Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ದೇಹ ಸೌಖ್ಯದ ಕಾಳಜಿಯಿಂದ ಆತ್ಮಸ್ಥೈರ್ಯ...

ದೇಹ ಸೌಖ್ಯದ ಕಾಳಜಿಯಿಂದ ಆತ್ಮಸ್ಥೈರ್ಯ ಹಾಳು: ಲಕ್ಷ್ಮೀಶ ತೋಳ್ಪಾಡಿ

ವಚನಾನುಭಾವ ಗ್ರಂಥ ಲೋಕಾರ್ಪಣೆ

ವಾರ್ತಾಭಾರತಿವಾರ್ತಾಭಾರತಿ15 March 2022 9:53 PM IST
share
ದೇಹ ಸೌಖ್ಯದ ಕಾಳಜಿಯಿಂದ ಆತ್ಮಸ್ಥೈರ್ಯ ಹಾಳು: ಲಕ್ಷ್ಮೀಶ ತೋಳ್ಪಾಡಿ

ಬೆಂಗಳೂರು, ಮಾ.15: ಮನಸ್ಸು ದೇಹ ಕೇಂದ್ರಿಕೃತವಾಗಿದೆ. ದೇಹದ ಬಗ್ಗೆ ಆಸಕ್ತಿ ತೊರೆದು ತನುವಿನ ಅಂತರದಲ್ಲಿರುವ ಅರಿವಿನ ಶೋಧನೆ ಮಾಡಿದಾಗ ಮಾತ್ರ ಅದರ ಸತ್ಯ ಗೋಚರವಾಗಲಿದೆ ಎಂದು ಆಧ್ಯಾತ್ಮಿಕ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅಭಿಪ್ರಾಯಪಟ್ಟಿದ್ದಾರೆ.

ಬಸವ ಭವನದಲ್ಲಿ ಬಸವರಾಜಸ್ವಾಮಿ ಅವರು ಬರೆದ ಸಿದ್ದರಾಮ ಶಿವಯೋಗಿಗಳ ವಚನಾನುಭಾವ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಅಂತರಮುಖಿ ಸತ್ಯದ ವ್ಯಾಖ್ಯಾನ ಈ ಪುಸ್ತಕದಲ್ಲಿ ಅನಾವರಣವಾಗಿದೆ. ಪ್ರತಿ ವಚನದಲ್ಲಿಯೂ ಒಂದು ಸೂತ್ರವಿದೆ, ಮನುಷ್ಯನ ದೇಹದಲ್ಲಿ ಅಡಗಿದ ಅರಿವಿನ ಅರಿವು ಮನುಷ್ಯನಿಗೆ ಆಗಬೇಕಾದರೆ ಅಂತರ ಶೋಧವಾಗಬೇಕು. ಆಧುನಿಕ ಸಮಾಜದಲ್ಲಿ ದೇಹ ಸೌಖ್ಯದ ಕಾಳಜಿಯೇ ಹೆಚ್ಚಾಗಿದೆ. ಅದು ಮನುಷ್ಯನ ಆತ್ಮಸ್ಥೈರ್ಯವನ್ನೇ ಹಾಳು ಮಾಡಿದೆ ಎಂದರು.

ಯಾವುದು ಗೊತ್ತಾಗಬೇಕು ಅದು ಗೊತ್ತಾಗುತ್ತಿಲ್ಲ, ಆದರೆ ಗೊತ್ತಾಗಬಾರದ್ದು ಗೊತ್ತಾದರೆ ಏನು ಪ್ರಯೋಜನ ಎಂದು ಮಾರ್ಮಿಕವಾಗಿ ಪ್ರಶ್ನಿಸಿದ ಅವರು ದೇಹದ ಮೇಲೆ ಆಸೆ ಬಿಟ್ಟರೆ ಅರಿವಿನ ಪರಿಚಯವಾಗುತ್ತದೆ. ಆ ದಿಶೆಯಲ್ಲಿ ನಾವು ಸಾಗಬೇಕು ಎಂದರು.

ಲೇಖಕ ಬಸವರಾಜಸ್ವಾಮಿ ಮಾತನಾಡಿ, ಉಪಜೀವನಕ್ಕಾಗಿ ಬದುಕುವ ಈ ಸಮಾಜದಲ್ಲಿ ಕಲ್ಲಿನ ಮೂರ್ತಿಗೆ ನಮಸ್ಕರಿಸುವ ಪ್ರವೃತ್ತಿ ಇದೆ, ಮನುಷ್ಯನ ದೇಹದಲ್ಲಿಯೇ ಅಗಾಧ ಶಕ್ತಿ ಅರಿವಿನ ಶಕ್ತಿ ಇದ್ದರೂ ಅದನ್ನು ತಿಳಿಯುವ ಮತ್ತು ಅದರ ಜ್ಞಾನ ಪಡೆಯಬೇಕೆಂದರೆ ಅರಿವೇ ಗುರುವಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ, ಪ್ರತಿಯೊಬ್ಬರಿಗೂ ಭೌತಿಕ ಸಂಪತ್ತಿನ ಕಡೆ ಹೆಚ್ಚು ಒಲವು ಇದೆ, ಜ್ಞಾನದ ಸಂಪತ್ತಿನ ಕಡೆ ಆಸಕ್ತಿ ಇಲ್ಲ. ಕಲ್ಯಾಣ ಕ್ರಾಂತಿ ಅರಿವಿನ ಕ್ರಾಂತಿಯಾಗಿತ್ತು. ಸಮಾಜದಲ್ಲಿ ಸಮಾನತೆ ಸಾರಲು ಬಸವಣ್ಣನ ಕೊಡುಗೆ ಅಪಾರವಾಗಿದೆ. ಬಸವ ಸಮಿತಿ 40 ವರ್ಷಗಳಿಂದ ಬಸವ ತತ್ವದ ಪ್ರಚಾರಕ್ಕೆ ತನ್ನನ್ನು ಸಮರ್ಪಿಸಿಕೊಂಡಿದೆ ಎಂದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X