ಹೈಕೋರ್ಟ್ ತೀರ್ಪಿನಿಂದ ನಿರಾಸೆಯಾಗಿದೆ: ಎಸ್‍ಐಓ

ಬೆಂಗಳೂರು: ರಾಜ್ಯ ಹೈಕೋರ್ಟ್ ಇಂದು ನೀಡಿದ ತೀರ್ಪಿನಿಂದ ನಮಗೆ ನಿರಾಸೆಯಾಗಿದೆ ಎಂದು ಎಸ್‍ಐಓ ಹೇಳಿದೆ.
ಹಿಜಾಬ್ ಇತರರಿಗೆ ಹಾನಿ ಮಾಡುವುದಿಲ್ಲ ಅಥವಾ ಮನ ನೋಯಿಸುವುದಿಲ್ಲ. ವಿದ್ಯಾರ್ಥಿಗಳನ್ನು ತಮ್ಮ ಆತ್ಮಸಾಕ್ಷಿ ಮತ್ತು ಶಿಕ್ಷಣದ ನಡುವೆ ಆಯ್ಕೆ ಮಾಡಿಕೊಳ್ಳುವ ಸ್ಥಿತಿಗೆ ನ್ಯಾಯಾಲಯವು ತರಲಾರದು ಎಂದು ನಾವು ನಿರೀಕ್ಷಿಸಿದ್ದೇವು. ಧಾರ್ಮಿಕ ಆಚರಣೆಗಳು ವ್ಯಕ್ತಿ ಮತ್ತು ದೇವನ ನಡುವಿನ ಸಂಬಂಧದ ಮೂಲಭೂತ ಅಂಶವಾಗಿದೆ ಮತ್ತು ಎಲ್ಲರೂ ಇದನ್ನು ಗೌರವಿಸಬೇಕು ಎಂದು ಎಸ್‍ಐಓ ಕರ್ನಾಟಕ ಪ್ರಕಟನೆ ತಿಳಿಸಿದೆ.
Next Story





