VIDEO- ಬಂಡೀಪುರ: ಸಫಾರಿ ವಾಹನವನ್ನು ಅಟ್ಟಾಡಿಸಿಕೊಂಡು ಬಂದ ಗಜರಾಜ!

ಚಾಮರಾಜನಗರ : ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಸಫಾರಿಗೆ ತೆರಳಿದ್ದ ವೇಳೆ ಸಪಾರಿ ವಾಹನದ ಮೇಲೆ ಎರಗಲು ಆನೆಯೊಂದು ಮುಂದಾದ ಚಾಲಕನ ಜಾಗರೂಕತೆಯಿಂದ ಅದೃಷ್ಟವಷಾತ್ ಪ್ರವಾಸಿಗರು ಪಾರಾಗಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪ್ರತಿಷ್ಠಿತ ವನ್ಯಜೀವಿ ತಾಣ ಬಂಡೀಪುರದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರ ವಾಹನದ ಮೇಲೆ ದಾಳಿ ನಡೆಸಲು ಆನೆಯೊಂದು ಅಟ್ಟಿಸಿಕೊಂಡು ಬಂದಿರೋ ಘಟನೆ ನಡೆದಿದೆ. ಪ್ರವಾಸಿಗರಿದ್ದ ವಾಹನದ ಎದುರಾಗಿ ಬಂದ ಆನೆ ದಾಳಿ ನಡೆಸಲು ಮುಂದಾಗಿದೆ ಈ ಸಂಧರ್ಭದಲ್ಲಿ ಚಾಲಕನ ಚಾಣಾಕ್ಷತನದಿಂದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಸಲಗ ಅಟ್ಟಿಸಿಕೊಂಡು ಬರುತ್ತಿರೋ ದೃಶ್ಯ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿದೆ.
Next Story





