ಮಾ.20ರಿಂದ ಗುಂಡಿಕೆರೆ ಮಖಾಂ ಉರೂಸ್

ಪೊನ್ನಂಪೇಟೆ : ಪ್ರತಿವರ್ಷ ನಡೆಯುವ ಇತಿಹಾಸ ಪ್ರಸಿದ್ಧ ಗುಂಡಿಕೆರೆ ಮಖಾಂ ಉರೂಸ್ ಮಾ. 20ರಿಂದ 22ರವರೆಗೆ ಜರುಗಲಿದೆ. ವಿರಾಜಪೇಟೆ ಸಮೀಪದ ಗುಂಡಿಕೆರೆಯ ದರ್ಗಾ ಶರೀಫ್ ನಲ್ಲಿ ವಾರ್ಷಿಕವಾಗಿ ಆಚರಿಸಲ್ಪಡುವ ಗುಂಡಿಕೆರೆ ಮಖಾಂ ಉರೂಸ್ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಗುಂಡಿಕೆರೆ ಜಮಾಅತಿನ ಆಡಳಿತ ಮಂಡಳಿ, 3 ದಿನಗಳ ಕಾಲ ನಡೆಯಲಿರುವ ಉರೂಸ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದೆ.
ಮಾ.20 ರಂದು ಮಧ್ಯಾಹ್ನದ ನಂತರ 4.15 ಗಂಟೆಗೆ ಗುಂಡಿಕೆರೆ ಜಮಾಅತಿನ ಆಡಳಿತ ಮಂಡಳಿ ಅಧ್ಯಕ್ಷರಾದ ಕೆ.ಯು. ಮಹಮ್ಮದ್ ಹಾಜಿ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ನಡೆಯುವ ಮಖಾಂ ಅಲಂಕಾರ ಹಾಗೂ ಸಾಮೂಹಿಕ ಪ್ರಾರ್ಥನೆಗೆ ಗುಂಡಿಕೆರೆ ಜಮಾಅತಿನ ಖತೀಬರಾದ ಪಿ.ಇಸ್ಮಾಯಿಲ್ ಲತೀಫಿ ಅವರು ನೇತೃತ್ವ ನೀಡಲಿದ್ದಾರೆ. ಇದಾದ ಬಳಿಕ ಜರುಗುವ ಬಂಡಾರ ಜಮಾಯಿಸುವ ಕಾರ್ಯಕ್ರಮಕ್ಕೆ ಗುಂಡಿಕೆರೆ ಜಮಾಅತಿನ 1ನೇ ತಕ್ಕರಾದ ಸಿ. ಎ. ಉಮ್ಮರ್ ಹಾಜಿ ಮತ್ತು 2ನೇ ತಕ್ಕ ರಾದ ಎಂ. ಪಿ. ಸಾದಲಿ ಅವರು ಚಾಲನೆ ನೀಡಲಿದ್ದಾರೆ.
ಅಂದು ರಾತ್ರಿ 8.30 ಗಂಟೆಗೆ ಜರುಗುವ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವನ್ನು ಜಮಾಅತಿನ ಸದರ್ ಉಸ್ತಾದ್ ಆದ ಸೈಯದ್ ಖಾತೀಮ್ ಸಖಾಫಿ ಅಲ್ ಹೈದ್ರೋಸಿ ಅವರು ಉದ್ಘಾಟಿಸಲಿದ್ದಾರೆ. ಕೇರಳದ ಕಾಟಾಮ್ ಪಳ್ಳಿಯ ಧಾರ್ಮಿಕ ವಿದ್ವಾಂಸರಾದ ಸಮೀರ್ ಅಶ್ರಫಿ ಅವರು ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆಡಳಿತ ಮಂಡಳಿ ಸದಸ್ಯರಾದ ಸಿ.ಯು. ಮೊಹಮದ್, ಎಂ.ಎಚ್. ರಝಾಕ್, ಶಫೀಕ್ ಅಮೀನಿ ಅವರು ಭಾಗಹಿಸಲಿದ್ದಾರೆ.
