ದ.ಕ.ಜಿಲ್ಲೆ: ಕೋವಿಡ್ಗೆ ಓರ್ವ ಬಲಿ, 4 ಮಂದಿಗೆ ಕೊರೋನ ಸೋಂಕು
ಮಂಗಳೂರು : ದ.ಕ.ಜಿಲ್ಲೆಯಲ್ಲಿ ಸೋಮವಾರ ಕೋವಿಡ್ಗೆ ಒಬ್ಬ ಪುರುಷ ಬಲಿಯಾಗಿದ್ದಾರೆ. ಇದರೊಂದಿಗೆ ಈವರೆಗೆ ಕೋವಿಡ್ಗೆ ಬಲಿಯಾದವರ ಸಂಖ್ಯೆ 1849ಕ್ಕೇರಿದೆ.
ಸೋಮವಾರ 4 ಮಂದಿಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿವೆ. ಐದು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ೧,೩೫,೪೫೨ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಸೋಂಕಿತರ ಪೈಕಿ ಒಟ್ಟು ೧,೩೩,೫೮೨ ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಸದ್ಯ ೨೧ ಸಕ್ರಿಯ ಪ್ರಕರಣವಿದೆ. ಕೋವಿಡ್ ಪಾಸಿಟಿವಿಟಿ ದರ ಶೇ.೦.೪೩ ದಾಖಲಾಗಿದೆ.
Next Story