ಹೈಕೋರ್ಟ್ ಆದೇಶದ ಬೆನ್ನಲ್ಲೇ ಕಿಮ್ಸ್ ನಲ್ಲಿ ಕಿಡ್ನಿ ಕಸಿಗೆ ಸಮ್ಮತಿಸಿದ ಸರಕಾರ

ಬೆಂಗಳೂರು, ಮಾ.14: ಹುಬ್ಬಳ್ಳಿ ಕಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಹೈಕೋರ್ಟ್ ಆದೇಶಿಸಿದ ಬೆನ್ನಲ್ಲೇ ಕಿಮ್ಸ್‍ಗೆ ಉಚಿತವಾಗಿ ಕಿಡ್ನಿ ಕಸಿ ಮಾಡುವುದಕ್ಕೆ ರಾಜ್ಯ ಸರಕಾರ ಪರವಾನಿಗೆ ನೀಡಿದೆ.
ಈ ಮೂಲಕ ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿದರೆ ಕಿಡ್ನಿ ಕಸಿಗೆ ಅನುಮತಿ ಪಡೆದ ಏಕೈಕ ಸರಕಾರಿ ಆಸ್ಪತ್ರೆ ಎನ್ನಿಸಿಕೊಂಡಿದೆ ಕಿಮ್ಸ್. ಇಲ್ಲಿಯವರೆಗೆ ಉ-ಕ ಬಡಜನತೆ ಉಚಿತ ಕಿಡ್ನಿ ಕಸಿ ಮಾಡಿಸಿಕೊಳ್ಳಲು ಬೆಂಗಳೂರಿಗೆ ತೆರಳಬೇಕಾದ ಪರಿಸ್ಥಿತಿ ಇತ್ತು.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಲಕ್ಷಾಂತರ ರೂ.ಖರ್ಚು ಮಾಡಬೇಕಿತ್ತು. ಹೀಗಾಗಿ, ಬಡ, ಮಧ್ಯಮ ವರ್ಗದವರು ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಕಿಮ್ಸ್‍ನಲ್ಲೇ ಈ ಸೌಲಭ್ಯ ಸಿಕ್ಕಿ ಕಾರಣ ಈ ಭಾಗದವರಿಗೆ ಅನುಕೂಲವಾಗಲಿದೆ. ಒಂದೂವರೆ ವರ್ಷದ ಹಿಂದೆ ಕಿಡ್ನಿ ಕಸಿಗೆ ಅವಕಾಶ ನಿಡುವಂತೆ ಕೋರಿ ಸರಕಾರಕ್ಕೆ ಕಿಮ್ಸ್ ಪ್ರಸ್ತಾವನೆ ಸಲ್ಲಿಸಿತ್ತು.
ಅಲ್ಲದೆ, ಬೆಂಗಳೂರು ಹೈಕೋರ್ಟ್‍ಗೆ ಕಿಮ್ಸ್ ಆಸ್ಪತ್ರೆಗೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಪದೇ ಪದೇ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಸರಕಾರ ಕಿಡ್ನಿ ಕಸಿಗೆ ಪರವಾನಗಿ ನೀಡಿದೆ.





