Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಜನಕೇಂದ್ರಿತ, ಆರ್ಥಿಕಾಭಿವೃದ್ಧಿಗೆ ಪೂರಕ...

ಜನಕೇಂದ್ರಿತ, ಆರ್ಥಿಕಾಭಿವೃದ್ಧಿಗೆ ಪೂರಕ ಬಜೆಟ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ವಾರ್ತಾಭಾರತಿವಾರ್ತಾಭಾರತಿ16 March 2022 7:12 PM IST
share
ಜನಕೇಂದ್ರಿತ, ಆರ್ಥಿಕಾಭಿವೃದ್ಧಿಗೆ ಪೂರಕ ಬಜೆಟ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಮಾ. 16: ‘ಪ್ರಸಕ್ತ ಸಾಲಿನ ಆಯವ್ಯಯ ಜನಕೇಂದ್ರಿತ ಮತ್ತು ಜನಪರವಾಗಿದ್ದು, ಆರ್ಥಿಕತೆಯ ಅಭಿವೃದ್ಧಿಗೆ ಪೂರಕ ಬಜೆಟ್ ಇದಾಗಿದೆ. ಆ ಮೂಲಕ ಆರ್ಥಿಕ ಬೆಳವಣಿಗೆ ಸಾಧಿಸಿ ಕರ್ನಾಟಕವನ್ನು ಪ್ರಬಲ ರಾಜ್ಯವನ್ನಾಗಿ ಕಟ್ಟಲು ಸಾಧ್ಯ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು  ಸಮರ್ಥಿಸಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ 2022-23ನೆ ಸಾಲಿನ ಆಯವ್ಯಯ ಅಂದಾಜುಗಳ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ‘ಆರ್ಥಿಕತೆ ಎಂದರೆ ಹಣಕಾಸು ಎಂಬುದು ನಿಜ, ಆರ್ಥಿಕತೆ ಎಂದರೆ ಹಣಕ್ಕಿಗಿಂತ ದೊಡ್ಡದು. ಆಹಾರ, ಮೂಲಭೂತ ಸೌಕರ್ಯ, ಸಾಮಾಜಿಕ ವಲಯ, ಶಿಕ್ಷಣ, ಉದ್ಯೋಗ, ಬಡತನ ರೇಖೆಯಿಂದ ಹೊರ ಬರುವುದು ಆರ್ಥಿಕತೆಯಾಗುತ್ತದೆ. ಎಕಾನಮಿ ಎಂದರೆ ಬರೇ ಹಣವೇ ಅಲ್ಲ. ಆರ್ಥಿಕತೆ ಯಾವಾಗಲೂ ಜನಕೇಂದ್ರೀಕೃತ. ಆರ್ಥಿಕತೆಯನ್ನು ಮುಂದುವರೆಸುವುದು ಜನ. ಹೀಗಾಗಿ ಜನಕೇಂದ್ರೀಕೃತ ಆಯವ್ಯಯವನ್ನು ಮಂಡಿಸಿದ್ದೇನೆ' ಎಂದು ಹೇಳಿದರು.

‘ಕೋವಿಡ್ ಸಂಕಷ್ಟದ ನಡುವೆಯೂ ಬಜೆಟ್ ಗಾತ್ರ ಕಡಿಮೆಯಾಗುವ ಆತಂಕವಿತ್ತು. ಆದರೆ, ಆಗಸ್ಟ್, ಸೆಪ್ಟೆಂಬರ್‍ನಲ್ಲಿ ಆರ್ಥಿಕ ಚೇತರಿಕೆ, ತೆರಿಗೆಯ ಸಂಗ್ರಹದಲ್ಲಿ ಹೆಚ್ಚಳ, ಕೇಂದ್ರದಿಂದ ಬರಬೇಕಾಗಿದ್ದ ಪರಿಹಾರಗಳು ಬಂದದ್ದು ಕಳೆದ ಬಾರಿಗಿಂತ ಹೆಚ್ಚಿನ ಗಾತ್ರದ ಬಜೆಟ್ ನೀಡಲು ಸಾಧ್ಯವಾಯಿತು. ಬಜೆಟ್ ಗಾತ್ರ ಹೆಚ್ಚಳದಿಂದ ಆರ್ಥಿಕ ಅಭಿವೃದ್ಧಿ ಸಹಕಾರಿಯಾಗಲಿದೆ' ಎಂದು ಬೊಮ್ಮಾಯಿ ವಿಶ್ಲೇಷಿಸಿದರು.

