ಹನೂರು: ಕೆಎಸ್ಸಾರ್ಟಿಸಿ ಬಸ್ ಪಲ್ಟಿ; ಇಬ್ಬರು ಮೃತ್ಯು, ಮೂವತ್ತಕ್ಕೂ ಹೆಚ್ಚು ಮಂದಿಗೆ ಗಾಯ

ಹನೂರು: ಕೆಎಸ್ಸಾರ್ಟಿಸಿ ಬಸ್ ಒಂದು ಪಲ್ಟಿಯಾಗಿ ಇಬ್ಬರು ಮೃತಪಟ್ಟಿದ್ದು, ಮೂವತ್ತಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ನಡೆದಿದೆ.
ಮೃತಪಟ್ಟ ದುರ್ದೈವಿಗಳು ಪಿಜಿಪಾಳ್ಯ ಗ್ರಾಮದ ರಮೇಶ್ ( 28 ) ಮಳಗನತ್ತ ಗ್ರಾಮದ ಶಿವಮ್ಮ( 69) ಎಂದು ಗುರುತಿಸಲಾಗಿದೆ.
ಸೋಮವಾರ ಮಧ್ಯಾಹ್ನ ಕೆಎಸ್ಸಾರ್ಟಿಸಿ ಬಸ್ ಕೊಳ್ಳೇಗಾಲದಿಂದ ಪಿಜಿಪಾಳ್ಯ ಗ್ರಾಮಕ್ಕೆ ತೆರಳುವ ವೇಳೆ ಮಳೆ ದತ್ತವಾಡದ ಸಮೀಪ ಆಯ ತಪ್ಪಿ ಉರುಳಿ ಬಿದ್ದಿದೆ ಎಂದು ಹೇಳಲಾಗಿದೆ.
ಗಾಯಾಳುಗಳನ್ನು ಸ್ಥಳೀಯರು ರಕ್ಷಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಇನ್ನು ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.







.jpeg)

.jpeg)

