ಉಕ್ರೇನ್‌ನ ಲಕ್ಷಾಂತರ ನಿರಾಶ್ರಿತರು ಜರ್ಮನ್‌ಗೆ ಪಲಾಯನ
ಬರ್ಲಿನ್, ಮಾ.14: ರಶ್ಯದ ಆಕ್ರಮಣ ಮತ್ತು ನಿರಂತರ ವಾಯುದಾಳಿಯಿಂದ ಕಂಗೆಟ್ಟ ಉಕ್ರೇನ್‌ನ ನಿವಾಸಿಗಳು ದೇಶ ಬಿಟ್ಟು ಪಲಾಯನ ಮಾಡುತ್ತಿದ್ದು ಸುಮಾರು 1,47,000 ನಿರಾಶ್ರಿತರು ಇದೀಗ ಜರ್ಮನ್ ತಲುಪಿದ್ದಾರೆ ಎಂದು ಜರ್ಮನ್‌ನ ಆಂತರಿಕ ಸಚಿವಾಲಯದ ವಕ್ತಾರರು ಹೇಳಿದ್ದಾರೆ.
ಇದುವರೆಗೆ ಉಕ್ರೇನ್‌ನ 1,46,998 ಮಂದಿ ಜರ್ಮನ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಸಂಖ್ಯೆ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ ಎಂದು ವಕ್ತಾರರು ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.
Next Story