‘ಕೋವಿಡ್‍ನಿಂದ ಆರ್ಥಿಕತೆಗೆ ಹಿನ್ನಡೆಯಾಗಿದ್ದರೂ ನಂತರ ಆರ್ಥಿಕತೆ ಚೇತರಿಸಿಕೊಂಡಿದ್ದು ಜನ ಕೇಂದ್ರೀಕೃತ ಬಜೆಟ್‍ನ್ನು ಮಂಡಿಸಲು ಅವಕಾಶ ನೀಡಿತು. ಬಜೆಟ್‍ನಲ್ಲಿ ಮಾಡುವ ಖರ್ಚುಗಳು ವೆಚ್ಚವಲ್ಲ. ಅದು ಮಾನವ ಅಭಿವೃದ್ಧಿಗೆ ಹೂಡುವ ಬಂಡವಾಳ ಎಂಬುದು ತಮ್ಮ ಅನಿಸಿಕೆ. ಬಜೆಟ್ ಮಂಡನೆ ಪೂರ್ವದಲ್ಲೆ ಆರ್ಥಿಕತೆ ಹೆಚ್ಚಳಕ್ಕೆ ಕ್ರಮ ಕೈಗೊಂಡಿದ್ದೆವು. ಕೋವಿಡ್ ನಿರ್ವಹಣೆ ಜತೆಗೆ ಆರ್ಥಿಕವಾಗಿಯೂ ಜನತೆಗೆ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ. ಈಗ ಆರ್ಥಿಕತೆ ಉತ್ತಮವಾಗಿದೆ. ಇದಕ್ಕೆ ದುಡಿಯುವ ವರ್ಗ, ರೈತರು, ವ್ಯಾಪಾರ-ವಹಿವಾಟುದಾರÀರಿಗೆ ಧನ್ಯವಾದ ಹೇಳುತ್ತೇನೆ' ಎಂದು ಅವರು ತಿಳಿಸಿದರು.

ಟೀಕೆಗಳ ಸ್ವೀಕಾರ: ‘ಆಯವ್ಯಯ ವಿಚಾರವಾಗಿ ವಿಪಕ್ಷ ಸದಸ್ಯರ ಟೀಕೆ-ಸಲಹೆಗಳನ್ನು ಸ್ವೀಕರಿಸುತ್ತೇನೆ. ಯೋಚನೆ, ಯೋಜನೆಯಲ್ಲಿ ಎಲ್ಲಿ ಕೊರತೆ ಇದೆ, ಅದನ್ನು ಸರಿಪಡಿಸಲು ಮುಕ್ತ ಮನಸ್ಸಿನಲ್ಲಿದ್ದೇನೆ. ರಾಜ್ಯವನ್ನು ಅಭಿವೃದ್ಧಿಗೆ ನಿಟ್ಟಿನಲ್ಲಿ ಕೊಂಡೊಯ್ಯಲು, ಸಾಧನೆ ಗೈಯಲು ಸಂಕಲ್ಪವನ್ನು ಮಾಡಿದ್ದೇವೆ. ಆನಿಟ್ಟಿನಲ್ಲಿ ದಿಟ್ಟತನದಿಂದ ಮುಂದುವರಿಯುತ್ತೇವೆ' ಎಂದು ಅವರು ಘೋಷಿಸಿದರು.

