ಯುವ ಜಿಮ್ನಾಸ್ಟ್ ಪ್ರತಿಷ್ಠಾ ಸಮಂತಾ ವಿಶ್ವಕಪ್ಗೆ ಆಯ್ಕೆ

photo pti
ಅಗರ್ತಲ, ಮಾ.13: ಪಶ್ಚಿಮಬಂಗಾಳದ ಯುವ ಜಿಮ್ನಾಸ್ಟ್ ಪ್ರತಿಷ್ಠಾ ಸಮಂತಾ ಮುಂಬರುವ ಈಜಿಪ್ಟ್ ಹಾಗೂ ಅಝರ್ಬೈಜಾನ್ನಲ್ಲಿ ನಡೆಯಲಿರುವ ವಿಶ್ವಕಪ್ನಲ್ಲಿ ಭಾಗವಹಿಸಲಿರುವ ಭಾರತದ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
2019ರಲ್ಲಿ ಪುಣೆಯಲ್ಲಿ ನಡೆದ ಖೇಲೊ ಇಂಡಿಯಾ ಯೂತ್ ಗೇಮ್ಸ್ನ 17 ವರ್ಷದೊಳಗಿನವರ ಮಹಿಳಾ ಆಲ್ರೌಂಡ್ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ಸ್ಪರ್ಧೆಯಲ್ಲಿ 18ರ ಹರೆಯದ ಪ್ರತಿಷ್ಠಾ ಚಿನ್ನದ ಪದಕ ಜಯಿಸಿದ್ದರು. ಈಜಿಪ್ಟ್ನ ಕೈರೊದಲ್ಲಿ ಮಾರ್ಚ್ 17ರಿಂದ 20ರ ತನಕ ನಡೆಯಲಿ ರುವ ವಿಶ್ವಕಪ್ನಲ್ಲಿ ಸ್ಪರ್ಧಿಸಲಿದ್ದಾರೆ.
ಮಾರ್ಚ್ 29ರಿಂದ ಎಪ್ರಿಲ್ 1ರ ತನಕ ನಡೆಯುವ ಬಾಕು ವಿಶ್ವಕಪ್ನಲ್ಲೂ ಪ್ರತಿಷ್ಠಾ ಭಾಗವಹಿಸಲಿದ್ದಾರೆ.
ಒಲಿಂಪಿಯನ್ ದೀಪಾ ಕರ್ಮಾಕರ್ ಸಾಧನೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಕೋಚ್ ಬಿಶ್ವೇಶ್ವರ ನಂದಿ ಅವರೊಂದಿಗೆ ಕಳೆದ 3 ವರ್ಷಗಳಿಂದ ತ್ರಿಪುರಾದಲ್ಲಿ ಸಮಂತಾ ತರಬೇತಿ ಪಡೆಯುತ್ತಿದ್ದ್ದಾರೆ. ಕಳೆದ 1 ತಿಂಗಳಿನಿಂದ ದಿಲ್ಲಿಯಲ್ಲಿ ನಂದಿಯವರ ಮಾರ್ಗದರ್ಶನದಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ.
‘‘ವಿಶ್ವಮಟ್ಟದಲ್ಲಿ ತನ್ನ ಕೌಶಲ್ಯವನ್ನು ತೋರಿಸಲು ಸಜ್ಜಾಗಿರುವ ಪ್ರತಿಷ್ಠಾ ಪಾಲಿಗೆ ಇದು ಸಿಹಿಸುದ್ದಿ. ಬೋಲ್ಟಿಂಗ್ ಟೇಬಲ್ ಹಾಗೂ ಬ್ಯಾಲನ್ಸಿಂಗ್ ಬೀಮ್ ಸ್ಪರ್ಧೆಗಳಲ್ಲಿ ಪ್ರತಿಷ್ಠಾ ಭಾಗವಹಿಸಲಿದ್ದಾರೆ. ಪ್ರತಿಷ್ಠಿತ ಸ್ಪರ್ಧೆಯಲ್ಲಿ ಪ್ರತಿಷ್ಠಾ ಪದಕ ಜಯಿಸಬಲ್ಲರು’’ ಎಂದು ನಂದಿ ಪಿಟಿಐಗೆ ರವಿವಾರ ತಿಳಿಸಿದ್ದಾರೆ. ವಿಶ್ವಕಪ್ನಲ್ಲಿ 40ರಿಂದ 50 ದೇಶಗಳ ಜಿಮ್ನಾಸ್ಟ್ಗಳು ಭಾಗವಹಿಸಲಿದ್ದಾರೆ. ಭಾರತ ಜಿಮ್ನಾಸ್ಟ್ ತಂಡವು ೋಮವಾರ ಕೈರೊಗೆ ಪ್ರಯಾಣಿಸಲಿದೆ.