ಹಿಜಾಬ್ ತೀರ್ಪಿನ ಕುರಿತು ಸಿದ್ದರಾಮಯ್ಯ ಹೇಳಿದ್ದೇನು?

ಬೆಂಗಳೂರು: 'ನ್ಯಾಯಾಲಯದ ಆದೇಶಕ್ಕೆ ಎಲ್ಲರೂ ತಲೆಬಾಗಲೇ ಬೇಕು, ಇದರಲ್ಲಿ ಯಾವುದೇ ಕಪಾಲಮೋಕ್ಷ ಇಲ್ಲ' ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪಿನ ಕುರಿತು ವಿಧಾನಸೌಧ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ವಿಚಾರದಲ್ಲಿ ಯಾವುದೇ ಒಂದು ಪಕ್ಷ ಅಥವಾ ಗುಂಪಿನ ಗೆಲುವು ಇಲ್ಲ ಎಂದು ತಿಳಿಸಿದರು.
'ತೀರ್ಪಿನ ಕುರಿತು ಪೂರ್ಣ ಪಾಠ ನಾನು ಇನ್ನೂ ಓದಿಲ್ಲ, ನ್ಯಾಯಾಲಯದ ಆದೇಶಕ್ಕೆ ಎಲ್ಲರೂ ತಲೆಬಾಗಲೇ ಬೇಕು, ಅನುಸರಿಸಬೇಕು. ಇದರಲ್ಲಿ ಯಾವುದೇ ಕಪಾಲಮೋಕ್ಷ ಇಲ್ಲ, ಆದೇಶದ ಪ್ರತಿಯನ್ನು ಸಂಪೂರ್ಣ ನೋಡಿ ಪ್ರತಿಕ್ರಿಯಿಸುತ್ತೇನೆ' ಎಂದು ಹೇಳಿದರು.
Next Story