‘ರೈತ ಶಕ್ತಿ' ಯೋಜನೆ ಘೋಷಿಸಿದ್ದು, ಕೃಷಿ ಯಂತ್ರೋಪಕರಣಗಳ ಬಳಕೆ ಹೆಚ್ಚಿಸಲು ಪ್ರತಿಯೊಂದು ಹೋಬಳಿಗೆ ವಿಸ್ತರಣೆ ಮಾಡಿದ್ದೇವೆ. ಅದಕ್ಕೆ ಅಗತ್ಯವಿರುವ ಪೆಟ್ರೋಲ್, ಡೀಸೆಲ್‍ಗೆ ಸಹಾಯಧನ ನೀಡಿದ್ದು, ಈ ಯೋಜನೆಗೆ 600 ಕೋಟಿ ರೂ.ಮೀಸಲಿಡಲಾಗಿದೆ. ಹೈನುಗಾರರ ನೆರವಿಗೆ ‘ಕ್ಷೀರ ಅಭಿವೃದ್ಧಿ ಬ್ಯಾಂಕ್' ಸ್ಥಾಪಿಸುವ ಘೋಷಣೆ ಮಾಡಿದ್ದು, 100 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಇದು ಸರಿಯಾದ ರೀತಿಯಲ್ಲಿ ಮುಂದುವರಿದರೆ ‘ಅಪೆಕ್ಸ್ ಬ್ಯಾಂಕ್'ಗೆ ಪರ್ಯಾಯವಾಗಲಿದೆ' ಎಂದು ಭರವಸೆ ವ್ಯಕ್ತಪಡಿಸಿದರು.

‘ಲಿಂಗತ್ವ ಅಲ್ಪಸಂಖ್ಯಾತರಿಗೂ ಬಜೆಟ್‍ನಲ್ಲಿ ಆದ್ಯತೆ ನೀಡಲಾಗಿದ್ದು, ಅವರಿಗೂ ಮನೆ ಕಟ್ಟಿಸಿಕೊಡುವ ಯೋಜನೆ ಮಾಡುತ್ತಿದ್ದೇವೆ. ಅಂಬೇಡ್ಕರ್ ವಸತಿ ನಿಲಯ, 50 ಕನಕದಾಸ ವಿದ್ಯಾರ್ಥಿ ನಿಲಯ ಹಾಗೂ ಧಾರವಾಡ, ಮೈಸೂರು, ಮಂಗಳೂರು ಹಾಗೂ ಕಲಬುರಗಿಯಲ್ಲಿ ಶಿಕ್ಷಣ ಕೇಂದ್ರ ಸ್ಥಾಪಿಸಲಿದ್ದು, ಅಕ್ಕಪಕ್ಕದ ಜಿಲ್ಲೆಗಳಿಂದ ಆಗಮಿಸುವ ವಿದ್ಯಾರ್ಥಿಗಳ ಒತ್ತಡ ತಗ್ಗಿಸಲು ವಸತಿ ನಿಲಯಗಳ ಸ್ಥಾಪನೆಯಿಂದ ಅನುಕೂಲ ಆಗಲಿದೆ' ಎಂದರು.

‘ರಾಜ್ಯದಲ್ಲೇ ಎನ್‍ಐಟಿ, ಐಐಟಿ ಮಾದರಿಯಲ್ಲೇ ರಾಜ್ಯದ ಆರು ಎಂಜಿನಿಯರಿಂಗ್ ಕಾಲೇಜುಗಳನ್ನು ಮೇಲ್ದರ್ಜೆಗೇರಿಸಿ ಐಐಟಿ ಮಾದರಿಯಲ್ಲೇ ಕೆಐಟಿ ಸ್ಥಾಪಿಸಲಾಗುವುದು. ಮುಂದಿನ ಐದು ವರ್ಷಗಳಲ್ಲಿ ಐಐಟಿ ಗುಣಮಟ್ಟ ನಮ್ಮ ಕಾಲೇಜುಗಳಲ್ಲಿ ಬರಲಿದೆ. ಈ ಪ್ರಯೋಗಕ್ಕೆ ಇಂದೇ ಸಸಿ ನೆಡಲಾಗಿದೆ. ಮುಂದಿನ ದಿನಗಳಲ್ಲಿ ಅದು ನಿಶ್ಚಿತವಾಗಿಯೂ ಫಲ ನೀಡಲಿದೆ' ಎಂದು ಅವರು ಬಣ್ಣಿಸಿದರು.

