ಯುವ ಕಾಂಗ್ರೆಸ್ ಬಜಾಲ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಕ್ರೀಡಾ ಕೂಟ

ಮಂಗಳೂರು : ಯುವ ಕಾಂಗ್ರೆಸ್ ಬಜಾಲ್ ಪ್ರೀಮಿಯರ್ ಲೀಗ್ 2022 ಕ್ರಿಕೆಟ್ ಕ್ರೀಡಾ ಕೂಟವು ಬಜಾಲ್ ಪ್ರದೇಶದ ಶಾರ್ಕ್ ಮೈದಾನದಲ್ಲಿ ನಡೆಯಿತು.
ಸ್ಥಳೀಯ ಕಾರ್ಪೊರೇಟರ್ ಅಶ್ರಫ್ ಬಜಾಲ್ ಹಾಗೂ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಸೀಫ್ ಬಜಾಲ್ ಅವರ ಮುಂದಾಲುತ್ವದಲ್ಲಿ ನಡೆದಂತಹ 2 ದಿನಗಳ ಕ್ರೀಡಾಕೂಟದಲ್ಲಿ ಪ್ರಥಮ ʼವೆಲ್ಡನ್ ಬಜಾಲ್ʼ ಹಾಗೂ ವೈಎಫ್‌ಸಿ ಬಜಾಲ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಪಂದ್ಯಕೂಟದ ಉದ್ಘಾಟನ ಸಮಾರಂಭದಲ್ಲಿ ಯುವ ಕಾಂಗ್ರೆಸ್ ರಾಜ್ಯ ಪ್ರ. ಕಾರ್ಯದರ್ಶಿ ಮೇರಿಲ್ ರೇಗೋ, ಜಿಲ್ಲಾ ಉಪಾಧ್ಯಕ್ಷ ಗಿರೀಶ್ ಅಲ್ವಾ, ಜಿಲ್ಲಾ ಪ್ರ. ಕಾರ್ಯದರ್ಶಿ ರಮಾನಂದ ಪೂಜಾರಿ, ಮಂಗಳೂರು ದಕ್ಷಿಣ ಬ್ಲಾಕ್ ಉಪಾಧ್ಯಕ್ಷ ಸೌಹಾನ್ ಎಸ್ ಕೆ ಉಪಸ್ಥಿತರಿದ್ದರು.
ಪಂದ್ಯಾಕೂಟದ ಸಮಾರೋಪ ಸಮಾರಂಭದಲ್ಲಿ ಸ್ಥಳೀಯ ಮನಾಪಾ ಸದಸ್ಯರಾದ ಅಶ್ರಫ್ ಬಜಾಲ್, ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಲುಕ್ಮಾನ್ ಬಂಟ್ವಾಳ್, ಜಿಲ್ಲಾ ಎನ್ ಎಸ್ ಯು ಐ ಅಧ್ಯಕ್ಷ ಸವಾದ್ ಸುಳ್ಯ, ಎನ್ ಎಸ್ ಯು ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಹಾನ್ ಆಳ್ವ, ಜಿಲ್ಲಾ ಕಾಂಗ್ರೆಸ್ ಕಚೇರಿ ಕಾರ್ಯದರ್ಶಿ ನಝೀರ್ ಬಜಾಲ್ ಭಾಗವಹಿಸಿ ಪ್ರಶಸ್ತಿ ಪ್ರಧಾನ ಮಾಡಿದರು.
ವೇದಿಕೆಯಲ್ಲಿ ಯುವ ಮುಖಂಡರಾದ ಪ್ರಬಿತ್ ಜಲ್ಲಿಗುಡ್ಡೆ, ಆಸಿಫ್ ಬಜಾಲ್, ಮಶುರ್ ಬಜಾಲ್, ಮುಕ್ತರ್ ಬಜಾಲ್, ಇಂತಿಯಾಝ್ ಬಜಾಲ್, ಪ್ರಶಾಂತ್ ಪೂಜಾರಿ, ಶಾನ್ ಶಿರಿ ಎನ್ ಎಸ್ ಯು ಐ, ರುಬಾಬ್ ಹಾಗು ಇತರರು ಉಪಸ್ಥಿತರಿದ್ದರು.