ಹಿಜಾಬ್ ತೀರ್ಪು ಹಿನ್ನೆಲೆ; ದ.ಕ.ಜಿಲ್ಲೆಯ ಶಾಲೆ, ಕಾಲೇಜುಗಳಿಗೆ ಮಂಗಳವಾರ ರಜೆ

ಮಂಗಳೂರು : ಹಿಜಾಬ್ ಗೊಂದಲಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ತೀರ್ಪು ನೀಡಲಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ದ.ಕ.ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಸಾರಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸರಕಾರಿ, ಖಾಸಗಿ ಸಹಿತ ಎಲ್ಲಾ ಪ್ರಾಥಮಿಕ, ಪೂರ್ವ ಪ್ರಾಥಮಿಕ ಮತ್ತು ಅಂಗನವಾಡಿಗಳಿಗೂ ಕೂಡ ರಜೆ ಅನ್ವಯವಾಗಲಿದೆ. ಅಲ್ಲದೆ ಮುಂಜಾಗರೂಕತಾ ಕ್ರಮವಾಗಿ ಸೆ.144 ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
Next Story