ಮಾ.21ರಂದು ಸೋಮವಾರ ಮಧ್ಯಾಹ್ನ ಜರುಗುವ ಉರೂಸ್ ನ ಪ್ರಧಾನ ಸಮಾರಂಭವನ್ನು ಗುಂಡಿಕೆರೆ ಜಮಾಅತಿನ ಜಾಹಫರ್ ಮಿಸ್ಬಾಯಿ ಅವರು ಉದ್ಘಾಟಿಸಲಿದ್ದಾರೆ. ಗುಂಡಿಕೆರೆ ಜಮಾಅತಿನ ಖತೀಬರಾದ ಪಿ. ಇಸ್ಮಾಯಿಲ್ ಲತೀಫಿ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಜಮಾಅತಿನ ಅಧ್ಯಕ್ಷರಾದ ಕೆ. ಯು. ಮಹಮ್ಮದ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಜಮಾಅತಿನ 1ನೇ ತಕ್ಕರಾದ ಸಿ. ಎ. ಉಮ್ಮರ್ ಹಾಜಿ, 2ನೇ ತಕ್ಕರಾದ ಎಂ.ಪಿ. ಸಾದಲಿ, ಉಪಾಧ್ಯಕ್ಷರಾದ ಎಂ.ವೈ. ಆಲಿ, ಪ್ರಧಾನ ಕಾರ್ಯದರ್ಶಿ ಎಂ. ಎ. ಇಸ್ಮಾಯಿಲ್, ಕಾರ್ಯದರ್ಶಿ ಸಿ.ಪಿ.ಆಲಿ, ಆಡಳಿತ ಮಂಡಳಿ ಸದಸ್ಯರಾದ ಎಂ.ಎಂ. ಇಸ್ಮಾಯಿಲ್, ಎಂ.ಎಂ.ರಝಾಕ್, ಕೆ. ಎಂ. ಫಾರೂಕ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಮಾ.21ರಂದು ಸಂಜೆ 4 ಗಂಟೆಗೆ ಉರೂಸ್ ನ ಭಾಗವಾಗಿ ಮೌಲೂದ್ ಪಾರಾಯಣ ಹಾಗೂ ಸಾಮೂಹಿಕ ಅನ್ನ ಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ರಾತ್ರಿ ಜರುಗುವ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವನ್ನು ಸಲೀಂ ಅಹ್ಸನಿ ಅವರು ಉದ್ಘಾಟಿಸಲಿದ್ದು, ಕೇರಳದ ಕಾಂತಪುರಂನ ರಾಫಿ ಅಹ್ಸನಿ ಅವರು ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಮಾಅತಿನ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಎಂ. ವೈ. ಆಲಿ,ಸದಸ್ಯರಾದ ಎನ್. ಎಂ. ಬದ್ರುದ್ದೀನ್, ಪಿ.ಎಸ್. ಹನೀಫ್ ಮಿಸ್ಬಾಯಿ ಅವರು ಪಾಲ್ಗೊಳ್ಳಲಿದ್ದಾರೆ.
ಮಾ.22ರಂದು ರಾತ್ರಿ ವಿಶೇಷ ಧಾರ್ಮಿಕ ಉಪನ್ಯಾಸ ಹಾಗೂ ದಿಕ್ರ ದುಅ ಮಜ್ಲಿಸ್ ಸಂಗಮವನ್ನು ಆಯೋಜಿಸಲಾಗಿದೆ. ಜಮಾಅತಿನ ಅಧ್ಯಕ್ಷರಾದ ಕೆ. ಯು. ಮಹಮದ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ವಿರಾಜಪೇಟೆಯ ಅನ್ವರುಲ್ ಹುದಾ ಧಾರ್ಮಿಕ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಅವರು ಉದ್ಘಾಟಿಸಲಿದ್ದಾರೆ. ಹಿರಿಯ ಧಾರ್ಮಿಕ ಪಂಡಿತರಾದ ಸೈಯದ್ ಜೈನುಲ್ ಆಬಿದ್ ಇಂಬಿಚಿಕೋಯ ಅಲ್ ಬುಖಾರಿ (ಕೂರಿಕ್ಕುಯಿ ತಂಗಳ್) ಅವರು ಧಾರ್ಮಿಕ ಉಪನ್ಯಾಸ ಹಾಗೂ ದಿಕ್ರ್, ದುಅ ಮಜ್ಲಿಸ್ ಅನ್ನು ನಡೆಸಿಕೊಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಮಾತಿನ ಖತೀಬ್ ಪಿ. ಇಸ್ಮಾಯಿಲ್ ಲತೀಫಿ, ಚಿಟ್ಟಡೆ ಜಮಾಅತಿನ ಖತೀಬ್ ಸಯ್ಯದ್ ಅಹಮದ್ ಖಾಸಿಂ ಆದೂರು, ಬೆಂಗಳೂರಿನ ಆಯಿಷಾ ಆಂಗ್ಲಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಕುವೆಂಡ ವೈ. ಹಂಝತ್ತುಲ್ಲಾ ಹಾಜಿ, ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ. ಎಂ. ಎ.) ಅಧ್ಯಕ್ಷರಾದ ದುದ್ದಿಯಂಡ ಎಚ್. ಸೂಫಿ ಹಾಜಿ, ಬೆಂಗಳೂರಿನ ಉದ್ಯಮಿ ಎ. ಎಚ್. ಅಬೂಬಕರ್, ಸುಡಾನ್ ನಲ್ಲಿ ಉದ್ಯಮಿಯಾಗಿರುವ ಎಂ.ಎಚ್. ಮೊಯ್ದು, ಬೆಂಗಳೂರಿನ ವಕೀಲ ಕೆ.ಎಂ. ಝಬೈರ್, ಜಮಾಅತಿನ ಉಪಾಧ್ಯಕ್ಷರಾದ ಎಂ. ವೈ. ಆಲಿ ಹಾಗೂ ಜಮಾಅತಿನ ಕೋಶಾಧಿಕಾರಿ ಎಂ. ಎಂ. ಅಲಿ ಮುಸ್ಲಿಯಾರ್ ಅವರು ಪಾಲ್ಗೊಳ್ಳಲಿದ್ದಾರೆ.
ಉರೂಸ್ ನಡೆಯುವ 3 ದಿನಗಳ ಕಾಲವೂ ಮಗ್ರಿಬ್ ನಮಾಜಿನ ನಂತರ ದಫ್ ಕಾರ್ಯಕ್ರಮವಿರುತ್ತದೆ. ಎಲ್ಲಾ ದಿನಗಳ ಕಾರ್ಯಕ್ರಮಗಳಿಗೂ ಮಹಿಳೆಯರಿಗೆ ಪ್ರತ್ಯೇಕ ಸ್ಥಳವಕಾಶವನ್ನು ಏರ್ಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.







