ಮಾ.16: ಅರಸ್ತಾನ ಉರೂಸ್‌ಗೆ ಚಾಲನೆ
ಮಂಗಳೂರು : ಪಾವೂರು ಗ್ರಾಮದ ಅಲ್-ಮುಬಾರಕ್ ಜುಮಾ ಮಸ್ಜಿದ್ ಹಾಗೂ ಅರ್ರಿಫಾಯಿಯಾ ನುಸ್ರತುಲ್ ಮುಸ್ಲಿಮೀನ್ ಅಸೋಸಿಯೇಶನ್ ಅರಸ್ತಾನ ಮಲಾರ್ ಇದರ ೪೬ನೇ ವಾರ್ಷಿಕೋತ್ಸವದ ಅಂಗವಾಗಿ ಸ್ವಲಾತ್ ಮಜ್ಲಿಸ್, ರಿಫಾಯಿ ರಾತೀಬ್, ಮಜ್ಲಿಸುನ್ನೂರು ಆಧ್ಯಾತ್ಮಿಕ ಮಜ್ಲಿಸ್ ಹಾಗೂ 4 ದಿವಸಗಳ ಧಾರ್ಮಿಕ ಉಪನ್ಯಾಸ ಮತ್ತು ದರ್ಗಾ ಶರೀಫ್ ಉರೂಸ್ ಕಾರ್ಯಕ್ರಮಕ್ಕೆ ಮಾ.16ರಂದು ಚಾಲನೆ ಸಿಗಲಿದೆ.
ಮಾ.16ರಂದು ಇಶಾ ನಮಾಝಿನ ಬಳಿಕ ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್-ಸಲಾಲ ಉದ್ಘಾಟಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story