ಕಾರ್ಕಳ ಏಕೀಕರಣದಲ್ಲಿ ಜಿನರಾಜ ಹೆಗ್ಡೆ ಪಾತ್ರ ಹಿರಿದು: ಸಚಿವ ಸುನೀಲ್ ಕುಮಾರ್

ಕಾರ್ಕಳ: ಕರ್ನಾಟಕ ಏಕೀಕರಣದ ಹೊರಾಟದಲ್ಲಿ ಕಾರ್ಕಳದ ಜಿನರಾಜ ಹೆಗ್ಡೆಯರ ಪಾತ್ರ ಹಿರಿದು ಎಂದು ಸಚಿವ ಸುನೀಲ್ ಕುಮಾರ್ ಹೇಳಿದರು.
ಕಾರ್ಕಳ ಉತ್ಸವ ಪ್ರಯುಕ್ತ ಅರಣ್ಯ ಪ್ರಾತ್ಯಕ್ಷಿಕೆ ಹಾಗೂ ವಸ್ತುಪ್ರದರ್ಶನ ಮಳಿಗೆ ಹಾಗೂ ಮಾರಾಟ ಮಳಿಗೆ ಉದ್ಘಾಟಿಸಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಕಾದಿ ಮೇಳ,ಶಿಲ್ಪ ಕಲೆ, ಲಲಿತಾ ಕಲೆ ಸೇರಿದಂತೆ ವಿವಿಧ ಪ್ರದರ್ಶನ ಹಾಗೂ ಮಾರಾಟ ಮಳಿಗೆ ತೆರೆಯಲಾಗಿದೆ. ಮಾರ್ಚ್ ೧೭ರಂದು ಫಲಪುಷ್ಪ ಪ್ರದರ್ಶನ ಈ ಪರಿಸರೆದಲ್ಲಿ ನಡೆಯಲಿದೆ ಎಂದರು.
ಬೆಂಗಳೂರು ಕರ್ನಾಟಕ ಲಲಿತ ಕಲಾ ಅಕಾಡಮಿಯ ಅಧ್ಯಕ್ಷ ಡಿ.ಮಹೇಂದ್ರ, ಬೆಂಗಳೂರು ಶಿಲ್ಪಕಲಾ ಅಕಾಡಮಿ ಅಧ್ಯಕ್ಷ ವೀರಣ್ಣ ಅಕ್ಕಸಾಲಿ, ದಾವಣಗೆರೆ ರಂಗಾಯಣದ ನಿರ್ದೇಶಕ ಯಶವಂತ ಸರದೇಶ ಪಾಂಡೆ, ಉಡುಪಿ ಕೆನರಾ ಬ್ಯಾಂಕ್‌ನ ಕೇಂದ್ರೀಯ ಮುಖ್ಯಸ್ಥ ಎಸ್.ಕೆ.ಕಾಲಿ, ಕುಂದಾಪುರ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಖಾರಿ ಆಶೀಶ್ ಶೆಟ್ಟಿ, ಕುದುರೆಮುಖ ವನ್ಯಜೀವಿ ಉಪಸಂರಕ್ಷಣಾಧಿಕಾರಿ ರುದ್ರನ್ ಐಎಫ್, ಬೆಂಗಳೂರು ಕರ್ನಾಟಕ ಕರಕುಶಲ ನಿಗಮದ ನಿರ್ದೇಶಕಿ ರೂಪಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹ ನಿರ್ದೇಶಕಿ ಪೂರ್ಣಿಮಾ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕಿ ಶಂಕರಿ ವಿದ್ಯಾರ್ಥಿಗಳಾದ ಶ್ರಾವರಿ, ಲಹರಿ ಪ್ರಕಾಶ್, ನೈತಿಕ್ ಶೆಟ್ಟಿ, ಶೈಯಲ್ ನಾಡಗೀತೆ ಹಾಡಿದರು. ಕರುಣಾಕರ ಕೋಟ್ಯಾನ್ ನಿರೂಪಿಸಿದರು. ರೇಷ್ಮಾ ಶೆಟ್ಟಿ ಪ್ರಸ್ತಾವನೆ ಸಲ್ಲಿಸಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಧನ್ಯವಾದವಿತ್ತರು.