‘ಅಗತ್ಯ ಸೂಕ್ಷ್ಮ ರೀತಿಯಲ್ಲಿ ಆಲೋಚಿಸಿ ಬಜೆಟ್ ಮಂಡಿಸಿದ್ದು, ಆಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ ನೀಡುತ್ತಿದ್ದ ಮಾಸಾಶನವನ್ನು 10 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ಆಶಾ, ಅಂಗನವಾಡಿ, ಬಿಸಿಯೂಟ, ಗ್ರಾಮ ಸಹಾಯಕರಿಗೆ ಗೌರವ ಧನವನ್ನು ಹೆಚ್ಚಳ ಮಾಡಲಾಗಿದೆ. ಜೊತೆ ಪೌರ ಕಾರ್ಮಿಕರಿಗೆ ಸಂಕಷ್ಟ ಭತ್ಯೆ 2 ಸಾವಿರ ರೂ.ಮಾಡಲಾಗಿದೆ. ಹಿರಿಯ ನಾಗರಿಕರಿಗೆ ಪ್ರಥಮ ಬಾರಿಗೆ ಕಣ್ಣಿನ ತಪಾಸಣೆ, ಉಚಿತ ಶಸ್ತ್ರಚಿಕಿತ್ಸೆ, ಕನ್ನಡಕ ವಿತರಣೆ ಯೋಜನೆ ರೂಪಿಸಲಾಗಿದೆ' ಎಂದು ಅವರು ವಿವರಿಸಿದರು.

ಸಾಲ ಮಾಡಿ ಹೋಳಿಗೆ ತಿಂದಿಲ್ಲ

‘ಕೋವಿಡ್ ಸಂಕಷ್ಟದಿಂದ ಅಬಕಾರಿ ಹೊರತುಪಡಿಸಿ ವಿವಿಧ ಆದಾಯದ ಮೂಲಗಳಿಂದ ಬರಬೇಕಿದ್ದು ಸುಮಾರು 21,835 ಕೋಟಿ ರೂ.ಆರ್ಥಿಕ ಕೊರತೆ ಹಾಗೂ ಕೋವಿಡ್ ನಿರ್ವಹಣೆಗೆ 15,645 ಕೋಟಿ ರೂ.ಗಳ ವೆಚ್ಚದ ಹಿನ್ನೆಲೆಯಲ್ಲಿ ಸಾಲ ಪಡೆಯಬೇಕಾದುದು ಅನಿವಾರ್ಯ ಆಗಿತ್ತು. ಹೀಗಾಗಿ ಸಾಲ ಪಡೆದು ಆರ್ಥಿಕ ನಿರ್ವಹಣೆ ಮಾಡಿದ್ದೇವೆಯೇ ಹೊರತು, ಸಾಲ ಮಾಡಿ ಹೋಳಿಗೆ ತಿಂದಿಲ್ಲ. ನಾವು ರೊಟ್ಟ್ಟಿಯನ್ನಷ್ಟೇ ತಿನ್ನುವವರು. ಜಿಎಸ್ಟಿ ಪರಿಹಾರ ಮೊತ್ತವನ್ನು ವಿಸ್ತರಿಸುವ ಭರವಸೆ ಸಿಕ್ಕಿದೆ. ಜೊತೆಗೆ ರಾಜ್ಯಕ್ಕೆ ಬರಬೇಕಾದ ಅನುದಾನಗಳು ಕೇಂದ್ರದಿಂದ ಸಕಾಲಕ್ಕೆ ಬರುತ್ತಿವೆ. ಕೇಂದ್ರವೂ ರಾಜ್ಯಕ್ಕೆ ಬೆಂಬಲವಾಗಿ ನಿಂತಿದೆ'

-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X