ಕೊಣಾಜೆ: ಯುವಕ ಆತ್ಮಹತ್ಯೆ
ಕೊಣಾಜೆ: ಠಾಣಾ ವ್ಯಾಪ್ತಿಯ ಅಸೈಗೋಳಿ ಸಮೀಪದ ಪಟ್ಟೋರಿ ಬಳಿ ಯುವಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಸೋಮವಾರ ರಾತ್ರಿ ನಡೆದಿದೆ.
ನಿಡ್ಡೋಡಿ ಮೂಲದ ಸಂಗಮ್ ಶೆಟ್ಟಿ (26) ಮೃತ ಯುವಕ.
ಈತನ ಸಂಬಂಧಿಕರು ಪಟ್ಟೋರಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಇಲ್ಲಿಗೆ ಈತ ಬಂದು ಹೋಗುತ್ತಿದ್ದ ಎನ್ನಲಾಗಿದೆ. ನಿನ್ನೆಯು ಕೂಡಾ ಈತ ಇಲ್ಲಿಗೆ ಬಂದಿದ್ದು ಮನೆಯ ಸಂಬಂಧಿಕರು ಮನೆಯಲ್ಲಿ ಇಲ್ಲದ ಸಂದರ್ಭ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಆತ್ಮಹತ್ಯೆ ನಿಖರ ಕಾರಣ ತಿಳಿದುಬಂದಿಲ್ಲ. ಕೊಣಾಜೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story