ವರದಕ್ಷಿಣಿ ಕಿರುಕುಳ ಆರೋಪ: ಪಿಡಿಒ ಪತ್ನಿ ಆತ್ಮಹತ್ಯೆ

ವಿದ್ಯಾಶ್ರೀ
ಕೊಳ್ಳೇಗಾಲ. ಮಾ.15. ವರದಕ್ಷಿಣಿ ವಿಚಾರಕ್ಕೆ ಪತಿಯ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಳ್ಳೇಗಾಲದ ಬಸ್ತೀಪುರದಲ್ಲಿ ನಡೆದಿದೆ.
ಹನೂರು ತಾಲೂಕಿನ ಹೂಗ್ಯಂ ಗ್ರಾ.ಪಂ.ನಲ್ಲಿ ಪಿಡಿಒ ಆಗಿರುವ ಆನಂದ್ ಕಾಂಬ್ಳೆ ಪತ್ನಿ ವಿದ್ಯಾಶ್ರೀ ಆತ್ಮಹತ್ಯೆ ಮಾಡಿಕೊಂಡಿರುವ ಗೃಹಿಣಿ ಎಂದು ತಿಳಿದು ಬಂದಿದೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನವರಾಗಿದ್ದ ವಿದ್ಯಾಶ್ರೀ ಮೂರು ವರ್ಷದ ಹಿಂದೆ ಅದೇ ಜಿಲ್ಲೆಯ ಪಿಡಿಒ ಆನಂದ್ ಕಾಂಬ್ಳೆ ಎಂಬುವನೊಂದಿಗೆ ಮದುವೆಯಾಗಿತ್ತು. ಆನಂದ್ ಕಾಂಬ್ಳೆ ಹನೂರು ತಾಲೂಕಿನ ಹೂಗ್ಯಂ ಗ್ರಾಮ ಪಂಚಾಯತಿ ಪಿಡಿಒ ಆಗಿದ್ದು. ದಂಪತಿಗಳು ಕೊಳ್ಳೇಗಾಲ ಸಮೀಪದ ಬಸ್ತೀಪುರದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು ಎನ್ನಲಾಗಿದೆ.
ಸೋಮವಾರ ವಿದ್ಯಾಶ್ರೀ ಮನೆಯ ಕೊಠಡಿಯೊಳಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ವಿದ್ಯಾಶ್ರೀ ತಂದೆ ಚಿದಾನಂದ ಕಾಂಬ್ಳೆ ಪ್ರತಿಕ್ರಯಿಸಿ, 'ನನ್ನ ಅಳಿಯ ಆನಂದ್ ಕಾಂಬ್ಳೆ ನನ್ನ ಮಗಳಿಗೆ ವರದಿಕ್ಷಿಣೆ ಹಿಂಸೆ ಹಾಗೂ ಶೀಲ ಶಂಕಿಸಿ ಕಿರುಕುಳ ನೀಡುತ್ತಿದ್ದ. ಗಂಡನ ಹಿಂಸೆಯಿಂದ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ' ಎಂದು ಆರೋಪಿಸಿದ್ದಾರೆ.
ಸ್ಥಳಕ್ಕೆ ಡಿ.ವೈ.ಎಸ್.ಪಿ ನಾಗರಾಜು ಹಾಗೂ ಸಕ೯ಲ್ ಇನ್ಸ್ ಪೆಕ್ಟರ್ ಮುಧೋಳ ಭೇಟ ನೀಡಿ ಪರಿಶೀಲನೆ ನಡೆಸಿದ್ದು. ಮೃತಳ ತಂದೆ ಚಿದಾನಂದ ಕಾಂಬ್ಳೆ ನೀಡಿದ ದೂರಿನನ್ವಯ ಪಿ.ಡಿ.ಓ ಆನಂದ್ ಕಾಂಬ್ಳೆ ಹಾಗೂ ತಂದೆ ಶ್ಯಾಮ್ ಬಂಧಿಸಿದ್ದಾರೆ.
ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







