ದೇರಳಕಟ್ಟೆ: ʼರೆಡ್ ಕ್ಲಬ್ʼ ಮಳಿಗೆ ಶುಭಾರಂಭ

ಮಂಗಳೂರು : ದೇರಳಕಟ್ಟೆ ಜಂಕ್ಷನ್‌ನಲ್ಲಿರುವ ಎನ್‌ಎಂ ಕಾಂಪ್ಲೆಕ್ಸ್‌ನಲ್ಲಿ ತೆರೆಯಲಾದ ʼರೆಡ್ ಕ್ಲಬ್ʼ ಬಟ್ಟೆಬರೆ ಮಳಿಗೆಯು ಸೋಮವಾರ ಶುಭಾರಂಭಗೊಂಡಿತು.
ಸಯ್ಯದ್ ಕೆ.ಎಸ್.ಅಲಿ ತಂಳ್ ಕುಂಬೋಲ್ ದುಆಗೈದರು. ಮುಡಾ ಮಾಜಿ ಅಧ್ಯಕ್ಷ ಹಾಜಿ ಇಬ್ರಾಹಿಂ ಕೋಡಿಜಾಲ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಉದ್ಯಮದೊಂದಿಗೆ ಸಮಾಜಕ್ಕೆ ಕೊಡುಗೆ ನೀಡುವ ಮನೋಭಾವವುಳ್ಳ ಈ ಮಳಿಗೆಯ ಪಾಲುದಾರರ ಸದುದ್ದೇಶಗಳು ಈಡೇರಲಿ. ಬೆಳೆಯುತ್ತಿರುವ ದೇರಳಕಟ್ಟೆ ಜಂಕ್ಷನ್‌ಗೆ ಈ ಮಳಿಗೆಯು ಕಿರೀಟವಾಗಲಿ ಎಂದು ಶುಭ ಹಾರೈಸಿದರು.
ದಿ ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ.ನ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಕುಂಬಳೆ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಪ್ರಮೋದ್ ಸಿ.ಐ, ಬೆಳ್ಮ ಗ್ರಾಪಂ ಅಧ್ಯಕ್ಷ ಸತ್ತಾರ್ ಸಿ.ಎಂ, ಸದಸ್ಯರಾರದ ಇಕ್ಬಾಲ್ ಎಚ್.ಆರ್, ಇಬ್ರಾಹೀಂ ಬದ್ಯಾರ್, ಹನೀಫ್ ಬಿ., ಸಿಎಂ ರಿಯಾಲಿಟಿ ಮತ್ತು ಸಿಎಂ ಗ್ರೂಪ್‌ನ ಸ್ಥಾಪಕ ಸಿ.ಎಂ. ಫಾರೂಕ್, ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರವೂಫ್ ಸಿಎಂ, ಜಿಪಂ ಮಾಜಿ ಸದಸ್ಯ ಎನ್.ಎಸ್ ಕರೀಂ, ಕಿನ್ಯ ಗ್ರಾಪಂ ಉಪಾಧ್ಯಕ್ಷ ಸಿರಾಜುದ್ದೀನ್, ಸಮಾಜ ಸೇವಕ ಇಲ್ಯಾಸ್ ಮಂಗಳೂರು, ಪಂಪ್‌ವೆಲ್ ತಕ್ವಾ ಮಸ್ಜಿದ್‌ನ ಮುಅದ್ಸಿನ್ ಇಬ್ರಾಹೀಂ ಮುಸ್ಲಿಯಾರ್, ಅಬ್ದುಲ್ಲಾ ಮುಸ್ಲಿಯಾರ್, ಅಬ್ದುಲ್ ರಹ್ಮಾನ್ ಕೋಡಿಜಾಲ್, ಮೊದಿನ್ ಕುಂಞಿ ಕೋಡಿಜಾಲ್, ಹಬೀಬ್ ಉಪ್ಪಳ, ತಾಜುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.
ಶರೀಫ್ ಕೋಡಿಜಾಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
*ಈ ಮಳಿಗೆಯಲ್ಲಿ ಮದುಮಕ್ಕಳಿಗೆ (ವರರಿಗೆ) ಸಂಬಂಧಿಸಿದಂತೆ ಪ್ಯಾಂಟ್, ಶರ್ಟ್, ಸೂಟ್, ಕುರ್ತಾ, ಶೇರ್ವಾಣಿ ಸಹಿತ ಎಲ್ಲಾ ರೀತಿಯ ಮತ್ತು ವಿವಿಧ ವಿನ್ಯಾಸದ ಉಡುಪುಗಳು ಮಿತದರದಲ್ಲಿ ಲಭ್ಯವಿದೆ ಎಂದು ರೆಡ್ ಕ್ಲಬ್ ಮಳಿಗೆಯ ಮಾಲಕ ರಶೀದ್ ಉಪ್ಪಳ ಮತ್ತು ಶಿಹಾಬ್ ಕಿನ್ಯ ತಿಳಿಸಿದ್ದಾರೆ.






.jpeg)
.jpeg)


.jpeg)

