ಪಂಜಾಬ್: ಕಬಡ್ಡಿ ಟೂರ್ನಿಯಲ್ಲಿ ಆಟಗಾರನ ಗುಂಡಿಕ್ಕಿ ಹತ್ಯೆ

ಜಲಂಧರ್: ಪಂಜಾಬ್‍ನ ಜಲಂಧರ್ ಜಿಲ್ಲೆಯ ನಾಕೋದಾರ್ ಉಪ ವಿಭಾಗದ ಮಲ್ಲಿಯಾನ್ ಖುರ್ದ್ ಎಂಬ ಗ್ರಾಮದಲ್ಲಿ ಕಬಡ್ಡಿ ಟೂರ್ನಿಯ ವೇಳೆ ಖ್ಯಾತ ಕಬಡ್ಡಿ ಆಟಗಾರ ಸಂದೀಪ್ ನಂಗಾಲ್ ಅಂಬಿಯಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಟೂರ್ನಿಗೆ ಆಗಮಿಸಿದ್ದ ಸಂದೀಪ್ ಅವರ ಜತೆ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ನಾಲ್ಕೈದು ಮಂದಿ ಹಂತಕರು ಕಾರಿನಲ್ಲಿ ಆಗಮಿಸಿದರು ಎನ್ನಲಾಗಿದೆ. ಈ ಪೈಕಿ ಇಬ್ಬರು ಗಾಳಿಯಲ್ಲಿ ಗುಂಡು ಹಾರಿಸಿ ಜನರನ್ನು ಭಯಪಡಿಸಿದರು. ಇತರ ಇಬ್ಬರು ಕಬಡ್ಡಿ ಅಟಗಾರನನ್ನು ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯದರು ಎನ್ನಲಾಗಿದೆ.
ಘಟನೆಯಲ್ಲಿ ಮತ್ತೊಬ್ಬ ಯುವಕನ ಕಾಲಿಗೆ ಗಾಯಗಳಾಗಿವೆ ಎಂದು ಮೂಲಗಳು ಹೇಳಿವೆ.
ಹಂತಕರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಸಂದೀಪ್ ಜನಪ್ರಿಯ ಕಬಡ್ಡಿ ಆಟಗಾರನಾಗಿದ್ದು, ಶಹಾಕೋಟ್‍ನ ನಂಗಲ್ ಅಂಬಿಯಾ ಗ್ರಾಮದವರು.
Next Story





