೊಂದಿಗೆ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 4,29,93,494 ಕ್ಕೆ ಏರಿದೆ.
ಇಂದು 27 ಸಾವಿನ ಪ್ರಕರಣಗಳೊಂದಿಗೆ ಸಾವಿನ ಸಂಖ್ಯೆ 5,15,877 ಕ್ಕೆ ಏರಿದೆ ಎಂದು ಬೆಳಿಗ್ಗೆ 8 ಗಂಟೆಗೆ ನವೀಕರಿಸಿದ ಡೇಟಾ ತಿಳಿಸಿದೆ.
ಸಾಂಕ್ರಾಮಿಕ ರೋಗ ಆರಂಭವಾದಾಗಿನಿಂದ ಭಾರತವು ಅತಿ ಕಡಿಮೆ ದೈನಂದಿನ ಕೋವಿಡ್ ಪ್ರಕರಣಗಳನ್ನು (2,503) ದಾಖಲಿಸಿದೆ.
Next Story





