ಮಂಗಳೂರು: ಸಿಟಿ ಗೋಲ್ಡ್ ಸಮೂಹ ಸಂಸ್ಥೆಯ ನೂತನ ಸಂಸ್ಥೆ ʼಕೆವಾಬಾಕ್ಸ್ʼ ಲೋಗೋ ಅನಾವರಣ

ಮಂಗಳೂರು : ಸಿಟಿ ಗೋಲ್ಡ್ ಮತ್ತು ಡೈಮಂಡ್ಸ್ ಕೇರಳ ಕರ್ನಾಟಕ ಇದರ ಪಾಲುದಾರಿಕೆಯ ಹೊಸ ಉದ್ಯಮ ʼಕೆವಾಬಾಕ್ಸ್’ನ ಅಧಿಕೃತ ಲೋಗೋ ಅನಾವನ್ನು ನಗರದ ಫೋರಂ ಫಿಝಾಮಾಲ್‌ನಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ಫುಟ್ಬಾಲ್ ಕ್ಲಬ್ (ಐಎಸ್‌ಎಲ್ 2022)ನ ಗೋಲ್ ಕೀಪರ್ ಮಿರ್ಶಾದ್ ಮಿಚು ಅನಾವರಣ ಗೊಳಿಸಿ ವಿನೂತನ ವಿನ್ಯಾಸ ದ ಆಭರಣಗಳ ಸಂಗ್ರಹವನ್ನು ಹೊಂದಿರುವ ಸಿಟಿ ಗೋಲ್ಡ್ ಸಮೂಹ ದ ಕೆವಾಬಾಕ್ಸ್ ಗ್ರಾಹಕರನ್ನು ಆಕರ್ಷಿಸುವುದರಲ್ಲಿ ಯಶಸ್ವಿಯಾ ಗಲಿ ಎಂದು ಶುಭ ಹಾರೈಸಿದರು.
ನಿರ್ದೇಶಕ ಮುಹಮ್ಮದ್ ದಿಲ್ ಶಾದ್ ಕಾರ್ಯಕ್ರಮ ನಿರೂಪಿಸಿ ಮಾತನಾಡುತ್ತಾ, ಸಿಟಿ ಗೋಲ್ಡ್ ಸಮೂಹ ಸಂಸ್ಥೆ ಗಳ ವಿನೂತನ ಆಭರಣ ಮಳಿಗೆಯ ಪ್ರಥಮ ಕೆವಾಬಾಕ್ಸ್ ಪ್ರಥಮ ಮಳಿಗೆ ಮಂಗಳೂರಿನಲ್ಲಿ ಆರಂಭಗೊಂಡಿದೆ. ಸಿಟಿ ಗೋಲ್ಡ್ ಸಮೂಹದ ಮೂಲಕ ಒಂದು ವರ್ಷದ ಒಳಗೆ 10 ಪ್ರದರ್ಶನ ಮಳಿಗೆ ಹಾಗೂ ಮುಂದಿನ ಮೂರು ವರ್ಷಗಳ ಲ್ಲಿ 100 ಮಳಿಗೆಗಳನ್ನು ಕೇರಳ, ಕರ್ನಾಟಕ ಸೇರಿದಂತೆ ದೇಶ ,ವಿದೇಶಗಳಲ್ಲಿ ಆರಂಭಿಸುವ ಗುರಿ ಹೊಂದಿರುವುದಾಗಿ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಕರಿಂ ಅವರ ಆಶಯ ವಾಗಿದೆ. ಕೆವಾಬಾಕ್ಸ್ ಮಳಿಗೆ ಮಾರ್ಚ್ 11,2022ರಂದು ಉದ್ಘಾಟನೆ ಗೊಂಡಿದೆ ಇಂದು ಲಾಂಛನದ ಅನಾವರಣ ನಡೆದಿದೆ. ಈ ಸಂದರ್ಭದಲ್ಲಿ ಸೀಮಿತ ಅವಧಿಯ ವರೆಗೆ ಮಳಿಗೆ ಯಲ್ಲಿ ಆಭರಣ ಖರೀದಿ ಸುವ ಗ್ರಾಹಕರಿಗೆ ಶೇ 50 ಮೇಕಿಂಗ್ ಚಾರ್ಜ್ ನಲ್ಲಿ ರಿಯಾಯಿತಿ ದೊರೆಯಲಿದೆ. ಆಧುನಿಕ ವಿನ್ಯಾಸದ ಸೂಕ್ಷ್ಮ ಕುಸುರಿಯ ವಿಶೇಷ ಆಭರಣಗಳ ಸಂಗ್ರಹ ಸಿಟಿಗೋಲ್ಡ್ ಸಮೂಹ ಸಂಸ್ಥೆಯ ಎರಡು ದಶಕಗಳ ಅನುಭವ ದೊಂದಿಗೆ ಹೊಸ ಮಳಿಗೆ ಆರಂಭಗೊಂಡಿದೆ. ಗ್ರಾಹಕರಿಗೆ ಆನ್ಲೈನ್ ಮೂಲಕ ಡಿಜಿಟಲ್ ಮಾದರಿಯಲ್ಲಿ ಖರೀದಿ ಗೆ ಅವಕಾಶ, ಮನೆ ಬಾಗಿಲಿಗೆ ಸುರಕ್ಷಿತವಾಗಿ ಆಭರಣ ತಲುಪಿಸುವ ಸೌಲಭ್ಯ ವಿದೆ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಿಟಿ ಗೋಲ್ಡ್ ಸಮೂಹ ಸಂಸ್ಥೆ ಮತ್ತು ಕೆವಾಬಾಕ್ಸ್ ಆಡಳಿತ ನಿರ್ದೇಶಕ ಮುಹಮ್ಮದ್ ಇರ್ಶಾದ್, ನಿರ್ದೇಶಕರಾದ ನೌಶಾದ್ ಸಿ.ಎ, ಬ್ರಾಂಡ್ ಸಲಹೆ ಗಾರ ಸಂತೋಷ್ ಮೊದಲಾದವರು ಉಪಸ್ಥಿತರಿದ್ದರು.














